council Election Karnataka : 'ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲಾಗದು'

By Kannadaprabha NewsFirst Published Dec 5, 2021, 9:51 AM IST
Highlights
  • ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿ​ಕಾರಕ್ಕೆ ಬಂದಾಗಿನಿಂದ ಯಾವುದೇ ಚುನಾವಣೆ ಎದುರಾದರು ಜೆಡಿಎಸ್‌  - ಬಿಜೆಪಿ ಒಳ ಒಪ್ಪಂದ
  • ಗೆಲುವು ಸಾಧಿ​ಸುವ ಭ್ರಮೆಯಿಂದ ಎರಡು ಪಕ್ಷಗಳಿಗೂ ಹೊರ ಬರಬೇಕು.

ದೇವನಹಳ್ಳಿ (ಡಿ.05): ರಾಜ್ಯದಲ್ಲಿ ಬಿಜೆಪಿ (BJP) ಸರ್ಕಾರ ಅಧಿ​ಕಾರಕ್ಕೆ ಬಂದಾಗಿನಿಂದ ಯಾವುದೇ ಚುನಾವಣೆ (Election) ಎದುರಾದರು ಜೆಡಿಎಸ್‌ (JDS) ಪಕ್ಷವು ಬಿಜೆಪಿ ಒಳ ಒಪ್ಪಂದ ದಿಂದ ಗೆಲುವು ಸಾಧಿ​ಸುವ ಭ್ರಮೆ ಯಿಂದ ಎರಡು ಪಕ್ಷಗಳಿಗೂ ಹೊರ ಬರಬೇಕು. ಅವರ ಕೊಡುಗೆ ಜನ ಪರವಾದ ಸೇವೆ ಅಡಗಿದೆ. ಆದ್ದರಿಂದ ಕಾಂಗ್ರೆಸ್‌ (Congress) ಪಕ್ಷದ ವಿಧಾನ ಪರಿಷತ್‌ (MLC Election) ಅಭ್ಯರ್ಥಿ ಎಸ್‌.ರವಿ ಅವರನ್ನು ಅಷ್ಟು ಸುಲಭವಾಗಿ ಸೋಲಿಸಲಾಗದು ಎಂದು ದೇವನಹಳ್ಳಿ (Devanahalli) ಬ್ಲಾಕ್‌ ಕಾಂಗ್ರೆಸ್‌  ಅಧ್ಯಕ್ಷ ಪ್ರಸನ್ನ ಕುಮಾರ್‌ ಭವಿಷ್ಯ ನುಡಿದರು.

ಕೊಯಿರಾ ಗ್ರಾಮದ ಖಾದಿ ಬೋರ್ಡ್‌ ಮಾಜಿ ಅಧ್ಯಕ್ಷ ಶ್ರೀನಿವಾಸ್‌ (Shrinivas) ಅವರ ಮನೆಯಲ್ಲಿ ವಿಧಾನ ಪರಿಷತ್‌ ಚುನಾವಣೆ (MLC Election ) ಕುರಿತು ಕಾಂಗ್ರೆಸ್‌ (Congress) ಬೆಂಬಲಿತ ಕೊಯಿರಾ ಗ್ರಾಮ ಪಂಚಾಯಿತಿ (GramaPanchayat) ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರಕ್ಕೆ ಎಸ್‌.ರವಿ (Ravi) ಅವರ ಜನಪರ ಆಡಳಿತ ಮೆಚ್ಚುಗೆಯಾಗಿದೆ. ಕಾಂಗ್ರೆಸ್‌ ಬೆಂಬಲಿತ ಕೊಯಿರಾ ಗ್ರಾಮ ಪಂಚಾಯಿತಿ ಸದಸ್ಯರು ಅಧಿ​ಕಾರದಲ್ಲಿದ್ದು ಓಟಿನ ಜೊತೆಗೆ ಬಿಜೆಪಿ (BJP) ಬೆಂಬಲಿತ ಮತ್ತು ಇತರೆ ಸದಸ್ಯರ ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿ ಎಸ್‌. ರವಿ ಅವರ ಪರವಾಗಿ ಮತದಾನ ಮಾಡುವಂತೆ ಮನವಿ ಮಾಡಲಾಗುತ್ತದೆ ಎಂದರು.

ರಾಮನಗರ (Ramanagara) ಹಾಗೂ ಬೆಂಗಳೂರು ಗ್ರಾಮಾಂತರ (Bengaluru Rural) ಭಾಗದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಮತಗಳಿಲ್ಲದಿದ್ದರು ಬಿಜೆಪಿ ಪರವಾಗಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್‌ ಚುನಾವಣೆಗೆ ಬಲವಂತವಾಗಿ ಆಪಕ್ಷದವರು ಸ್ಪರ್ಧೆಗಿಳಿಸಿರುವ ಮಾಹಿತಿಯಿದೆ. ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಅಡ್ಡ ಮತದಾನವಾಗದು. ದೇವನಹಳ್ಳಿ ವಿಧಾನಸಭಾ ವ್ಯಾಪ್ತಿಯ ಎಲ್ಲ ಕಾಂಗ್ರೆಸ್‌ ಬೆಂಬಲಿತ ಪಂಚಾಯಿತಿ ಸದಸ್ಯರ ಬೆಂಬಲಕ್ಕಾಗಿ ಎಲ್ಲ ಕಡೆಗಳಲ್ಲಿ ಪೂರ್ವಭಾವಿ ಸಭೆಗಳನ್ನು ಬಹಳ ಅಚ್ಚುಕಟ್ಟಾಗಿ ಆಯಾ ಪಂಚಾಯಿತಿಯಲ್ಲೇ ಮತದಾನ ಮಾಡುವ ಮಾರ್ಗಸೂಚಿಗಳನ್ನು ನಮ್ಮ ಪಕ್ಷದ ಮುಖಂಡರು ಮನವರಿಕೆ ಮಾಡಿಕೊಡುತ್ತಿದ್ದಾರೆಂದು ತಿಳಿಸಿದರು.

