ಚಿತ್ರದುರ್ಗ: ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ದ ಗೂಳಿಹಟ್ಟಿ ಶೇಖರ್ ಕಿಡಿ

By Suvarna NewsFirst Published Nov 4, 2022, 6:01 PM IST
Highlights

ಸರ್ಕಾರಕ್ಕೆ ಆದಾಯ ಬೇಕೆಂದಾದರೆ ಜಿಲ್ಲೆಯ ಎಲ್ಲಾ ಹಳ್ಳಿಗಳ ಪ್ರತಿ ಮನೆಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿ, ಅಕ್ರಮವಾಗಿ ಹೆಚ್ಚಿನ ಬೆಲೆಯಲ್ಲಿ ಯಾಕೆ ಮಾರಾಟ ಮಾಡಲು ಅವಕಾಶ ನೀಡುತ್ತಿರಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಕಿಡಿಕಾರಿದರು.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.4): ಸರ್ಕಾರಕ್ಕೆ ಆದಾಯ ಬೇಕೆಂದಾದರೆ ಜಿಲ್ಲೆಯ ಎಲ್ಲಾ ಹಳ್ಳಿಗಳ ಪ್ರತಿ ಮನೆಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿ, ಅಕ್ರಮವಾಗಿ ಹೆಚ್ಚಿನ ಬೆಲೆಯಲ್ಲಿ ಯಾಕೆ ಮಾರಾಟ ಮಾಡಲು ಅವಕಾಶ ನೀಡುತ್ತಿರಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಕಿಡಿಕಾರಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಬಿ‌.ಸಿ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕ ಗೂಳಿಹಟ್ಟಿ ಡಿ.ಶೇಖರ್, ಯಾವುದೋ ಹಳ್ಳಿಯಲ್ಲಿ ಒಂದು ಅಂಗಡಿಗೆ ಮಾತ್ರ ಮಧ್ಯ ಮಾರಾಟಕ್ಕೆ ಪರವಾನಗಿ ಕೊಟ್ಟಿರುತ್ತಾರೆ‌. ಆದರೆ ಪ್ರತಿ ಹಳ್ಳಿಗಳಲ್ಲಿನ ಸಾಕಷ್ಟು ಮನೆಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದೆ. ಅದು ಕೂಡ ಹೆಚ್ಚಿನ ಬೆಲೆಯಲ್ಲಿ ಆದರೂ ಕೂಡ ಅಬಕಾರಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನೆ ಇದ್ದಾರೆ. ಒಂದು ಅಂಗಡಿಗೆ ಹೆಚ್ಚಿನ ಟಾರ್ಗೆಟ್ ನೀಡಿದರೆ. ಈ ರೀತಿ ಆಗುತ್ತದೆ ಎಂದು ಹೇಳಲಾಗುತ್ತಿದೆ. ಸರ್ಕಾರಕ್ಕೆ ಆದಾಯ ಬೇಕಾದರೆ ಪ್ರತಿ ಮನೆಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಆಗ ನೀವು ಕೂಡ ನೆಮ್ಮದಿ ಯ ನಿದ್ದೆ ಮಾಡಬಹುದು ಎಂದು ಹರಿಹಾಯ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ‌.ಸಿ.ಪಾಟೀಲ್ ಮಾತನಾಡಿ, ಹಳ್ಳಿಗಳಲ್ಲಿ ಎಂಎಸ್ಐಎಲ್ ತೆರೆದು ಅವರ ಮೂಲಕ ಮದ್ಯ ಮಾರಟ ಮಾಡಬೇಕು. ಅಕ್ರಮ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಗಜೀವನ್ ರಾಂ ಭವನ ನಿರ್ಮಾಣಕ್ಕೆ 2016-17 ರಲ್ಲಿ ಅನುದಾನ ನೀಡಲಾಗಿದ್ದು, 2022 ಕಳೆಯುತ್ತಾ ಬಂದರೂ ಕೂಡ ಕಾಮಗಾರಿ ಪೂರ್ಣಗೊಳಿಸಿಲ್ಲ. ಅಲ್ಲದೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಆಗಿದೆ ಇದರಲ್ಲಿ ಅಧಿಕಾರಿಯೂ ಕೂಡ ಶಾಮೀಲಾಗಿದ್ದಾರೆ ಎಂದು ಶಾಸಕ ಜಿ‌.ಹೆಚ್. ತಿಪ್ಪಾರೆಡ್ಡಿ ಲಿಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ವಿರುದ್ದ ಆಕ್ರೋಶ  ವ್ಯಕ್ತಪಡಿಸಿದರು‌.

ಮದಿರೆಯ ನಶೆಯಲ್ಲಿ ಊರಿಗೆ ಊರೇ ಸುಸ್ತು: ಬೋರ್‌ವೆಲ್ ಜಗ್ಗಿದ್ರೂ ಶರಾಬು ಬಂತು

ಈ ಕುರಿತು ಮಾತನಾಡಿದ ಲಿಡ್ಕರ್ ಅಧಿಕಾರಿ ಭವನವನ್ನು ಕ್ರೈಸ್ಟ್ ಸಂಸ್ಥೆಯವರು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಅವಧಿ ಮುಗಿದಿದೆ. ಆದರೂ ಕೂಡ ಹೆಚ್ಚಿನ ಅನುದಾನ ಬೇಕೆಂದು ಕೇಳಿದ್ದಾರೆ ಎಂದು ಹೇಳುತ್ತಿದ್ದಂತೆಯೆ ಗರಂ ಆದ ಜಿಲ್ಲಾ ಸಚಿವರು, ಗುತ್ತಿಗೆದಾರರು ಜೊತೆ ನೀವು ಕೂಡ ಶಾಮೀಲಾಗಿದ್ದಾರಾ ? ಮೊದಲು ಕಡಿಮೆ ಟೆಂಡರ್ ತೆಗದುಕೊಂಡು ಕಾಮಗಾರಿ ವಿಳಂಬ ಮಾಡುತ್ತಾ ನಂತರ ಹೆಚ್ಚಿನ ಅನುದಾನ ಬೇಕೆಂದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿರಾ ಎಂದು ಕಿಡಿಕಾರಿದರು‌. 

 

ಬಾರ್‌ಗಳಿಗೆ ಭುವನೇಶ್ವರಿ ಚಿತ್ರ: ಕ್ರಮಕ್ಕೆ ಕಸಾಪ ಆಗ್ರಹ

ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರನನ್ನು ಕಪ್ಪುಪಟ್ಟಿಗೆ ಸೇರಿಸಿ ಅವರಿಂದ ದಂಡ ವಸೂಲಿ ಮಾಡಬೇಕೆಂದು ಸಚಿವರು ಸೂಚನೆ ನೀಡಿದರು‌. ಸಭೆಯಲ್ಲಿ ಎಸ್ ಆರ್ ಟಿಸಿ ನಿಗಮದ ಅಧ್ಯಕ್ಷ  ಎಂ.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿ.ಪಂ.ಸಿಇಓ ದೀವಾಕರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ್ ಹಾಜರಿದ್ದರು.

click me!