Council Election : 'ಸುಮಲತಾ ಬಿಜೆಪಿ ಜೊತೆಗಿದ್ದಾರೆ : ಚುನಾವಣಾ ಪ್ರಚಾರಕ್ಕೆ ಬರುತ್ತಾರೆ'

By Kannadaprabha News  |  First Published Nov 24, 2021, 9:49 AM IST
  • ಮೇಲ್ಮನೆ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್‌ ನಮ್ಮ ಜೊತೆಗಿದ್ದಾರೆ
  • ಚುನಾವಣಾ ಪ್ರಚಾರಕ್ಕೆ ಖಂಡಿತ ಬರುತ್ತಾರೆ ಎಂದ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ

 ಮಂಡ್ಯ (ನ.24):  ಮೇಲ್ಮನೆ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್‌ (Sumalatha ambareesh) ನಮ್ಮ ಜೊತೆಗಿದ್ದಾರೆ. ಚುನಾವಣಾ (Election) ಪ್ರಚಾರಕ್ಕೆ ಖಂಡಿತ ಬರುತ್ತಾರೆ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ (KC Narayana gowda) ಅವರು ಹೇಳಿದರು.ಬಿಜೆಪಿ (BJP) ಅಭ್ಯರ್ಥಿ ಬೂಕಹಳ್ಳಿ ಮಂಜು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರೂ ಸಹ ನಮ್ಮ ಜೊತೆ ನಿಂತು ಕೆಲಸ ಮಾಡಲಿಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಅವರು ಲೋಕಸಭಾ ಚುನಾವಣೆಗೆ (Loksabha Election) ಸ್ಪರ್ಧಿಸಿದ್ದ ವೇಳೆ ಬಿಜೆಪಿ (BJP) ಅಭ್ಯರ್ಥಿಯನ್ನೇ ಕಣಕ್ಕಿಳಿಸದೆ ಅವರ ಗೆಲುವಿಗೆ ಶ್ರಮಿಸಿತ್ತು. ಹಾಗಾಗಿ ಪಕ್ಷದ ಅಭ್ಯರ್ಥಿ ಬೆಂಬಲಕ್ಕೆ ನಿಲ್ಲುವರೆಂಬ ಭರವಸೆ ಇದೆ ಎಂದು ತಿಳಿಸಿದರು.

ಮೇಲ್ಮನೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲುವು ಶತಸ್ಸಿದ್ಧ. ಮೊದಲು ನಮ್ಮ ಜಿಲ್ಲೆಯಲ್ಲಿ ಬೇರೆ ರೀತಿಯ ವಾತಾವರಣ ಇತ್ತು. ಈಗ ಎಲ್ಲವೂ ಬದಲಾಗಿದೆ. ನಮ್ಮದೇ ಸರ್ಕಾರ (BJP govt) ಅಧಿಕಾರದಲ್ಲಿದೆ. ಸರ್ಕಾರ ಮಾಡುತ್ತಿರುವ ಕೆಲಸವನ್ನು ಜನರು ಗಮನಿಸುತ್ತಿದ್ದಾರೆ. ಇದರಿಂದ ನಮಗೆ ಶಕ್ತಿ ಸಿಗುತ್ತದೆ. ಜನರು ಆಶೀರ್ವಾದ ಮಾಡುವರೆಂಬ ನಂಬಿಕೆ ಇದೆ ಎಂದರು.

Latest Videos

undefined

ಕಾಂಗ್ರೆಸ್‌ (Congress) ಅಭ್ಯರ್ಥಿ ದಿನೇಶ್‌ ಗೂಳಿಗೌಡ (Dinesh Gooligwoda) ಅವರಿಗೆ ಟಿಕೆಟ್‌ ದೊರೆಯಲು ಎಸ್‌.ಎಂ.ಕೃಷ್ಣ (Sm Krishna) ಸಹಕಾರ ನೀಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಎಸ್‌.ಎಂ.ಕೃಷ್ಣ  ಅವರು ಆ ರೀತಿಯ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಸದ್ಯ ಅವರು ನಮ್ಮ ಬಿಜೆಪಿಯಲ್ಲಿದ್ದಾರೆ ಎಂದಷ್ಟೇ ಹೇಳಿದರು.

ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ. ನಾವು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ ಎಂದು ತಿಳಿಸಿದರು.