ಕೆಪಿಸಿಸಿ (KPCC) ಸದಸ್ಯ ಚಿನ್ನಪ್ಪ ಅವರು ಮಾತನಾಡಿ, ಬಿಜೆಪಿ (BJP) ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರ ಯಾವಾಗ ತೊಲಗುವ ತನಕ ಪೆಟ್ರೋಲ್‌ (Petrol), ಡಿಸೇಲ್‌ (diesel), ಅಡುಗೆ ಅನಿಲ, ಸೇರಿದಂತೆ ಅಗತ್ಯ ವಸ್ತುಗಳ ಬೆಲೆ (Price) ಏರಿಕೆ ಕಡಿಮೆಯಾಗದು, ಬಡವರು, ದೀನ ದಲಿತರು, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಕ್ಕಿರುವ ಸರ್ಕಾರದ ಬಹುತೇಕ ಯೋಜನೆ ಕಡಿತ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು (Bengaluru) ಜಿಲ್ಲಾ ಸಹಕಾರಿ ಯುನಿಯನ್‌ ನಿರ್ದೇಶಕ ಸಂಪಂಗಪ್ಪ, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಖಾದಿ ಬೋರ್ಡ್‌ ಅಧ್ಯಕ್ಷ ನಾಗೇಗೌಡ, ಬಿದಲೂರು ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿರಾಜ್‌, ಕೊಯಿರಾ ಗ್ರಾಪಂ ಅಧ್ಯಕ್ಷೆ ರಮ್ಯ ಶ್ರೀನಿವಾಸ್‌, ಉಪಾಧ್ಯಕ್ಷ ವಿಜಯಕುಮಾರ್‌, ಸದಸ್ಯರಾದ ಸಂಖೇತ್‌, ಮಮತಾ ಶಿವಾಜಿ, ಆಂಜಿನಮ್ಮ, ಮುನಾಂಜಿನಪ್ಪ, ಶೇಖರ್‌, ಬಿಂದುು, ಜಗದೀಶ್‌, ರಾಜಾರಾವ್‌ ಗ್ರಾಮಸ್ಥರಿದ್ದರು.

ಡಿಕೆಶಿ ಸಂಬಂಧಿಗೆ ಸಿಗುತ್ತಾ ಗೆಲುವಿನ ಸಿಹಿ: ಸತತ ಎರಡು ಬಾರಿ ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರದಿಂದ ಜಯಗಳಿಸಿ ಮೇಲ್ಮನೆಗೆ ಆಯ್ಕೆಯಾಗಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಸೋದರ ಸಂಬಂಧಿ ಹಾಗೂ ಕಾಂಗ್ರೆಸ್‌ (Congress) ಅಭ್ಯರ್ಥಿ ಎಸ್‌.ರವಿ (S Ravi) ಮೂರನೇ ಬಾರಿಯೂ ಆಯ್ಕೆಯಾಗುವ ಆತ್ಮ ವಿಶ್ವಾಸದಲ್ಲಿದ್ದು, ಹ್ಯಾಟ್ರಿಕ್‌ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ (BJP), ಜೆಡಿಎಸ್‌(JDS) ಪೈಪೋಟಿ ನೀಡಿದರೂ ಕಾಂಗ್ರೆಸ್‌ (Congress) ಕಡೆಗೆ ಹೆಚ್ಚಿನ ಒಲವು ಇರುವುದು ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ಸುಲಭವಾಗಿ ಕಾಂಗ್ರೆಸ್‌ (Congress) ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಮತ್ತು ಜೆಡಿಎಸ್‌ (JDS) ಸಹ ಸಜ್ಜಾಗಿದ್ದು, ಬಿರುಸಿನ ಪ್ರಚಾರ ಕೈಗೊಂಡಿವೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಸ್‌.ರವಿ ಅವರು ಮೂರನೇ ಬಾರಿ ಕಣಕ್ಕಿಳಿದ್ದಾರೆ. ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ.ನಾರಾಯಣಸ್ವಾಮಿ (BC Narayanswamy) ಅಖಾಡದಲ್ಲಿದ್ದಾರೆ. ಇನ್ನು, ಜೆಡಿಎಸ್‌ ಅಭ್ಯರ್ಥಿಯಾಗಿ ಹಾಲಿ ವಿಧಾನಪರಿಷತ್‌ ಸದಸ್ಯ ಎಚ್‌.ಎಂ.ರಮೇಶ್‌ಗೌಡ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

click me!