ಮಿರ್ಜಾ ಬಳಿಕ ಅಂತಃಕರಣ ಆಡಳಿತ ನೀಡಿದ್ದು ಮೋದಿ: ಶಾಸಕ ಸುರೇಶ್‌ ಕುಮಾರ್‌

By Govindaraj S  |  First Published Jul 28, 2022, 10:28 PM IST

ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಬಳಿಕ ಈ ದೇಶದಲ್ಲಿ ಅಂತಃಕರಣದ ಆಡಳಿತ ನೀಡಿದವರು ನರೇಂದ್ರ ಮೋದಿ ಎಂದು ಶಾಸಕ ಎಸ್‌. ಸುರೇಶ್‌ಕುಮಾರ್‌ ಅಭಿಪ್ರಾಯಪಟ್ಟರು. 


ಮೈಸೂರು (ಜು.28): ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಬಳಿಕ ಈ ದೇಶದಲ್ಲಿ ಅಂತಃಕರಣದ ಆಡಳಿತ ನೀಡಿದವರು ನರೇಂದ್ರ ಮೋದಿ ಎಂದು ಶಾಸಕ ಎಸ್‌. ಸುರೇಶ್‌ಕುಮಾರ್‌ ಅಭಿಪ್ರಾಯಪಟ್ಟರು. ನಗರದಲ್ಲಿ ಬುಧವಾರ ನಡೆದ ಮೋದಿ- 20 ಕೃತಿ ಕುರಿತ ನರೇಂದ್ರ ಮೋದಿ ಅವರ ಸಾರ್ಥಕ ಆಡಳಿತ ಹಾಗೂ ಸಾಮರ್ಥ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ, ಈ ದೇಶದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ಮತ್ತು ವಿಶ್ವಾಸ. ರಷ್ಯಾ-ಉಕ್ರೇನ್‌ ಯುದ್ಧದ ವೇಳೆ 20 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದರು. 

ಹಾಗಾಗಿ ಮೋದಿ20 ಕೃತಿಯಲ್ಲಿ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಅವರು ತಮ್ಮ ಲೇಖನದಲ್ಲಿ ಮೋದಿ ಯುವಕರ ಕಣ್ಮಣಿ, ಯುವಕರ ಆದರ್ಶ ಎಂದು ಹೇಳಿರುವುದು ಸಮರ್ಥ ಗ್ರಹಿಕೆ ಎಂದು ನುಡಿದರು. ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌ ಪ್ರಧಾನಿ ನರೇಂದ್ರ ನೋದಿ ಅವರನ್ನು ಹುಡುಕಿಕೊಂಡು ಬಂದು ಮಾತಾಡಿಸುತ್ತಾರೆ. ಹಾಗೇ ಪಾಕಿಸ್ತಾನದ ಸಚಿವರೊಬ್ಬರು ಮೋದಿಯಂತಹ ನಾಯಕ ನಮಗೂ ಸಿಗಬೇಕಾಗಿತ್ತು ಎಂದಿದ್ದಾರೆ. ಯೋಗ, ಆಯುರ್ವೇದ ಸೇರಿ ಭಾರತದ ಪರಂಪರೆಗೆ ವಿಶ್ವಮಾನ್ಯತೆ ದೊರೆತದ್ದು, ಮೋದಿ ಅವರ ಹೆಗ್ಗಳಿಕೆ. 

Latest Videos

undefined

ಕೇಂದ್ರ ಸರ್ಕಾರದಿಂದ ವಿದ್ಯುತ್‌ ಪೂರೈಕೆಯಲ್ಲಿ ಕ್ರಾಂತಿ: ಶಾಸಕ ನಾಗೇಂದ್ರ

ಜೂ. 21ರಂದು ಕರೆಕೊಟ್ಟ ವಿಶ್ವ ಯೋಗ ದಿನಕ್ಕೆ ಜಗತ್ತಿನ 195 ರಾಷ್ಟ್ರಗಳ ಪೈಕಿ 192 ರಾಷ್ಟ್ರಗಳು ಆಚರಿಸಿದವು. ಉಳಿದ ಮೂರು ರಾಷ್ಟ್ರಗಳಿಗೆ ಮಾತ್ರ ಯೋಗ ದಿನ ಆಚರಿಸುವ ಯೋಗಾ ಇರಲಿಲ್ಲ ಎಂದರು. ದಲಿತ ಸಮುದಾಯದ ರಾಮನಾಥ್‌ ಕೋವಿಂದ್, ಈಗ ಅದಿವಾಸಿ ಸಮಾಜದ ದ್ರೌಪದಿ ಮುರ್ಮು ಅವರಿಗೆ ದೇಶದ ಅತ್ಯುನ್ನತ ಸ್ಥಾನ ನೀಡಿದರು. ಇದು ದೀನ ದಲಿತರ ಉದ್ಧಾರದ ಬಗ್ಗೆ ಬರೀ ಮಾತನಾಡದೇ ಅಧಿಕಾರ ನೀಡಿದರು. ಈ ಉದಾತ್ತ ಗುಣವನ್ನು ದೇಶದ ಜನರು ಗಮನಿಸಬೇಕು ಎಂದು ತಿಳಿಸಿದರು. ಮೋದಿ20 ಪುಸ್ತಕದಲ್ಲಿ ವಿವಿಧ ಕ್ಷೇತ್ರಗಳ 21 ಸಾಧಕರು ಪುಸ್ತಕದಲ್ಲಿ ಲೇಖನ ಬರೆದಿದ್ದಾರೆ. 

ಕೋಟಿ ಒಡತಿಯಾದ ಚಾಮುಂಡಿ ತಾಯಿ: ಒಂದೇ ತಿಂಗಳಲ್ಲಿ ಬರೋಬ್ಬರಿ ಕಾಣಿಕೆ

ನರೇಂದ್ರ ಮೋದಿ ಅವರನ್ನು ಹೊಗಳುವ, ಮೆಚ್ಚಿಸುವ ಲೇಖನ ಇಲ್ಲ ಎಂಬುದನ್ನು ಅರಿಯಬೇಕು. ಆದಾಯ ತೆರಿಗೆ ಇಲಾಖೆ ಇಬ್ಬರನ್ನು ವಿಚಾರಣೆ ನಡೆಸುತ್ತಿರುವುದಕ್ಕೆ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ತಮ್ಮದೇ ಕಾರು ತಂದು ಸುಡಲಾಗುತ್ತಿದೆ. ಆದರೆ ಮೋದಿ ಅವರು ಮುಖ್ಯಂಮತ್ರಿಯಾಗಿದ್ದ ವೇಳೆ ಯಾರಿಗೂ ತಿಳಿಸದೆ ಇಡಿ ತನಿಖೆ ಎದುರಿಸಿದ್ದಾರೆ. ಈ ವ್ಯತ್ಯಾಸವನ್ನು ತಿಳಿಯಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ವಕೀಲ ಒ. ಶ್ಯಾಂಭಟ್‌, ಸಮಾಜ ಸೇವಕ ಮಾ. ವೆಂಕಟರಾಮ್‌, ಮೂಳೆರೋಗ ತಜ್ಞ ಡಾ. ರವೀಂದ್ರನಾಥ್‌ ಇದ್ದರು.

click me!