ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯುತ್ ಪೂರೈಕೆ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಯನ್ನುಂಟು ಮಾಡಿದ್ದಾರೆ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು.
ಮೈಸೂರು (ಜು.28): ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯುತ್ ಪೂರೈಕೆ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಯನ್ನುಂಟು ಮಾಡಿದ್ದಾರೆ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದರು. ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ, ವಿದ್ಯುತ್ ಸಚಿವಾಲಯ ಮತ್ತು ಎಂಎನ್‌ಆರ್‌ಇ ವತಿಯಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿದ್ಯುತ್ ಕ್ಷೇತ್ರದಲ್ಲಿನ ಪ್ರಮುಖ ಸಾಧನೆ ಎತ್ತಿಹಿಡಿಯಲು ಉಜ್ವಲ್ ಭಾರತ್ ಉಲ್ವಜ್ ಭವಿಷ್ಯ, ವಿದ್ಯುತ್- 2047 ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಟ್ರಾನ್ಸ್‌ಫಾರ್ಮರ್ ಸುಟ್ಟಿ ಹೋದರೆ ಈ ಹಿಂದೆ ಮೂರ್ನಾಲ್ಕು ತಿಂಗಳ ಕಾಯಬೇಕಿತ್ತು. ಈಗ 24 ಗಂಟೆಯಲ್ಲಿ ಲಭ್ಯವಾಗಲಿದೆ. ಕೇಂದ್ರ ಸರ್ಕಾರದ ಬೆಳಕು ಯೋಜನೆಯಿಂದ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ನೆರವಾಗಿದೆ. ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಬಂದರೆ ವಿದ್ಯುತ್ ಅಡಚಣೆ ಉಂಟಾಗುತ್ತಿತ್ತು. ಅಂತಹ ವೇಳೆ ಸಮಸ್ಯೆ ಪರಿಹರಿಸಲು ಕೆಲಸ ಮಾಡಲಾಗುತ್ತಿದೆ ಎಂದರು. ಮೈಸೂರು ವೃತ್ತ ಅಧೀಕ್ಷಕ ಎಂಜಿನಿಯರ್ ನಾಗೇಶ್ ಮಾತನಾಡಿ, 8 ವರ್ಷಗಳಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಮಾಡಿದ ಸಾಧನೆ ವಿವರಿಸಿದರು. 2030ರ ವೇಳೆಗೆ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಶೇ. 40 ಸಾಮರ್ಥ್ಯವು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಲು ಬದ್ಧವಾಗಿದ್ದು, ನಾವು ಈ ಗುರಿಯನ್ನು ನವೆಂರ್ಬ-2021 ರಲ್ಲೇ ನಿಗದಿತ ಅವಧಿಗಿಂತ 9 ವರ್ಷ ಮುಂಚೆಯೇ ಸಾಧಿಸಿದ್ದೇವೆ ಎಂದರು.
undefined
ಬೇಡ ಜಂಗಮ ಜನಾಂಗಕ್ಕೆ ಪ.ಜಾತಿ ಮೀಸಲಾತಿ ಬೇಡ: ಎಚ್.ಸಿ. ಮಹದೇವಪ್ಪ
ನಾವು 1,63,000 ಮೆಗಾ ವಾಟ್ ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಸರಾಸರಿ 12.5 ಗಂಟೆಗಳು ಪೂರೈಕೆಯಾಗುತ್ತಿದ್ದ ವಿದ್ಯುತ್ ಅನ್ನು ಪ್ರಸ್ತುತ ಸರಾಸರಿ 22.5 ಗಂಟೆಗಳ ವಿದ್ಯುತ್ ಸರಬರಾಜನ್ನು ಖಾತರಿಪಡಿಸಿಕೊಳ್ಳಲಾಗಿದೆ ಎಂದರು. ಸೌರ ವಿದ್ಯುತ್ ಪಂಪ್‌ಗಳನ್ನು ಆಳವಡಿಸಿಕೊಳ್ಳಲು ಪರಿಚಯಿಸಲಾದ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಶೇ. 30 ಸಹಾಯ ಧನ ಮತ್ತು ರಾಜ್ಯ ಸರ್ಕಾರ ಶೇ. 30 ಸಹಾಯ ಧನ ನೀಡಲದ್ದು, ಜೊತೆಗೆ ಶೇ. 30 ರಷ್ಟುಸಾಲ ಸೌಲಭ್ಯವೂ ಕೂಡ ದೊರೆಯಲಿದೆ ಎಂದು ಅವರು ಹೇಳಿದರು.
