ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆಯಿಂದ ಉಂಟಾಗಿರುವ ನಷ್ಟ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಕಳೆದ 16 ದಿನಗಳ ಕಾಲ ಸುರಿದ ಮಳೆಯಿಂದ ಬಯಲುಸೀಮೆ ಭಾಗದಲ್ಲಿ ತರಕಾರಿ ಬೆಳೆಗಳು ಮಣ್ಣು ಪಾಲಾಗಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.18): ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆಯಿಂದ ಉಂಟಾಗಿರುವ ನಷ್ಟ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಕಳೆದ 16 ದಿನಗಳ ಕಾಲ ಸುರಿದ ಮಳೆಯಿಂದ ಬಯಲುಸೀಮೆ ಭಾಗದಲ್ಲಿ ತರಕಾರಿ ಬೆಳೆಗಳು ಮಣ್ಣು ಪಾಲಾಗಿವೆ. ಅಧಿಕ ಶೀತ, ಹೊಲದಲ್ಲಿ ನಿಂತಿರುವ ನೀರಿನಿಂದ ಬೆಳೆಗಳಿಗೆ ಹಾನಿಯಾಗಿದ್ದು ಆಲೂಗೆಡ್ಡೆ, ಬಟಾಣಿ ಹೊಲದಲ್ಲಿ ರೈತನ ಕಣ್ಣೆದುರೇ ಕೊಳೆತು ಹೋಗುತ್ತಿವೆ.
ಹೊಲದಲ್ಲಿ ನಿಂತಿರುವ ಮಳೆ ನೀರಿನಿಂದ ಬೆಳೆಗಳಿಗೆ ಹಾನಿ: ಮಳೆರಾಯನ ಆರ್ಭಟಕ್ಕೆ ಚಿಕ್ಕಮಗಳೂರು ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ಮಲೆನಾಡಿನಲ್ಲಿ ಕಾಫಿ, ಅಡಿಕೆ, ಮೆಣಸು ಬೆಳೆ ಬೆಳೆಗಾರರು ಆತಂಕಕ್ಕೆ ಒಳಾಗಿದ್ದಾರೆ. ಇತ್ತ ಬಯಲು ಸೀಮೆ ಭಾಗದಲ್ಲಿ ತರಿಕಾರಿ ಬೆಳೆಗಳನ್ನು ಬೆಳೆದ ರೈತನ ಪರಿಸ್ಥಿತಿ ಅತಂತ್ರವಾಗಿದೆ. ಜಿಲ್ಲೆಯ ಬಯಲು ಭಾಗದಲ್ಲಿ ಹಲವು ತರಕಾರಿ ಬೆಳೆಗಳನ್ನು ಬೆಳೆಯತ್ತಾರೆ, ಆಲೂಗೆಡ್ಡೆ, ಬಟಾಣಿಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಆಲೂಗೆಡ್ಡೆಯನ್ನು ಸರಿ ಸುಮಾರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದು, ಬೆಳೆ ಸಂಪೂರ್ಣವಾಗಿ ಮಣ್ಣು ಪಾಲಾಗುತ್ತಿದೆ.
ಮಲೆನಾಡಿನ ಅತಿವೃಷ್ಠೀ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ: ಪರಿಶೀಲನೆ
ಜಿಲ್ಲೆಯ ತರಿಕೆರೆ, ಲಿಂಗದಹಳ್ಳಿ, ಅಂಬಳೆ, ಬೀಕನಹಳ್ಳಿ, ಹಂಪಾಪುರ, ಮುಂತಾದ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತಿದೆ. ಈ ಭಾಗದ ರೈತರು ಈ ಬಾರಿ ಹಾಸನದಿಂದ ಉತ್ತಮ ತಳಿ ಆಲೂಗಡ್ಡೆಯ ಬೀಜವನ್ನು ದುಬಾರಿ ಹಣ ನೀಡಿ ಬಿತ್ತನೆ ಮಾಡಿದ್ರು. ಸಾಲ ಸೋಲ ಮಾಡಿ ಔಷಧಿಯನ್ನು ಹಾಕಿದ್ದರು, ಆದ್ರೆ ಬಿತ್ತನೆ ಮಾಡಿದ ಬೀಜದ ಬೆಲೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಯಲು ಭಾಗದಲ್ಲೂ ಅಧಿಕ ಶೀತ, ಹೊಲದಲ್ಲಿ ನಿಂತಿರುವ ನೀರಿನಿಂದ ಬೆಳೆಗಳಿಗೆ ಹಾನಿಯಾಗಿದ್ದು ಆಲೂಗೆಡ್ಡೆ, ಬಟಾಣಿ ಹೊಲದಲ್ಲಿ ರೈತನ ಕಣ್ಣೆದುರೇ ಕೊಳೆತು ಹೋಗುತ್ತಿವೆ.
