ದಾವಣಗೆರೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಶ್ರೀ ಅಡ್ಡಪಲ್ಲಕ್ಕಿ ಉತ್ಸವ ಧರ್ಮ ಜನ ಜಾಗೃತಿ ಸಭೆ ನಡೆದಿದೆ.
ದಾವಣಗೆರೆ (ಮಾ.25): ದಾವಣಗೆರೆ ತಾಲೂಕಿನ ಹೂವಿನಮಡು ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ (Rambhapuri Swamiji) ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಶ್ರೀ ಅಡ್ಡಪಲ್ಲಕ್ಕಿ ಉತ್ಸವ ಧರ್ಮ ಜನ ಜಾಗೃತಿ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಸಿದ್ದರಾಮಯ್ಯನವರಿಗೆ (Siddaramaiah) ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಹಿಜಾಬ್ (Hijab) ವಿಚಾರದಲ್ಲಿ ಇಲ್ಲ ಸಲ್ಲದ ಮಾತುಗಳನ್ನಾಡಿದ್ದಾರೆ. ಇದು ಪಕ್ಷದ ಗೌರವ ಘನ ವರ್ಚಸ್ಸಿಗೆ ಧಕ್ಕೆ ತರುವ ವಿಚಾರವಾಗಿದೆ. ಪೇಟಾ ಹಾಗೂ ಬಟ್ಟೆ ವಿಚಾರವಾಗಿ ಪ್ರಬಲ ರಾಜಕಾರಣಿ ಹೇಳುವುದು ಸರಿಯಲ್ಲ.
ವಿವಿಧತೆಯಲ್ಲಿ ಏಕತೆಯನ್ನು ಬೆಳೆಸುವ ಕೆಲಸ ರಾಜಕಾರಣಿಗಳು ಮಠಾಧೀಶರು, ಮಾಡಬೇಕು. ರಾಜಕೀಯ ಲಾಭಕ್ಕಾಗಿ ಓಲೈಕೆಗಾಗಿ ಈರೀತಿ ಕ್ಷುಲ್ಲಕ ಹೇಳಿಕೆ ನೀಡುವುದು ಸರಿಯಲ್ಲ. ಇದು ಜಾತಿ ಜಾತಿಗಳ ನಡುವೆ ಘರ್ಷಣೆಗೆ ದಾರಿಯಾಗುತ್ತದೆ. ಅವರವರ ಪರಂಪರೆ ಆಚರಣೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟಿದ್ದರು.ಮನೆಯಲ್ಲಿ ತಮ್ಮ ತಮ್ಮ ಧರ್ಮವನ್ನು ಆಚರಣೆ ಮಾಡುವುದು ತಪ್ಪೇನಿಲ್ಲ. ಸಾರ್ವತ್ರಿಕ ಬದುಕಿನಲ್ಲಿ, ಶೈಕ್ಷಣಿಕ ಬದುಕಿನಲ್ಲಿ ಕೋರ್ಟ್ ಸಮವಸ್ತ್ರ ಕಡ್ಡಾಯ ಎಂದು ಕೋರ್ಟ್ ಹೇಳಿದೆ. ಕೆಲ ಜನರು ಪ್ರಚೋಧನಕಾರಿ ಹೇಳಿಕೆ ಕೊಡುವುದು ಸರಿಯಲ್ಲ ಕೋರ್ಟ್ ಅದೇಶ ಪಾಲನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ.
ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಆತ್ಮವಲೋಕನ ಮಾಡಿಕೊಳ್ಳಬೇಕು.ಒಂದು ವರ್ಷದೊಳಗೆ ಚುನಾವಣೆ ಬರಲಿದೆ. ಈ ಹಿಂದೆ ವೀರಶೈವ ಲಿಂಗಾಯತ ಇಬ್ಬಾಗ ಮಾಡಲು ಹೋಗಿ ಕಾಂಗ್ರೆಸ್ ಪೆಟ್ಟು ತಿದಿದ್ದೀರಿ. ಮತ್ತೆ ಈ ರೀತಿ ವಿವಾದದ ಮೂಲಕ ಹೇಳಿ ಜನರ ಭಾವನೆ ಕಡೆಸುವುದು ಸರಿಯಲ್ಲ.ಎಲ್ಲಾ ಮಠಾಧೀಶರು ಈ ಬಗ್ಗೆ ಹೇಳಿಕೆ ಕೊಡಬಹುದು ಎಂದು ಕರೆ ನೀಡಿದ ಜಗದ್ಗುರುಗಳು ಸ್ವಾಮೀಜಿ ಪೇಠ ಧರಿಸುವುದು ಈಗಿನದಲ್ಲ. ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ತಲೆ ಮೇಲೆ ಕಟ್ಟುವಂತಹ ಗೌರವಾನ್ವಿತ ಸಂಕೇತವಾಗಿದೆ. ಸ್ವಾಮಿ ವಿವೇಕಾನಂದ ಕೂಡ ಪೇಟವನ್ನು ಧರಿಸಿದ್ದರು ಅದನ್ನು ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ರಂಭಾಪುರಿ ಜಗದ್ಗುರು ಪೀಠ ಭಾವೈಕ್ಯತೆ ಬೆಳೆಸುವ ಕೆಲಸ ಮಾಡುತ್ತಿದೆ
ಧಾರ್ಮಿಕ ಸ್ಥಳಗಳಲ್ಲಿ ಅನ್ಯ ಧರ್ಮಿಯರ ವ್ಯಾಪಾರದ ವಿಚಾರ: ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂರ ವ್ಯಾಪಾರ ವಹಿವಾಟು ನಿಷೇಧ ಹಿನ್ನಲೆಯಲ್ಲಿ ನಿನ್ನೆ ಕಾನೂನು ಸಚಿವರು ಹೇಳಿಕೆ ನೀಡಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಹಿಂದೂ ಸಂಘ ಸಂಸ್ಥೆಗಳಲ್ಲಿ ಹಿಂದುಯೇತರರಿಗೆ ಅವಕಾಶ ಇಲ್ಲ ಎಂದು ಕಾನೂನು ಇತ್ತು. ಈಗ ಅದನ್ನು ತಡೆಹಿಡಿದಿದ್ದಾರೆ ಎಂದು ಹೇಳುವ ಆರ್ಥ ಇಲ್ಲ ಎಂದ ಸ್ವಾಮೀಜಿ ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದು ಮಾಡುವ ಪ್ರವೃತ್ತಿ ಇತ್ತಿಚಿಗೆ ನಡೆಯುತ್ತಿದೆ. ಧಾರ್ಮಿಕ ಸ್ಥಳಗಳನ್ನು ಹೊರತುಪಡಿಸಿ ಬೇರೆ ಬೇರೆ ವೃತ್ತಿ ಮಾಡುವ ದುಡಿಯುವ ವರ್ಗಕ್ಕೆ ತೊಂದರೆ ಉಂಟಾಗಬಾರದು ಎನ್ನುವುದು ನಮ್ಮ ಕಳಕಳಿ ಎಂದರು.
Karnataka Politics: ಬಿಜೆಪಿಯಿಂದ ಭಾವನಾತ್ಮಕ ರಾಜಕಾರಣ: ಸಿದ್ದರಾಮಯ್ಯ
ರೇಣುಕಾರಾಧ್ಯರ ಜಯಂತಿ ಆಚರಣೆ ನಿರ್ಧಾರಕ್ಕೆ ಸಿಎಂ ಬೊಮ್ಮಾಯಿಗೆ ಅಭಿನಂದನೆ: ಮಹಾಪುರುಷ ಜಯಂತಿ ಆಚರಣೆ ಪಟ್ಟಿಯಲ್ಲಿ ರೇಣುಕಾರಾಧ್ಯರ ಜಯಂತಿ ಸೇರಿಸಿ ಅಧಿಕೃತವಾಗಿ ಸೇರಿಸಲಾಗಿದೆ.ಈ ಬಗ್ಗೆ ಸರ್ಕಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದೆ.ಪೀಠದ ಕಾರ್ಯಕ್ರಮ ಕ್ಕೆ ಆಗಮಿಸಿದ ವೇಳೆ ಪ್ರಕಟ ಮಾಡುತ್ತಾರೆ ಅಂದುಕೊಂಡಿದ್ದೇವು. ಅದಕ್ಕೀಗ ಗಳಿಗೆ ಕೂಡಿಬಂದಿದೆ ಎಂದ ರಂಭಾಪುರಿ ಶ್ರೀಗಳು.