ಬೆಳಕು ಯೋಜನೆ: ಬೆಳಕು ಯೋಜನೆಯಡಿ ಜಿಲ್ಲಾ ವ್ಯಾಪ್ತಿಯ ವಿದ್ಯುತ್ ಸಂಪರ್ಕ ಇಲ್ಲದಿರುವ ಬಡ ಕುಟುಂಬದ ಮನೆಗಳಿಗೆ ದೀನ ದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನ ಹಾಗೂ ಸೌಭಾಗ್ಯ ಯೋಜನೆಗಳ ಮಾದರಿಯಲ್ಲಿ ದಾಖಲಾತಿ ಪರಿಗಣಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.ಈ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 4152 ಸಂಖ್ಯೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜಿಪಂ ಮೌಲ್ಯಮಾಪನಾಧಿಕಾರಿ ಸೌಮಿತ್ರ, ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ಗೋಪಾಲ್ ಎನ್. ಗಾವ್ಕರ್, ಉಮೇಶ್ ಚಂದ್ರ, ಅನಿತಾ ಇದ್ದರು.
ಗ್ರಾ.ಪಂ. ಅಧ್ಯಕ್ಷ ಚುನಾವಣೆಗೆ ದಿನ ಮೊದಲು ಸದಸ್ಯ ಸಾವು
ಏನಿದು ಯೋಜನೆ: ಇಂಟಿಗ್ರೇಟೆಡ್ ಪವರ್ ಡೆವಲಪ್ ಮೆಂಟ್ ಸ್ಟ್ರೀಮ್ (ಐಪಿಡಿಎಫ್) ಅಡಿ ಜಿಲ್ಲಾ ವ್ಯಾಪ್ತಿಯ 9 ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ಮೈಸೂರು, ನಂಜನಗೂಡು, ಟಿ.ನರಸೀಪುರ, ಬನ್ನೂರು, ಹುಣಸೂರು, ಎಚ್.ಡಿ. ಕೋಟೆ, ಸರಗೂರು, ಕೆ.ಆರ್. ನಗರ ಮತ್ತು ಪಿರಿಯಾಪಟ್ಟಣಗಳಲ್ಲಿ ವಿದ್ಯುತ್ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ಒಟ್ಟು . 3915.00 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ. ವಿದ್ಯುತ್ ಮಾರ್ಗಗಳನ್ನು ಬಲಿಷ್ಠಗೊಳಿಸುವುದು ಮತ್ತು ಪರಿವರ್ತಕ ಕೇಂದ್ರಗಳ ಸಾಮರ್ಥ್ಯ ವೃದ್ಧಿಸುವುದು, ವಿದ್ಯುಚ್ಛಕ್ತಿ ನಷ್ಟಕಡಿಮೆ ಮಾಡಲು ಪರಿವರ್ತಕ ಕೇಂದ್ರ ಮತ್ತು ಸ್ಥಾವರಗಳನ್ನು ಮಾಪಕೀಕರಣಗೊಳಿಸುವುದು, ಮಾಹಿತಿ ತಂತ್ರಜ್ಞಾನವನ್ನು ಬಳಸಿ ಪರಿಣಾಮಕಾರಿಯಾಗಿ ವಿದ್ಯುತ್ ನಿರ್ವಹಣೆ ಮಾಡುವುದು ಇದರ ಉದ್ದೇಶ.