ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಬಿಜೆಪಿ ತೊರೆಯಲು ತುದಿಗಾಲ ಮೇಲೆ ನಿಂತಿದ್ದಾರೆಯೇ ಅಥವಾ ತಮ್ಮ ಆಲೋಚನಾ ಕ್ರಮಕ್ಕೆ ವಿರುದ್ದವಾಗಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಜಲಸಂಪನ್ಮೂಲ ಸಚಿವರು ನಡೆದುಕೊಂಡಿದ್ದಾರೆಂದು ಅಸಮಾಧಾನ ರೂಪದ ಬೆದರಿಕೆ ವೊಡ್ಡಿದ್ದಾರೆಯೇ? ಪೂರ್ಣಿಮಾ ಮುಖ್ಯಮಂತ್ರಿ ಬುಧವಾರ ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರ ಇಂತಹದ್ದೊಂದು ಅನುಮಾನಗಳ ಹುಟ್ಟಿ ಹಾಕಿದೆ.
ಚಿತ್ರದುರ್ಗ(ಮೇ.01): ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಬಿಜೆಪಿ ತೊರೆಯಲು ತುದಿಗಾಲ ಮೇಲೆ ನಿಂತಿದ್ದಾರೆಯೇ ಅಥವಾ ತಮ್ಮ ಆಲೋಚನಾ ಕ್ರಮಕ್ಕೆ ವಿರುದ್ದವಾಗಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಜಲಸಂಪನ್ಮೂಲ ಸಚಿವರು ನಡೆದುಕೊಂಡಿದ್ದಾರೆಂದು ಅಸಮಾಧಾನ ರೂಪದ ಬೆದರಿಕೆ ವೊಡ್ಡಿದ್ದಾರೆಯೇ? ಪೂರ್ಣಿಮಾ ಮುಖ್ಯಮಂತ್ರಿ ಬುಧವಾರ ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರ ಇಂತಹದ್ದೊಂದು ಅನುಮಾನಗಳ ಹುಟ್ಟಿ ಹಾಕಿದೆ.
ವಾಣಿವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆ ತಾಲೂಕಿನ ಹಳ್ಳಿಗಳಿಗೆ ಕುಡಿಯಲು0.25 ಟಿಎಂಸಿ ನೀರು ಹರಿಸಿರುವುದ ಗಂಭೀರವಾಗಿ ಪರಿಗಣಿಸಿರುವ ಶಾಸಕಿ ಪೂರ್ಣಿಮಾ ತಮ್ಮ ಅಭಿಪ್ರಾಯ ಕೇಳದೆ ಚಳ್ಳಕೆರೆ ಕಾಂಗ್ರೆಸ್ ಶಾಸಕರಿಗೆ ಮನ್ನಣೆ ನೀಡಲಾಗಿದೆ ಎಂಬ ಸಂಗತಿ ಪತ್ರದಲ್ಲಿ ಪ್ರಧಾನವಾಗಿ ಪರಿಗಣಿಸಿದ್ದಾರೆ.
ಅತಿಕ್ರಮ ಪ್ರವೇಶ, ಶಾಸಕಿಯನ್ನು ಜೈಲಿಗಟ್ಟುವಂತೆ ರೈತರ ಒತ್ತಾಯ
ಪತ್ರದ ಕೊನೆಯಲ್ಲಿ ನನ್ನ ಮುಂದಿನ ನಿರ್ಣಯ ವ್ಯತಿರಿಕ್ತವಾದರೆ ನೀವೇ ಕಾರಣವೆಂದು ಸಿಎಂ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಬುಧವಾರ ರಾತ್ರಿ 9.30 ರ ವೇಳೆಗೆ ಪೂರ್ಣಿಮಾ ಅವರು ತಮ್ಮದೇ ಆದ ಫೇಸ್ ಬುಕ್ ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದ ಪತ್ರವನ್ನು ಅಪ್ ಲೋಡ್ ಮಾಡಿದ್ದು ಇಡೀ ಹಿರಿಯೂರು ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.|
ಮುಖ್ಯಮಂತ್ರಿಗೆ ಬರೆದ ಪತ್ರದ ಒಟ್ಟಾರೆ ಸಾರಾಂಶವಿದು
ವಾಣಿವಿಲಾಸ ಸಾಗರದಿಂದ ವೇದಾವತಿ ನದಿಪಾತ್ರದ ಮೂಲಕ ೦.೨೫ ನೀರನ್ನು ಚಳ್ಳಕೆರೆಗೆ ಹರಿಸಲು ನೀಡಿರುವ ಆದೇಶಕ್ಕೆ ಮತ ಕ್ಷೇತ್ರದ ರೈತರ ಹಾಗೂ ನನ್ನ ಅಭ್ಯಂತರ ವಿರುವುದಿಲ್ಲ. ಆದರೆ ಯಾವುದೇ ಸರ್ಕಾರಿ ಆದೇಶವಿಲ್ಲದೇ ಹೆಚ್ಚುವರಿ ನೀರನ್ನು ಹರಿಸಿರುವುದರ ಹಿಂದೆ ತಮ್ಮ ಮೌಖಿಕಆದೇಶವಿರುವುದಕ್ಕೆ ಆಕ್ಷೇಪವಿದೆ.
