ಚಾಮರಾಜನಗರ ಜಿಲ್ಲೆಯ ಗಡಿ ತಾಲ್ಲೂಕು ಹನೂರಿನಲ್ಲಿಂದು ಬೃಹತ್ ಉದ್ಯೋಗ ಮೇಳ ನಡೆದು ಸಾವಿರಾರು ನಿರುದ್ಯೋಗಿಗಳು ಭಾಗವಹಿಸುವ ಮೂಲಕ ಮೇಳವನ್ನು ಯಶಸ್ವಿಗೊಳಿಸಿದರು.
ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಮಾ.25): ಜಿಲ್ಲೆಯ ಹನೂರಿನಲ್ಲಿ ಇಂದು ಜನಧ್ವನಿ ಟ್ರಸ್ಟ್‌ನ ಸಂಸ್ಥಾಪಕ ವೆಂಕಟೇಶ್ ಬೃಹತ್ ಉದ್ಯೋಗ ಮೇಳ ಏರ್ಪಡಿಸಿದ್ದು, ಹನೂರು ಭಾಗದ ನೂರಾರು ಮಂದಿ ಯುವಕ ಯುವತಿಯರಿಗೆ ಉದ್ಯೋಗ ದೊರಕುವಂತೆ ಮಾಡಿದರು. ಹೌದು! ಒಂದೆಡೆ ಪರಿಮಳ ನಾಗಪ್ಪ ಪುತ್ರ ಪ್ರೀತಂ ನಾಗಪ್ಪ ಮತ್ತೊಂದೆಡೆ ಜನಧ್ವನಿ ವೆಂಕಟೇಶ್ ಟಿಕೆಟ್‌ಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದು ಈ ನಡುವೆ ಶುಕ್ರವಾರ ಹನೂರು ಪಟ್ಟಣದಲ್ಲಿ ವೆಂಕೆಟೇಶ್ ಬೃಹತ್ ಉದ್ಯೋಗ ಮೇಳ ಆಯೋಜಿಸಿ ವರಿಷ್ಠರ ವಿಶ್ವಾಸ ಗೆಲ್ಲಿಸಲು ಬೆವರು ಹರಿಸಿದ್ದಾರೆ.
undefined
ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿ ಗಳಿಂದ ನೂರಾರು ಮಂದಿಗೆ ನೌಕರಿ ಕೊಡಿಸುವ ಜೊತೆಗೆ ಪಕ್ಷಕ್ಕೂ ಇಂದು ವೆಂಕಟೇಶ್ ಮೈಲೇಜ್ ತಂದುಕೊಡುವ ಕೆಲಸ ಮಾಡಿದ್ದು ಉದ್ಯೋಗ ಮೇಳದ ಸ್ಟಾಲ್ ಗಳಲ್ಲಿ ಕೇಸರಿಮಯ ವಾತಾವರಣ ಸೃಷ್ಟಿಸುವ ಮೂಲಕ ರಾಜಕಾರಣಿಗಳು, ಕಾರ್ಯಕರ್ತರು ಹುಬ್ಬೇರಿಸುವಂತೆ ಮಾಡಿದ್ದಾರೆ. ಇಂದು ಆಯೋಜನೆಯಾಗಿದ್ದ ಉದ್ಯೋಗ ಮೇಳದಲ್ಲಿ ಆಕ್ಸಿಸ್, ಎಚ್ಡಿಎಫ್ಸಿ, ಇನ್ಫೋಸಿಸ್, ವಿಪ್ರೋ, ಬಜಾಜ್, ಮುತ್ತೂಟ್, ವರ್ಕ್ ಫಾರ್ ನೀಡಿ, ವೈದ್ಯಕೀಯ ಸಂಸ್ಥೆಗಳು ಸೇರಿದಂತೆ 140 ಕಂಪನಿಗಳು ಮೇಳದಲ್ಲಿ ಭಾಗಿಯಾಗಿದ್ದವು. ಇವುಗಳಿಗೆ , 20 ಮಂದಿ ಅಂಗವಿಕಲರು, 50 ಮಂದಿ ಯುವತಿಯರು ಸೇರಿದಂತೆ ನೂರಾರು ಮಂದಿಗೆ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರದಲ್ಲಿ ನೌಕರಿ ಸಿಕ್ಕಿದೆ.
