MLC Election | KPCC ಕಚೇರಿ ಸಾಮಾನ್ಯ ಸಿಬ್ಬಂದಿಗೆ ಕಾಂಗ್ರೆಸ್ ಟಿಕೆಟ್‌ : ಅಚ್ಚರಿ ಬೆಳವಣಿಗೆ

By Kannadaprabha News  |  First Published Nov 23, 2021, 3:13 PM IST
  •  ಕೆಪಿಸಿಸಿ ಕಚೇರಿಯ ಸಾಮಾನ್ಯ ಸಿಬ್ಬಂದಿಗೆ  ಕಾಂಗ್ರೆಸ್ ಟಿಕೆಟ್‌ 
  • ದಿನೇಶ್‌ ಗೂಳಿಗೌಡ ಕೆಪಿಸಿಸಿ ಕಚೇರಿ ಸಾಮಾನ್ಯ ಸಿಬ್ಬಂದಿ
  • ಸಾಮಾನ್ಯರಿಗೆ ಟಿಕೆಟ್‌ ನೀಡಿದ್ದರಿಂದ ಸಹೋದ್ಯೋಗಿಗಳ ಹರ್ಷ
     

 ಬೆಂಗಳೂರು (ನ.23):  ಕೆಪಿಸಿಸಿ (KPCC)  ಕಚೇರಿಯ ಸಾಮಾನ್ಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ಕ್ರಮೇಣ ಮಾಧ್ಯಮ ಘಟಕದ ಅಧ್ಯಕ್ಷನ ಹುದ್ದೆವರೆಗೂ ಬೆಳೆದ ದಿನೇಶ್‌ ಗೂಳಿಗೌಡ (Dinesh Gooligowda) ಸೋಮವಾರ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಅವರಿಂದ ಮಂಡ್ಯ (Mandya) ಕ್ಷೇತ್ರಕ್ಕೆ ಬಿ-ಫಾರ್ಮ್ ಪಡೆದಾಗ ಕಚೇರಿಯ ಸಿಬ್ಬಂದಿಯಲ್ಲಿ ಅಚ್ಚರಿ, ಹರ್ಷದ ಭಾವ ಮಿಳಿತವಾಗಿತ್ತು.  ಎಸ್‌.ಎಂ. ಕೃಷ್ಣ (SM krishna) ಅವರು ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಕಚೇರಿಯನ್ನು ಸಿಬ್ಬಂದಿಯಾಗಿ ಸೇರಿದ್ದ ದಿನೇಶ್‌ ಗೂಳಿಗೌಡ ಹಂತ-ಹಂತವಾಗಿ ಬೆಳೆದವರು. ಡಾ. ಜಿ. ಪರಮೇಶ್ವರ್‌ (Dr G Parameshwar) ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷರಾಗಿ ದಿನೇಶ್‌ ಕಾರ್ಯ ನಿರ್ವಹಿಸಿದ್ದರು. ಕಾಂಗ್ರೆಸ್‌ (Congres ) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಾ. ಜಿ. ಪರಮೇಶ್ವರ್‌ ಅವರು ಉಪ ಮುಖ್ಯಮಂತ್ರಿಯಾದ ನಂತರ ಅವರು ಕೆಪಿಸಿಸಿ ಕಚೇರಿ ತ್ಯಜಿಸಿ ಪರಮೇಶ್ವರ್‌ ಅವರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದರು.

ಅನಂತರ ಸರ್ಕಾರದಲ್ಲಿ ಬದಲಾವಣೆಯಾದ ನಂತರ ಹಾಲಿ ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಅವರ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಹೀಗಾಗಿ ಹಾಲಿ ಸಚಿವರೊಂದಿಗೆ ಇದ್ದ ದಿನೇಶ್‌ ಗೂಳಿಗೌಡ ಅವರು ಹಠಾತ್‌ ವಿಧಾನ ಪರಿಷತ್‌ ಚುನಾವಣೆಗೆ ಮಂಡ್ಯ ಕ್ಷೇತ್ರದ ಆಕಾಂಕ್ಷಿಯಾಗಿ ಕಾಣಿಸಿಕೊಂಡ ಹಲವು ಹುಬ್ಬುಗಳೇರಿದ್ದವು. ಜೆಡಿಎಸ್‌ನ  (JDS) ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಆದಿಯಾಗಿ ಹಲವರು ಈ ಬಗ್ಗೆ ಟೀಕೆಗಳನ್ನು ಮಾಡಿದ್ದರು.

Tap to resize

Latest Videos

undefined

ಆದರೆ, ದಿನೇಶ್‌ ಗೂಳಿಗೌಡ ಅವರಿಗೆ ಟಿಕೆಟ್‌ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌ ನಾಯಕತ್ವವು ಕಾಂಗ್ರೆಸ್‌ ಪಕ್ಷವು ಕಚೇರಿಯ ಸಾಮಾನ್ಯ ಸಿಬ್ಬಂದಿಯಾಗಿದವರ ಸಾಮರ್ಥ್ಯ ಗುರುತಿಸಿ ಟಿಕೆಟ್‌ ನೀಡುವಷ್ಟರ ಮಟ್ಟಿಕೆ ಪ್ರಜಾತಾಂತ್ರಿಕವಾಗಿದೆ. ಆದರೆ, ಜೆಡಿಎಸ್‌ನಲ್ಲಿ ಈ ರೀತಿ ಕಾರ್ಯಕರ್ತರಿಗೆ ಅವಕಾಶ ಸಿಗುವುದು ಸುಲಭವಲ್ಲ.ಅಲ್ಲಿ ಕುಟುಂಬದ ಸದಸ್ಯರಿಗೆ ಆದ್ಯತೆ ಹೆಚ್ಚು ಎಂದೇ ಬಿಂಬಿಸಿದೆ.

