Kolar: ಟೊಮೆಟೊ ಬೆಲೆ ಕುಸಿತ: ರೈತರ ಗೋಳು ಕೇಳೋರಿಲ್ಲ!

By Suvarna News  |  First Published Mar 25, 2022, 10:01 PM IST

ಅದು ಏಷ್ಯಾದ ಎರಡನೇ ಅತೀ ದೊಡ್ಡ ಟೊಮೊಟೋ ಮಾರುಕಟ್ಟೆ, ಎಂತಹ ಸಂದಭ೯ದಲ್ಲೂ ಅಲ್ಲಿ ಟೊಮೊಟೊ ಲಭ್ಯವಿರುತ್ತೆ. ರೈತರು ಸಹ ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೇ ಸದಾ ಬೆಳೆ ಬೆಳೆಯುತ್ತಾರೆ. ಆದರೆ ಏನೂ ಪ್ರಯೋಜನಾ ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲಾ. ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ.


ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯುಸ್ ಕೋಲಾರ

ಕೋಲಾರ (ಮಾ.25): ಅದು ಏಷ್ಯಾದ ಎರಡನೇ ಅತೀ ದೊಡ್ಡ ಟೊಮೊಟೋ (Tomato) ಮಾರುಕಟ್ಟೆ, ಎಂತಹ ಸಂದಭ೯ದಲ್ಲೂ ಅಲ್ಲಿ ಟೊಮೊಟೊ ಲಭ್ಯವಿರುತ್ತೆ. ರೈತರು (Farmers) ಸಹ ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೇ ಸದಾ ಬೆಳೆ ಬೆಳೆಯುತ್ತಾರೆ. ಆದರೆ ಏನೂ ಪ್ರಯೋಜನಾ ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲಾ. ಯಾಕೆ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ.

Tap to resize

Latest Videos

ಎತ್ತ ಕಣ್ಣಾಯಿಸಿದರೂ ಟೊಮೊಟೊ ಬೆಳೆ. ವ್ಯಾಪಾರವಿಲ್ಲದೆ ಕಂಗಾಲಾಗಿರುವ ರೈತರು. ರಸ್ತೆ ಪಕ್ಕದಲ್ಲೇ ಟೊಮೊಟೊ ಸುರಿದು ಹೋಗ್ತಿರುವ ರೈತರು. ಅಂದಹಾಗೆ ಇವೆಲ್ಲಾ ದೃಶ್ಯಗಳು ನಮಗೆ ಕಂಡುಬಂದಿದ್ದು ಕೋಲಾರ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಏಷ್ಯಾದ ಎರಡನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆಯಲ್ಲಿ. ಸಾಲಾಸೋಲ ಮಾಡಿಕೊಂಡು ಲಕ್ಷಾಂತರ ರುಪಾಯಿ ಖಚು೯ ಮಾಡಿ ಟೊಮೊಟೊ ಬೆಳೆದಿರುವ ಕೋಲಾರ ಭಾಗದ ರೈತರಿಗೆ ಅಕ್ಷರಸಹ ಬರಸಿಡಿಲು ಬಡಿದಂತ್ತಾಗಿದೆ. ಇಷ್ಟು ದಿನಗಳಿಂದ 15 ಕೆಜಿಯ ಪ್ರತಿ ಟೊಮೊಟೊ ಬಾಕ್ಸ್‌ನ ಮೇಲೆ 200 ರಿಂದ 300ರುಪಾಯಿವರೆಗೂ ಮಾರಟವಾಗುತ್ತಿತ್ತು. 

Davanagere: ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ರಂಭಾಪುರಿ ಶ್ರೀ!

ಇರೋದ್ರಲ್ಲಿ ಒಳ್ಳೆ ಬೆಲೆ ಸಿಗ್ತಿದೆ ಅಂತ ಟೊಮೊಟೊ ಬೆಳೆದು ಮಾರಾಟ ಮಾಡೋದಕ್ಕೆ ಬಂದಿರುವ ರೈತರಿಗೆ ದಿಡೀರ್ ಬೆಲೆ ಕುಸಿದಿರೋದು ಕೇಳಿ ಶಾಕ್ ಆಗಿದೆ. ಹಾಕಿರುವ ಬಂಡವಾಳ ಸಹ ಸಿಗದೆ ಇರೋದಕ್ಕೆ ರಸ್ತೆಯಲ್ಲೇ ಸುರಿದು ಹೋಗ್ತಿದ್ದಾರೆ. ಹೌದು! ಪ್ರತಿ 15 ಕೆಜಿಯ ಬಾಕ್ಸ್ 15 ರಿಂದ 30ರುಪಾಯಿ ವರೆಗೂ ಮಾರಾಟವಾಗ್ತಿದೆ. ಇದು ರೈತನು ಹಾಕಿರೋ ಬಂಡವಾಳ ಸಹ ವಾಪಸ್ಸು ಸಿಗ್ತಿಲ್ಲ. ಪ್ರತಿ ಎಕರೆಗೆ ಗೊಬ್ಬರ,ಔಷಧಿ,ಟೊಮೊಟೊ ನಾರುಗಳ ಜೊತೆ ಕೂಲಿಗಾರರ ಖಚು೯ಗಳು ಸೇರಿ ಏನಿಲ್ಲಾ ಅಂದ್ರೂ 1 ಲಕ್ಷದ 20 ಸಾವಿರವರೆಗೂ ಬರುತ್ತೆ, ಆದರೆ ರೈತನಿಗೆ ಕನಿಷ್ಟ 1 ಲಕ್ಷವೂ ಸಿಗುತ್ತಿಲ್ಲ