ಮಂಗಳೂರಿನಲ್ಲಿ ಉದ್ಯೋಗ ಮೇಳ ಉದ್ಘಾಟನೆ, ಈ ವರ್ಷ 36 ಸಾವಿರಕ್ಕೂ ಹೆಚ್ಚು ಯುವಜನರಿಗೆ ಕೆಲಸ
ಇನ್ನು, ಉದ್ಯೋಗ ಮೇಳದ ಬಗ್ಗೆ ಆಯೋಜಕ ಜನಧ್ವನಿ ವೆಂಕಟೇಶ್ ಮಾತನಾಡಿ, ಒಂದೇ ವೇದಿಕೆಯಲ್ಲಿ 140 ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿ ತಾಲೂಕಿನ 1750 ಮಂದಿ ಉದ್ಯೋಗ ಆಕಾಂಕ್ಷಿಗಳಲ್ಲಿ ಸುಮಾರು 750 ಜನರಿಗು ಹೆಚ್ಚು ಮಂದಿಗೆ ಉದ್ಯೋಗ ಸಿಕ್ಕಿದೆ. ಕೊರೊನಾ ನಂತರದ ದಿನಗಳಲ್ಲಿ ಉದ್ಯೋಗಾವಕಾಶಕ್ಕೆ ಅಲೆದಾಡುತ್ತಿದ್ದ ಯುವಜನತೆ ಇದನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಹನೂರು ತಾಲೂಕಿನಲ್ಲಿ ಹುಟ್ಟಿದ್ದೇನೆ, ತಾಲೂಕಿನ ಜನರಿಗಾಗಿ ಕೈಲಾದಷ್ಟು ಸೇವೆ ಮಾಡುತ್ತಿದ್ದೇನೆಂದರು.
ಬೆಂಗಳೂರಿನಲ್ಲಿ ಮಾರ್ಚ್ 27ರಂದು ಉದ್ಯೋಗ ಮೇಳ: ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ 18ರಿಂದ 25 ವರ್ಷದ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ದಿನಾಂಕ ಮಾರ್ಚ್ 27ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ರಾಜರಾಜೇಶ್ವರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಬೆಂಗಳೂರು ದಕ್ಷಿಣ ತಾಲೂಕು ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳು ಕನಿಷ್ಠ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಹೊಂದಿರಬೇಕು.
Job Fair 2,240 ಉದ್ಯೋಗ ಭಾಗ್ಯ ಕೊಟ್ಟ ಕಲಬುರಗಿ ಉದ್ಯೋಗ ಮೇಳ
ಪಿಯುಸಿ, ಐಟಿಐ, ಡಿಪ್ಲೋಮ, ಬಿಕಾಂ, ಬಿಬಿಎ, ಬಿಎ, ಬಿಸಿಎ, ಬಿಇ, ಎಂಕಾಂ, ಎಂಬಿಎ, ಎಂಎ, ಎಂಸಿಎ ಪದವಿಗಳನ್ನು ಹೊಂದಿದ ಉದ್ಯೋಗಕಾಂಕ್ಷಿಗಳಿಗೆ ಒಂಭತ್ತು ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳಾದ ಮುತ್ತೂಟ್ ಗ್ರೂಪ್, ಎಚ್ ಡಿ ಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್,ಯುರೇಕಾ ಫೋರ್ಬ್ಸ್, ಟೀಮ್ ಲೀಸ್, ಯು ಟಿ ಎಲ್ ಟೆಕ್ನಾಲಜಿ ಲಿಮಿಟೆಡ್, ಜಸ್ಟ್ ಡಯಲ್, ಇಂಪ್ಯಾಕ್ಟ್, ರಿಲೆಯನ್ಸ್ ಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಅವಕಾಶ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9964907444 / 7975014738 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಗಪ್ಪರವರು ತಿಳಿಸಿದ್ದಾರೆ.