ಒಂದು ವರ್ಷದ ಹಿಂದೆಯೇ ನಮ್ಮ ಅಭ್ಯರ್ಥಿಯನ್ನು ಅಯ್ಕೆ ಮಾಡಿದ್ದೇವೆ. ಅವರಿಗೆ ಹಿರಿಯರಾದ ಬಿ.ಎಸ್‌.ಯಡಿಯೂರಪ್ಪ (BS Yediyurappa), ಎಸ್‌.ಎಂ.ಕೃಷ್ಣ (SM Krishna) ಅವರು ಆಶೀರ್ವಾದ ಮಾಡಿದ್ದಾರೆ. ಮಂಡ್ಯದಿಂದ (Mandya) ಕಾಂಗ್ರೆಸ್‌ (Congress) ಅಭ್ಯರ್ಥಿಯಾಗುತ್ತಿರುವ ವಿಷಯ ತಿಳಿದು ಸಚಿವ ಎಸ್‌.ಟಿ.ಸೋಮಶೇಖರ್‌ (ST Somashekar) ವಿಶೇಷಾಧಿಕಾರಿಯಾಗಿದ್ದ ದಿನೇಶ್‌ ಗೂಳಿಗೌಡ ಅವರನ್ನು ಕೈಬಿಟ್ಟಿದ್ದಾರೆ. ಇದರಲ್ಲಿ ಯಾರ ಕೈವಾಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಚೇರಿ ಸಾಮಾನ್ಯ ಸಿಬ್ಬಂದಿಗೆ ಟಿಕೆಟ್  :  ಕೆಪಿಸಿಸಿ (KPCC)  ಕಚೇರಿಯ ಸಾಮಾನ್ಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ಕ್ರಮೇಣ ಮಾಧ್ಯಮ ಘಟಕದ ಅಧ್ಯಕ್ಷನ ಹುದ್ದೆವರೆಗೂ ಬೆಳೆದ ದಿನೇಶ್‌ ಗೂಳಿಗೌಡ (Dinesh Gooligowda) ಸೋಮವಾರ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಅವರಿಂದ ಮಂಡ್ಯ (Mandya) ಕ್ಷೇತ್ರಕ್ಕೆ ಬಿ-ಫಾರ್ಮ್ ಪಡೆದಾಗ ಕಚೇರಿಯ ಸಿಬ್ಬಂದಿಯಲ್ಲಿ ಅಚ್ಚರಿ, ಹರ್ಷದ ಭಾವ ಮಿಳಿತವಾಗಿತ್ತು.  ಎಸ್‌.ಎಂ. ಕೃಷ್ಣ (SM krishna) ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಕಚೇರಿಯನ್ನು ಸಿಬ್ಬಂದಿಯಾಗಿ ಸೇರಿದ್ದ ದಿನೇಶ್‌ ಗೂಳಿಗೌಡ ಹಂತ-ಹಂತವಾಗಿ ಬೆಳೆದವರು. ಡಾ. ಜಿ. ಪರಮೇಶ್ವರ್‌ (Dr G Parameshwar) ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷರಾಗಿ ದಿನೇಶ್‌ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್‌ (Congres ) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಾ. ಜಿ. ಪರಮೇಶ್ವರ್‌ ಅವರು ಉಪ ಮುಖ್ಯಮಂತ್ರಿಯಾದ ನಂತರ ಅವರು ಕೆಪಿಸಿಸಿ ಕಚೇರಿ ತ್ಯಜಿಸಿ ಪರಮೇಶ್ವರ್‌ ಅವರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದರು.

ಅನಂತರ ಸರ್ಕಾರದಲ್ಲಿ ಬದಲಾವಣೆಯಾದ ನಂತರ ಹಾಲಿ ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಅವರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಹೀಗಾಗಿ ಹಾಲಿ ಸಚಿವರೊಂದಿಗೆ ಇದ್ದ ದಿನೇಶ್‌ ಗೂಳಿಗೌಡ ಅವರು ಹಠಾತ್‌ ವಿಧಾನ ಪರಿಷತ್‌ ಚುನಾವಣೆಗೆ ಮಂಡ್ಯ ಕ್ಷೇತ್ರದ ಆಕಾಂಕ್ಷಿಯಾಗಿ ಕಾಣಿಸಿಕೊಂಡ ಹಲವು ಹುಬ್ಬುಗಳೇರಿದ್ದವು. ಜೆಡಿಎಸ್‌ನ  (JDS) ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಆದಿಯಾಗಿ ಹಲವರು ಈ ಬಗ್ಗೆ ಟೀಕೆಗಳನ್ನು ಮಾಡಿದ್ದರು.

ಆದರೆ, ದಿನೇಶ್‌ ಗೂಳಿಗೌಡ ಅವರಿಗೆ ಟಿಕೆಟ್‌ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌ ನಾಯಕತ್ವವು ಕಾಂಗ್ರೆಸ್‌ ಪಕ್ಷವು ಕಚೇರಿಯ ಸಾಮಾನ್ಯ ಸಿಬ್ಬಂದಿಯಾಗಿದವರ ಸಾಮರ್ಥ್ಯ ಗುರುತಿಸಿ ಟಿಕೆಟ್‌ ನೀಡುವಷ್ಟರ ಮಟ್ಟಿಕೆ ಪ್ರಜಾತಾಂತ್ರಿಕವಾಗಿದೆ. ಆದರೆ, ಜೆಡಿಎಸ್‌ನಲ್ಲಿ ಈ ರೀತಿ ಕಾರ್ಯಕರ್ತರಿಗೆ ಅವಕಾಶ ಸಿಗುವುದು ಸುಲಭವಲ್ಲ.ಅಲ್ಲಿ ಕುಟುಂಬದ ಸದಸ್ಯರಿಗೆ ಆದ್ಯತೆ ಹೆಚ್ಚು ಎಂದೇ ಬಿಂಬಿಸಿದೆ.

ಕೆಲವರಿಗೆ ಅಸಮಾಧಾನ :  ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹೈ ಕಮಾಂಡ್ ಮಟ್ಟದಿಂದಲೇ ಕ್ಷೇತ್ರಕ್ಕಿಳಿಸುವ ಕೆಲಸ ಮಾಡಿದ್ದು, ಅದರಲ್ಲೂ ವಿಶೇಷವಾಗಿ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ದಿನೇಶ್ ಗೂಳಿಗೌಡ ಅವರಿಗೆ ಅವಕಾಶ ಕಲ್ಪಿಸಿರುವುದು ಸಹಜವಾಗಿಯೇ ಸ್ಥಳೀಯ ಕಾಂಗ್ರೆಸ್ಸಿಗರ ಸಿಟ್ಟಿಗೆ ಕಾರಣವಾಗಿದೆ. 

click me!