ಕೆಲವರಿಗೆ ಅಸಮಾಧಾನ :  ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹೈ ಕಮಾಂಡ್ ಮಟ್ಟದಿಂದಲೇ ಕ್ಷೇತ್ರಕ್ಕಿಳಿಸುವ ಕೆಲಸ ಮಾಡಿದ್ದು, ಅದರಲ್ಲೂ ವಿಶೇಷವಾಗಿ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ದಿನೇಶ್ ಗೂಳಿಗೌಡ ಅವರಿಗೆ ಅವಕಾಶ ಕಲ್ಪಿಸಿರುವುದು ಸಹಜವಾಗಿಯೇ ಸ್ಥಳೀಯ ಕಾಂಗ್ರೆಸ್ಸಿಗರ ಸಿಟ್ಟಿಗೆ ಕಾರಣವಾಗಿದೆ. 

ಈ ಹಿಂದೆ ಡಿಸಿಸಿ ಬ್ಯಾಂಕ್‌ಗೆ (DCC Bank) ತಮ್ಮ ಆಪ್ತರೊಬ್ಬರನ್ನು ಅಧ್ಯಕ್ಷರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ (SM Krishna) ಈಗ ಮತ್ತೊಮ್ಮೆ ತಮ್ಮ ಬೆಂಬಲಿಗ ದಿನೇಶ್ ಗೂಳಿಗೌಡ ಅವರನ್ನು ಮೇಲ್ಮನೆಗೆ ಕಳುಹಿಸುವ ಸಾಹಸಕ್ಕೆ ಮುಂದಾಗಿದ್ದಾರೆ. ತಮ್ಮ ರಾಜಕೀಯ ಚಾಣಾಕ್ಷತನದಿಂದಲೇ ಸದಾ ಅಧಿಕಾರವನ್ನು ಅನುಭವಿ ಸುತ್ತಾ ಬಂದಿರುವ ಎಸ್.ಎಂ.ಕೃಷ್ಣ ತನ್ನ ಶಿಷ್ಯ ಡಿ.ಕೆ.ಶಿವಕುಮಾರ್ (DK Shivakumar) ಮೂಲಕ ದಿನೇಶ್ ಗೂಳಿಗೌಡ ಅವರನ್ನು ಕಾಂಗ್ರೆಸ್ ನಿಂದ ಅಭ್ಯರ್ಥಿಯನ್ನಾಗಿಸುವಲ್ಲಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುರು ಕಾಣಿಕೆ ನೀಡುವ ಭರದಲ್ಲಿ ಜಿಲ್ಲೆಯ ಕಾಂಗ್ರೆಸ್ಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದನ್ನು ಮರೆತು ಬಲವಂತವಾಗಿ ಅಭ್ಯರ್ಥಿ ಹೇರಿಕೆಯನ್ನು ಮಾಡಿದ್ದು ಇದರ ವಿರುದ್ಧ ಸ್ಥಳೀಯ ಕಾಂಗ್ರೆಸ್ಸಿಗರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದಿದ್ದರೂ ಮುಕ್ತ ಮನಸ್ಸಿನಿಂದ ಕಾಂಗ್ರೆಸ್ ಪರವಾಗಿ ಚುನಾವಣೆ ನಡೆಸುವ ಆಸಕ್ತಿಯನ್ನು ತೋರುತ್ತಿಲ್ಲ ಎಂದು ತಿಳಿದುಬಂದಿದೆ. ವಿಧಾನಪರಿಷತ್ ಸದಸ್ಯರಾಗಿದ್ದ ಬಿ. ರಾಮಕೃಷ್ಣ ಅವರ ಗೆಲುವಿಗೆ ಸ್ಥಳೀಯ ಕಾಂಗ್ರೆಸ್ಸಿಗರು ಪೂರ್ವ ತಯಾರಿ ನಡೆಸಿ ದ್ದರು. ಜೆಡಿಎಸ್‌ನ ಅಸಮಾಧಾನಿತ ನಾಯ ಕರನ್ನು ರಹಸ್ಯವಾಗಿ ಒಗ್ಗೂಡಿಸಿಕೊಂಡು ಕಾಂಗ್ರೆಸ್ಸಿಗೆ ಗೆಲುವ ತರುವ ಪ್ರಕ್ರಿಯೆಯನ್ನು ನಡೆಸುತ್ತಿದ್ದ ಹೊತ್ತಿನಲ್ಲೇ ಡಿ.ಕೆ.ಶಿವ ಕುಮಾರ್ ಅವರ ದಿಢೀರ್ ನಿಲುವು ಕಾಂಗ್ರೆಸ್ ವಲಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ. 

click me!