Mysuru: ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಯತ್ನಿಸಿದ ಚಿರತೆ ಕೊನೆಗೂ ಸೆರೆ

By Gowthami K  |  First Published Nov 4, 2022, 5:26 PM IST

ಕೆ.ಆರ್ ನಗರ ಪಟ್ಟಣದಲ್ಲಿ ಬೆಳ್ಳಂ ಬೆಳ್ಳಗ್ಗೆ ಚಿರತೆ ಕಾಣಿಸಿಕೊಂಡಿದ್ದು ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಯತ್ನಿಸಿದೆ. ಅರಣ್ಯ ಇಲಾಖೆ‌ ಚಿರತೆ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


ಮೈಸೂರು (ನ.4): ಇತ್ತೀಚಿನ‌ ದಿನಗಳಲ್ಲಿ‌ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂದು ಕೆ.ಆರ್ ನಗರ ಪಟ್ಟಣದಲ್ಲಿ ಬೆಳ್ಳಂ ಬೆಳ್ಳಗ್ಗೆ ಚಿರತೆ ಕಾಣಿಸಿಕೊಂಡಿದ್ದು ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಯತ್ನಿಸಿದೆ. ಅರಣ್ಯ ಇಲಾಖೆ‌ ಚಿರತೆ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಡು ರಸ್ತೆಯಲ್ಲೇ ಕುಳಿತಿರುವ ಚಿರತೆ. ಜನರನ್ನ ಕಂಡು ಓಡುತ್ತಿರುವ ಚಿರತೆ. ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನ ಮೇಲೆ‌ ದಾಳಿಗೆ ಯತ್ನಿಸಿದ ಚಿರತೆ ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೆ.ಆರ್ ನಗರ ಪಟ್ಟಣದಲ್ಲಿ. ಕಳೆದೆರೆಡು ದಿನಗಳಿಂದ ಕೆ.ಆರ್ ನಗರದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸಾರ್ವಜನಿಕರು ಭಯ‌ಬೀತರಾಗಿದ್ದರು. ನಿನ್ನೆ ರಾತ್ರಿ ಕೆ.ಆರ್ ನಗರದ ಹೆದ್ದಾರಿಯ ರಸ್ತೆ ಮಧ್ಯದಲ್ಲಿ ಚಿರತೆ ಕುಳಿತುಕೊಂಡಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಇಂದು ಬೆಳಗ್ಗೆ ಪಟ್ಟಣದ 18ನೇ ವಾರ್ಡ್ ನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಕೆ.ಆರ್ ನಗರದಿಂದ ಮುಳ್ಳೂರಿಗೆ ಹೋಗುವ ದಾರಿಯಲ್ಲಿ ಚಿರತೆ ಕಂಡು ಸಾರ್ವಜನಿಕರು ಬೆಚ್ಚಿ ಬಿದಿದ್ದಾರೆ. ಜನರನ್ನ ಕಂಡ ಚಿರತೆ ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಮುಂದಾಯಿತು. ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನ‌ಮೇಲೆ ದಾಳಿ ಮುಂದಾದ ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಕಲ್ಲಿನಿಂದ ಹೊಡೆಯಲು ಮುಂದಾದ್ರು. ಚಿರತೆ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ಸಾರ್ವಜನಿಕರಿಗೆ ಚಿರತೆ ದಾಳಿಯಿಂದ ಸಣ್ಣಪುಟ್ಟ ಗಾಯವಾಗಿದೆ.

ಚಿರತೆ ಪಟ್ಟಣಕ್ಕೆ ಬಂದಿರುವ ವಿಚಾರ ತಿಳಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆಯಿಂದಲೇ ಚಿರತೆ ಸೆರೆಗೆ ಅಲರ್ಟ್ ಆಗಿದ್ರು. ಚಿರತೆ ಕಾರ್ಯಾಚರಣೆ ಆರಂಭಿಸಿದ ಮೈಸೂರು ಮೃಗಾಲಯ ಸಿಬ್ಬಂದಿ ಹಾಗೂ ಕೆ.ಆರ್.ನಗರ ಅರಣ್ಯ ವಲಯ ಅಧಿಕಾರಿಗಳು ಖಾಲಿ ನಿವೇಶನಲ್ಲಿ ಅವಿತುಕೊಂಡಿದ್ದ ಚಿರತೆಗೆ ಅರವಳಿಕೆ ಮದ್ದು ನೀಡಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾದ್ರು. ಇದಕ್ಕಾಗಿ ಶ್ರಮಿಸಿದ್ದ ಶಾಸಕ‌ ಸಾರಾ.ಮಹೇಶ್ ಜನರಿಗೆ ಆತಂಕ ಪಡದಂತೆ ಮನವಿ ಮಾಡಿಕೊಂಡ್ರು. ಚಿರತೆ ಕಾರ್ಯಾಚರಣೆಯಿಂದ ಕೆ.ಆರ್ ನಗರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಬೇಕಿದೆ.