ಹೊಲದಲ್ಲಿ ನಿಂತಿರುವ ಮಳೆ ನೀರಿನಿಂದ ಬೆಳೆಗಳಿಗೆ ಹಾನಿಯಾಗಿವೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತಾಡಿದ ಶಂಕರಪ್ಪ ಬೀಕನಹಳ್ಳಿ ಭಾಗದಲ್ಲಿ ಆಲೂಗೆಡ್ಡೆ, ಬಟಾಣಿ ಬೆಳೆ ಬೆಳೆದ ರೈತರು ಆತಂಕಕ್ಕೆ ಹಿಡಿಯಾಗಿದ್ದಾರೆ. ಅಧಿಕ ಮಳೆಯಿಂದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಸರ್ಕಾರ ಸಮೀಕ್ಷೆ ನಡೆಸಿ ಸಂಪರ್ಕವಾಗಿ ಪರಿಹಾರವನ್ನು ನೀಡಬೇಕೆಂಬ ಆಗ್ರಹ ಮಾಡಿದ್ದಾರೆ.
ನೆಲಕಚ್ಚಿದ ಕಾಫಿ, ಅಡಿಕೆ, ಕಾಳು ಮೆಣಸಿನ ಬೆಳೆಗಳು: ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿಗೆ ಅಧಿಕ ಮಳೆ, ಶೀತದಿಂದ ಕೊಳೆ ರೋಗ ತಗುಲಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಮಳೆಯೊಂದಿಗೆ ಶೀತವಾತಾವರಣ ಕಾಳು ಮೆಣಸು ಹಾಗೂ ಅಡಕೆ ಬೆಳೆ ಮೇಲೆ ಸಂಪೂರ್ಣ ಹಾಳಾಗಲಿದೆ. ಮಳೆಗೆ ಕಾಫಿ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಕೊಳೆ ಕಾಫಿ ಗಿಡಗಳ ಎಲೆ ಉದುರುತ್ತಿವೆ. ಇದರ ಜತೆ ಈ ವರ್ಷ ಕಾಫಿ ಕಾಯಿಗಳು ಉದುರುತ್ತಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಇಳಿಜಾರು ಭಾಗದಲ್ಲಿರುವ ಕಾಫಿ ಚಿಕ್ಕಮಗಳೂರು ತೋಟಗಳಿಗೆ ಹೆಚ್ಚಿನ ಮಟ್ಟದ ಹಾನಿಯಾಗಿಲ್ಲ, ಕಾಫಿ ಫಸಲು ಕೂಡ ಹೆಚ್ಚು ಉದುರುತ್ತಿಲ್ಲ. ಆದರೆ ಸಮತಟ್ಟು ಜಾಗದಲ್ಲಿರುವ ಕಾಫಿ ತೋಟಗಳಲ್ಲಿನ ಫಸಲು ನೆಲಕಚ್ಚುತ್ತಿದೆ. ಕೆಲವು ಕಾಫಿ ಬೆಳೆಗಾರರು ಮುಂಜಾಗ್ರತಾ ಕ್ರಮವಾಗಿ ಕಾಫಿ ಗಿಡ ಹಾಗೂ ಕಾಳು ಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸಿದ್ದಾರೆ.
Chikkamagaluru: ಮಲೆನಾಡಿನಲ್ಲಿ ಮಹಾಮಳೆಯಿಂದ ತತ್ತರಿಸಿದ ಜನರು: ಕುಸಿದ ಶಾಲಾ ಕೊಠಡಿ
ವರ್ಷದ ಫಸಲು ಕೈತಪ್ಪುವ ಆತಂಕ: ಕವಿಯುತ್ತಿರುವ ಮಂಜು ಕಾಳುಮೆಣಸು ಹಾಗ ದುಷ್ಪರಿಣಾಮ ಬೀರುತ್ತಿದೆ. ಕಾಳು ಮೆಣಸು ತೆನೆ ತಿರುಗಿ ನೆಲಕಚ್ಚುತ್ತಿವೆ. ಬಹುತೇಕ ತೋಟಗಳಲ್ಲಿ ಫಸಲು ಹಲವು ರೋಗಗಳಿಗೆ ತುತ್ತಾಗಿ ಬೀಳುಗಲ್ಲಿ ಇರುವ ಮೆಣಸಿನ ಬಳ್ಳಿಗಳು ಹವಾಮಾನವೈಪರಿತ್ಯದಿಂದ ಹಾಳಾಗುತ್ತಿವೆ. ಅಡಕೆ ಮರದಲ್ಲಿ ಎಳೆಯ ಉದುರುತ್ತಿದ್ದು, ಈ ವರ್ಷದ ಫಸಲು ಕೈತಪ್ಪಲಿ ಭೀತಿ ಎದುರಾಗಿದೆ. ನಿರಂತರ ಮಳೆಯಿಂದಾಗಿ ಮಲೆನಾಡು ದಿನೇ ದಿನೇ ನಲುಗುತ್ತಿದೆ.