ಹೀಗಾಗಿ ಏನೂ ಮಾಡಬೇಕು ಅಂತ ದಿಕ್ಕು ತೋಚದೇ ಇರುವ ಪರಸ್ಥಿತಿಗೆ ರೈತರು ತಲುಪಿದ್ದಾರೆ.ಮಂಡಿ ಮಾಲೀಕರನ್ನ,ವ್ಯಾಪಾರಸ್ಥರನ್ನು ಕೇಳಿದ್ರೇ ಬೇಕಾದ್ರೆ ವ್ಯಾಪಾರ ಮಾಡಿ ಇಲ್ಲಾಂದ್ರೆ ಹೋಗಿ ಎಂದು ಕಳಿಸ್ತಿದ್ದಾರೆ.ಇನ್ನು ದಿಡೀರನೆ ಟೊಮೊಟೊ ಬೆಲೆ ಕುಸಿಯಲು ಪ್ರಮುಖ ಕಾರಣ ಹವಮಾನ ವೈಪರಿತ್ಯ, ಹೌದು! ಈಗಾಗಲೇ ಬೇಸಿಗೆ ಆರಂಭವಾಗಿದ್ದು ತಾಪಾಮಾನ ಹೆಚ್ಚಾಗಿದೆ. ಇದರ ನಡುವೆ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಗಾಳಿ ಸಹಿತ ಮಳೆ ಬಿದ್ದು ಉತ್ತಮ್ಮ ಗುಣಮಟ್ಟದ ಟೊಮೊಟೊ ಸಿಗ್ತಿಲ್ಲಾ,ಇದರ ನಡುವೆ ಮೊದಲು ಬೇರೆ ಬೇರೆ ರಾಜ್ಯದವ್ರೂ ಕೋಲಾರ ಮಾರುಕಟ್ಟೆಯ ಮೇಲೆ ಅವಲಂಭಿತರಾಗಿದರು.

Bagalkote: ರಂಗನಾಥ ಸ್ವಾಮಿಗೆ ಇಲ್ಲಿ ಸಾರಾಯಿ ನೈವೇದ್ಯ: ಮದ್ಯ ನೈವೇದ್ಯ ಸಲ್ಲಿಸಿ ಕೃತಾರ್ಥರಾಗ್ತಾರೆ ಭಕ್ತವೃಂದ

ಈಗ ಆಯಾ ಭಾಗಗಳಲ್ಲೇ ಟೊಮೊಟೊ ಬೆಳೆದು ಮಾರಾಟ ಮಾಡ್ತಿರೋದ್ರಿಂದ ಬೇಡಿಕೆ ಸಹ ಕಡಿಮೆ ಆಗಿದೆ. ಹೀಗಾಗಿ ದಿಢೀರನೆ ಟೊಮೊಟೊ ಬೆಲೆ ಕುಸಿದಿದ್ದು, ರೈತನ ಗೋಳು ಕೇಳೋರಿಲ್ಲಾ ಎನ್ನುವಂತ್ತಾಗಿದೆ. ಕೊಳೆತ ಟೊಮೊಟೊಗಳನ್ನು ಸಾಸ್ ಹಾಗೂ ಜ್ಯೂಸ್ ತಯಾರಿಕಾ ಕಾಖಾ೯ನೆಗಳು ಕೊಳ್ಳುತ್ತಿದ್ದು, ಗುಣಮಟ್ಟದ ಟೊಮೊಟೊಗೂ ಬೇಡಿಕೆ ಕಡಿಮೆ ಆಗಿದೆ. ಅದೇನೆ ಇರಲಿ ನಾವು ರೈತರ ಪರ ಅಂತ ಬಡಾಯಿ ಕೊಚ್ಚಿಕೊಳ್ಳುವ ಸಕಾ೯ರ ಇನ್ನಾದರೂ ಇತ್ತ ಗಮನಹರಿಸಿ ಬೆಂಬಲ ಬೆಲೆ ಕನಿಷ್ಟ ಬೆಲೆ ನಿಗದಿ ಮಾಡಬೇಕಿದೆ. ಇಲ್ಲವಾದರೆ ಅನ್ನದಾತನ ಬದುಕು ಬೀದಿ ಪಾಲಾಗೋದರಲ್ಲಿ ಅನುಮಾನವಿಲ್ಲ.

click me!