ಈ ವಿಚಾರ ತಿಳಿದ ತಕ್ಷಣ ರೈತ ಸಂಘಟನೆಗಳು, ಸಾವಿರಾರು ರೈತರು ವಿವಿ ಸಾಗರದ ಹತ್ತಿರ ಸೇರಿ ಪ್ರತಿಭಟಿಸುತ್ತಿದ್ದು ನಾನು ಸಹ ಭಾಗವಹಿಸುವಂತಹ ಸಂದರ್ಭ ಸೃಷ್ಠಿಯಾಯಿತು. ರೈತರ ಸಮ್ಮುಖದಲ್ಲಿ ಸಂಬಂಧಪಟ್ಟ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಮುಖ್ಯ ಇಂಜಿನಿಯರ್, ಕಾರ್ಯದರ್ಶಿ, ಜಲಸಂಪನ್ಮೂಲ ಸಚಿವರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳ ಕಚೇರಿ, ಇಷ್ಟೂ ಕಡೆ ದೂರವಾಣಿ ಮೂಲಕ ವಿಚಾರಿಸಿದೆ. ಸರ್ಕಾರಿ ಆದೇಶವಿಲ್ಲದೇ ನೀರನ್ನು ಹರಿಸುತ್ತಿರುವುದು ನಿಲ್ಲಿಸಬೇಕೆಂದು ಒತ್ತಾಯಿಸಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ.
ಮಾಹಿತಿ ನೀಡದ ಸೋಂಕಿತೆ, ಸೈಕಿಯಾಟ್ರಿಸ್ಟ್ ಮೊರೆ
ನನ್ನ ಜಿಲ್ಲೆಗೆ ಸಂಬಂಧಿಸಿದ ಹಿರಿಯೂರು ಹಾಗೂ ಚಳ್ಳಕೆರೆ ಕ್ಷೇತ್ರದ ವೇದಾವತಿ ನದಿ ಪಾತ್ರದ ರೈತರ ಸಮಸ್ಯೆ , ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ಹಾಗೂ ಹಿರಿಯೂರಿನ ೩೭ ಹಳ್ಳಿಗಳ ಕುಡಿವ ನೀರಿನ ಸಮಸ್ಯೆ ಮತ್ತು ಭದ್ರಾ ಹಾಲಿ ಯೋಜನೆಯ ಮೈಕ್ರೋ ಇರಿಗೇಷನ್ ಕುರಿತು ಇಡೀ ಕ್ಷೇತ್ರದ ವಿಚಾರವಾಗಿ ತುರ್ತು ಸಭೆ ಕರೆದು ಕೂಲಂಕುಶವಾಗಿ ಪರಿಶೀಲಿಸಲಾಗಿಲ್ಲ. ಹಾಲಿ ಇರುವ ನಿಯೋಜಿತ ಎರಡು ಟಿಎಂಸಿ ನೀರಿನ ಬಳಕೆ ಬಗ್ಗೆ ತಿಳಿಯದೆ, ತಾವು ಏಕಪಕ್ಷೀಯವಾಗಿ ಚಳ್ಳಕೆರೆಗೆ ನೀರು ಹರಿಸಿರುವುದು ತನಗೆ ತುಂಬಾ ಘಾಸಿ ಮತ್ತು ಆಘಾತವನ್ನುಂಟು ಮಾಡಿದೆ.
ಕೊರೋನಾ ಕಾಟ: ರೋಡ್‌ನಲ್ಲಿ ಗರಿ ಗರಿ ನೋಟ್ ನೋಟ್ ಬಿದ್ರೂ ಮುಟ್ಟದ ಜನ..!
ನಮ್ಮದೇ ಸರ್ಕಾರ, ನಮ್ಮ ಮುಖ್ಯಮಂತ್ರಿಗಳು, ನಮ್ಮ ಉಸ್ತುವಾರಿ ಸಚಿವರು, ಭಾರತೀಯ ಜನತಾ ಪಕ್ಷದ ಜಿಲ್ಲೆಯ ಐದು ಜನರ ಶಾಸಕರ ಮಾತಿಗೆ ಆಧ್ಯತೆ ನೀಡದೆ ಪಕ್ಕದ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರ ಮಾತಿಗೆ ಮನ್ನಣೆ ನೀಡಿರುವುದು ಮೇಲು ನೋಟಕ್ಕೆ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ರೈತರ ಮತ್ತು ಸಾರ್ವಜನಿಕರ ಹಿತಕಾಪಾಡುವಲ್ಲಿ, ವಿಫಲರಾಗಿರುತ್ತೇವೆಂದು ಪತ್ರದ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇನೆ. ನಂತರ ನನ್ನ ಮುಂದಿನ ನಿರ್ಣಯವು ವ್ಯತಿರಿಕ್ತವಾದರೆಅದಕ್ಕೆ ನೀವುಗಳೇ ಕಾರಣವೆಂದು ತಿಳಿಸುವುದಾಗಿ ಪೂರ್ಣಿಮಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
-ಚಿಕ್ಕಪ್ಪನಹಳ್ಳಿ ಷಣ್ಮುಖ