ನೀರು ಬಂದಿಲ್ಲಂದ್ರೆ ಪುರಸಭೆ ಅಧ್ಯಕ್ಷಗೆ ಹೊಡೀರಿ ಎಂದ ಕಾಂಗ್ರೆಸ್ ಶಾಸಕ ಡಿ.ಎಸ್.ಹೊಲಗೇರಿ!

By Ravi Janekal  |  First Published Oct 9, 2022, 12:33 PM IST
  • 'ನೀರು ಬಂದಿಲ್ಲವೆಂದರೆ ಪುರಸಭೆ ಅಧ್ಯಕ್ಷಗೆ ಹೊಡೆಯಿರಿ'
  • ನೀರಿನ ಬಗ್ಗೆ ಫೋನ್ ಮಾಡಿದವರಿಗೆ ಶಾಸಕ ಉಪದೇಶ
  • ಲಿಂಗಸೂಗೂರು ಶಾಸಕ ಡಿ.ಎಸ್. ಹೂಲಗೇರಿ ಬೇಜಾವ್ದಾರಿ ಮಾತು
  • ಜೀವ ಹೋದರೂ ಬುದ್ಧಿ ಕಲಿಯದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು!

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಅ.9) : ಇತ್ತೀಚೆಗೆ ಕಲುಷಿತ ನೀರು ಸೇವಿಸಿ ರಾಯಚೂರು ಜಿಲ್ಲಾ ಕೇಂದ್ರದಲ್ಲೇ ಆರು ಜನರು ಪ್ರಾಣ ಕಳೆದುಕೊಂಡರು. ಆದ್ರೂ ಸಹ ರಾಯಚೂರು ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿಯೂ ಸಹ ಕುಡಿಯುವ ನೀರಿಗಾಗಿ ಪರದಾಟ ‌ನಡೆಸುವ ಪರಿಸ್ಥಿತಿ ಇದೆ. ಸರ್ಕಾರ ನೀರಿಗಾಗಿ ಕೋಟಿ ಕೋಟಿ ಅನುದಾನ ನೀಡಿದ್ರೂ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಸರ್ಕಾರದ ಯೋಜನೆ ಹಳ್ಳಹಿಡಿದು ಹೋಗಿ ಜನರು ನಿತ್ಯ ನೀರಿಗಾಗಿ ಅಲೆಯುವ ಪರಿಸ್ಥಿತಿಯಿದೆ.

Latest Videos

undefined

ಲಿಂಗಸುಗೂರು: ಕೊಚ್ಚಿಹೋದ 2,394 ಕೋಟಿ ವೆಚ್ಚದ ನಾಲೆಗಳು, ಸಂಕಷ್ಟದಲ್ಲಿ ಅನ್ನದಾತ..!

9-10 ದಿನಗಳಿಗೊಮ್ಮೆ ಬರುತ್ತೆ ಕುಡಿಯುವ ‌ನೀರು!

ರಾಯಚೂರು(Raichur) ಜಿಲ್ಲೆ ಲಿಂಗಸೂಗೂರು(Lingasuguru) ತಾಲೂಕಿನ ಮುದಗಲ್(Mudugal) ಪಟ್ಟಣದಲ್ಲಿ ಈಗ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. 
ಕಳೆದ  9-10 ದಿನಗಳಿಂದ ನಲ್ಲಿಯಲ್ಲಿ ಕುಡಿಯುವ ನೀರು ಬರುತ್ತಿಲ್ಲ. ಹೀಗಾಗಿ ಜನರು ಕುಡಿಯುವ ‌ನೀರಿಗಾಗಿ ಪರದಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಕುಡಿಯುವ ನೀರು ಮಾತ್ರ ಬರುತ್ತಿಲ್ಲ. 

ಮುದಗಲ್ ಹಳೆಪೇಟೆಯ ಜನರು ನೀರು ಕೇಳಿದ್ರೆ ಪುರಸಭೆ ಸಿಬ್ಬಂದಿ ನೀರು ಇನ್ನೂ ಎರಡು- ಮೂರು ದಿನ ಬರಲ್ಲವೆಂದು ಹೇಳಿ ಫೋನ್ ಕಟ್ ಮಾಡುತ್ತಿದ್ರು. ಹೀಗಾಗಿ ಮುದಗಲ್ ಪುರಸಭೆ ಅಧಿಕಾರಿಗಳಿಗೆ ಫೋನ್ ಮಾಡಿದ್ರೆ ಅವರು ಕೂಡ ಫೋನ್ ತೆಗೆಯುವುದೇ ಇಲ್ಲ. ಇದರಿಂದ ಬೇಸತ್ತು ಹೋದ ಜನರು ಕೊನೆಗೆ ಶಾಸಕರ ನಂಬರ್ ಪಡೆದು ಫೋನ್ ಮಾಡಿ ಸಮಸ್ಯೆ ಹೇಳಿಕೊಂಡ್ರೆ ಶಾಸಕರು ಕೂಡ ನೀರು ಕೊಡುತ್ತೇವೆ ಎನ್ನುವ ಬದಲು ಬೇಜಾವ್ದಾರಿಯಾಗಿ ಆಡಿದ ಮಾತುಗಳ ಆಡಿಯೋ ವೈರಲ್ ಆಗಿದೆ.