Tap to resize

Latest Videos

ಚಿರತೆ ದಾಳಿಗೆ ಆಕಳು ಬಲಿ
ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕಟಗೇರಿಯಲ್ಲಿ ಮೇಯಲು ಬಿಟ್ಟಿದ್ದ ಆಕಳೊಂದು ಚಿರತೆ ದಾಳಿಗೆ ಬಲಿಯಾದ ಘಟನೆ ನಡೆದಿದೆ. ಮುಟ್ಟಳ್ಳಿಯ ಕಟಗೇರಿಮನೆಯ ಮಂಜುನಾಥ ದುರ್ಗಪ್ಪ ನಾಯ್ಕ ಮಂಗಳವಾರ ಮನೆಯಿಂದ ಬೆಳಿಗ್ಗೆ ಆಕಳನ್ನು ಮೇಯಲು ಕಾಡಿಗೆ ಬಿಟ್ಟು ಬಂದಿದ್ದರು. ಈ ವೇಳೆ ಚಿರತೆ ದಾಳಿ ಮಾಡಿ ಆಕಳನ್ನು ತಿಂದು ಹಾಕಿದೆ. ಕಾಡಿಗೆ ಸೊಪ್ಪು ತರಲು ಹೋದವರಿಂದ ಘಟನೆ ತಿಳಿದು ಬಂದಿದೆ. ಚಿರತೆ ದಾಳಿಗೆ ಬಲಿಯಾದ ಆಕಳು ಗರ್ಭವಿದ್ದು, ಇನ್ನು ಕೆಲವೇ ದಿನಗಳಲ್ಲಿ ಕರು ಹಾಕುತ್ತಿತ್ತು ಎಂದು ಹೇಳಲಾಗಿದೆ. ಆಕಳು ಚಿರತೆ ದಾಳಿಗೆ ಬಲಿಯಾಗಿರುವುದರಿಂದ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಅಧಿಕಾರಿಗೆ ಒತ್ತಾಯಿಸಲಾಗಿದೆ.

ಕೆಆರ್‌ಎಸ್‌ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ನಿರ್ಬಂಧ

ಕುರುಬರಹುಂಡಿ ಬಳಿ ಚಿರತೆ ದಾಳಿ: ಕರು ಬಲಿ
ಗುಂಡ್ಲುಪೇಟೆ: ಬಂಡೀಪುರ ಓಂಕಾರ ಅರಣ್ಯ ವಲಯದಂಚಿನ ಕುರುಬರಹುಂಡಿ ಗ್ರಾಮದ ಚನ್ನವೀರಪ್ಪಗೆ ಸೇರಿದ ಕರು ಚಿರತೆ ದಾಳಿಗೆ ತುತ್ತಾಗಿದೆ. ಗ್ರಾಮದ ಸಮೀಪದ ಜಮೀನಿನಲ್ಲಿ ರೈತ ಚನ್ನವೀರಪ್ಪ ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಿಸುವಾಗ ಮಧ್ಯಾಹ್ನದ ವೇಳೆಯಲ್ಲೇ ಚಿರತೆ ಏಕಾ ಏಕಿ ಕರುವಿನ ಮೇಲೆ ದಾಳಿ ಮಾಡಿ ಕರುವನ್ನು ಕೊಂದು ಹಾಕಿದೆ.

ಛಂಗನೇ ನೀರೊಳಗೆ ನೆಗೆದು ಮೊಸಳೆಯ ಬೇಟೆಯಾಡಿದ ಚಿರತೆ.. ವಿಡಿಯೋ ವೈರಲ್

ಚಿರತೆಯ ದಾಳಿ ಕಂಡ ರೈತ ಭಯದಿಂದ ಅಕ್ಕ ಪಕ್ಕದ ರೈತರು ಕೂಗಿಕೊಂಡಾಗ ಚಿರತೆ ಗಾಬರಿಯಿಂದ ಪಕ್ಕದಲ್ಲೇ ಇರುವ ಬಾಳೆ ತೋಟಕ್ಕೆ ನುಗ್ಗಿದೆ ಎಂದು ಗ್ರಾಮದ ಮುಖಂಡ ಪ್ರದೀಪ ಮಣೆಗಾರ್‌ ಹೇಳಿದ್ದಾರೆ. ಗ್ರಾಮದ ರೈತರಿಗೆ ಆತಂಕ ತಂದಿರುವ ಚಿರತೆ ಸೆರೆ ಹಿಡಿಯಲು ಬೋನು ಇರಿಸಬೇಕೆಂದು ಒತ್ತಾಯಿಸಿದ್ದಾರೆ.
 

click me!