ಕೊಪ್ಪಳದಲ್ಲಿ ಲೋಕಾಯುಕ್ತರ ದಾಳಿ ಪ್ರಕರಣ: ಇಂದೂ ಕೂಡ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ

By Girish Goudar  |  First Published Jun 1, 2023, 9:05 AM IST

ಲೋಕಾಯುಕ್ತ ಅಧಿಕಾರಿಗಳು ಚಿಂಚೋಳಿರನ್ನ ಕಲ್ಬುರ್ಗಿಯಿಂದ ಕೊಪ್ಪಳಕ್ಕೆ ಕರೆತಂದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ತಡರಾತ್ರಿಯಿಂದ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ. 


ಕೊಪ್ಪಳ(ಜೂ.01): ಕೊಪ್ಪಳದಲ್ಲಿ ಲೋಕಾಯುಕ್ತರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ(ಗುರುವಾರ) ಕೂಡ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಕಾರ್ಯವನ್ನ ಮುಂದುವರೆಸಿದ್ದಾರೆ. ನಿನ್ನೆ(ಬುಧವಾರ) ಕೊಪ್ಪಳದ ಕೆಆರ್ ಐಡಿಎಲ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. 

ನಿನ್ನೆ ಬೆಳಿಗ್ಗೆ 6 ಗಂಟೆಗೆ ಕೆಆರ್ ಐಡಿಎಲ್ ಕಚೇರಿ ಮೇಲೆ ಲೋಕಾಯುಕ್ತರ ತಂಡ ದಾಳಿ ಮಾಡಿತ್ತು. ಕೆಆರ್ ಐಡಿಎಲ್ ನ ಇಇ ಝೆಡ್ ಎಂ. ಚಿಂಚೋಳಿಕರ್ ಕಚೇರಿ ಮೇಲೆ ದಾಳಿ ಮಾಡಿದ್ದು, ತಡರಾತ್ರಿ 1 ಗಂಟೆಗೆ ಕೊಪ್ಪಳದ ಮನೆಗೆ ಚಿಂಚೋಳಿಕರ್ ಆಗಮಿಸಿದ್ದರು. 

Tap to resize

Latest Videos

undefined

ಬೆಳ್ಳಂಬೆಳಗ್ಗೆ ಲೋಕಾಯುಕ್ತರ ಶಾಕ್: ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ

ಲೋಕಾಯುಕ್ತ ಅಧಿಕಾರಿಗಳು ಚಿಂಚೋಳಿರನ್ನ ಕಲ್ಬುರ್ಗಿಯಿಂದ ಕೊಪ್ಪಳಕ್ಕೆ ಕರೆತಂದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ತಡರಾತ್ರಿಯಿಂದ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ. 

ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಚಿಂಚೋಳಿಕರ್ ಮನೆ ಇಂಚಿಂಚು ಪರಿಶೀಲನೆ ಮಾಡುತ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. ಲೋಕಾಯುಕ್ತಾ ಡಿವೈಎಸ್‌ಪಿ ಸಲೀಂಪಾಷಾ ಅವರ ನೇತೃತ್ವದಲ್ಲಿ ದಾಳಿ ಪರಿಶೀಲನೆ ನಡೆಯುತ್ತಿದೆ. 

click me!