ರಾಯಚೂರು: ಆ್ಯಂಬುಲೆನ್ಸ್‌ನಲ್ಲೇ ಹೆಣ್ಣು ‌ಮಗುವಿಗೆ ಜನ್ಮ ನೀಡಿದ ತಾಯಿ

Published : Jun 01, 2023, 10:00 AM IST
ರಾಯಚೂರು: ಆ್ಯಂಬುಲೆನ್ಸ್‌ನಲ್ಲೇ ಹೆಣ್ಣು ‌ಮಗುವಿಗೆ ಜನ್ಮ ನೀಡಿದ ತಾಯಿ

ಸಾರಾಂಶ

ಆ್ಯಂಬುಲೆನ್ಸ್‌ನಲ್ಲಿಯೇ ರೇಣುಕಾ ಅವರಿಗೆ ಹೆರಿಗೆ ಮಾಡಿದ ನರ್ಸ್ ಲಕ್ಷ್ಮಿ, ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಸಿರವಾರ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. 

ರಾಯಚೂರು(ಜೂ.01): ಗರ್ಭಿಣಿಯೊಬ್ಬರು ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ‌ಮಗುವಿನ ಜನ್ಮ ನೀಡಿದ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕುರುಕುಂದಾ ಗ್ರಾಮದ ಬಳಿ ನಡೆದಿದೆ. ಈ ಮೂಲಕ 108 ಸಿಬ್ಬಂದಿ  ತಾಯಿ ಮತ್ತು ‌ಮಗುವಿನ ಜೀವವನ್ನ ಕಾಪಾಡಿದ್ದಾರೆ. 

ಕುರುಕುಂದಾ ಗ್ರಾಮದ ರೇಣುಕಾ ಎಂಬುವರು ಹೆರಿಗೆ ನೋವಿನಿಂದ ನರಳಾಟ ನಡೆಸಿದ್ರು, ಹೀಗಾಗಿ ರೇಣುಕಾ ಅವರನ್ನ 108ನಲ್ಲಿ ಸಿರವಾರ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. 

ಸಮಯಪ್ರಜ್ಞೆ ಮೆರೆದು ಗರ್ಭಿಣಿಗೆ ದಾರಿ ಮಧ್ಯೆ ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ ಸಿಬ್ಬಂದಿಗಳು

ಕೂಡಲೇ ನರ್ಸ್ ಲಕ್ಷ್ಮಿ ಆ್ಯಂಬುಲೆನ್ಸ್‌ನಲ್ಲಿಯೇ ರೇಣುಕಾ ಅವರಿಗೆ ಹೆರಿಗೆ ಮಾಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಸಿರವಾರ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

PREV
Read more Articles on
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