 'ಪುರಸಭೆ ಅಧ್ಯಕ್ಷರನ್ನ ಹೊಡೆಯಿರಿ' ಎಂದ ಶಾಸಕ:

ಮುದಗಲ್ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಹಲವು ಸಂಘಟನೆಗಳು ಪ್ರತಿಭಟನೆ(Protest) ‌ಮಾಡಿ, ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದರು. ಪ್ರತಿಭಟನೆ ವೇಳೆ ನೀರು ನೀಡುತ್ತೇವೆ ಎಂದು ಒಪ್ಪಿಕೊಂಡ ಪುರಸಭೆ ಮತ್ತು ಜನಪ್ರತಿನಿಧಿಗಳು ಈಗ ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದಾರೆ. ಇದರಿಂದಾಗಿ ಮುದಗಲ್ ನ ಹಳೆಪೇಟೆ ಜನರು ನೀರಿಗಾಗಿ ‌ಪರದಾಟ ಪರದಾಡುವಂತಾಗಿದೆ. ಆಕಡೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ, ಈಕಡೆ ಶಾಸಕರ ಬೇಜವಾಬ್ದಾರಿತನದ ಹೇಳಿಕೆ. ಇದರಿಂದ ಹಳೆಪೇಟೆ ಜನರು ಬೇಸತ್ತಿದ್ದಾರೆ. 

ಲಿಂಗಸಗೂರಿನ ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿ(D.S.Holageri) ಅವರಿಗೆ ಫೋನ್ ಮಾಡಿ ನೀರಿನ ಸಮಸ್ಯೆ ಹೇಳಲು ಮುಂದಾಗಿದ್ರು. ಈ ವೇಳೆ ಜನರ ಸಮಸ್ಯೆ ಆಲಿಸಬೇಕಾದ ಶಾಸಕ ಡಿ.ಎಸ್. ಹೂಲಗೇರಿ, ಪೋನ್ ಮಾಡಿದವರಿಗೆ ನೀರು ಒದಗಿಸುವ ಬದಲು ಉಪದೇಶ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾನು ಈಗ ಹೈದರಾಬಾದ್ ನಲ್ಲಿ ಇದ್ದೇನೆ. ನಿಮ್ಮ ಪುರಸಭೆಯ ಅಧ್ಯಕ್ಷ ಮನೆಗೆ ಹೋಗಿ ಹೊಡೆಯುವಂತೆ ಹೇಳಿರುವ ಶಾಸಕ ಡಿ‌.ಎಸ್. ಹೂಲಗೇರಿ.

Raichur: ಮಳೆಗಾಲದಲ್ಲಿಯೂ ಲಿಂಗಸುಗೂರು ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ!

ಪುರಸಭೆ ಚೀಫ್ ಆಫೀಸರ್ ಫೋನ್ ತೆಗೆಯುತ್ತಿಲ್ಲವೆಂದಾಗ ಸಮಸ್ಯೆ ಕೇಳಬೇಕಾದ ಶಾಸಕರು ಬೇಕಾಬಿಟ್ಟಿಯಾಗಿ ಮಾತನಾಡಿ ಮುದಗಲ್ ನಗರಕ್ಕೆ ಒಬ್ಬರು ಇರುತ್ತಾರೆ. ನಾನು ತಾಲೂಕಿಗೆ ಇರುತ್ತೇನೆ. ನಗರದ ಜವಾಬ್ದಾರಿ ಪುರಸಭೆ ಅಧ್ಯಕ್ಷಗೆ ಇರುತ್ತೆ ಎಂದು ಹೇಳಿ ಸಮಸ್ಯೆಯಿಂದ ಜಾರಿಕೊಂಡರು. ಇದೀಗ ಆ ಆಡಿಯೋ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ. ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗದ ಜನಪ್ರತಿನಿಧಿಗಳು, ಪುರಸಭೆ ಅಧ್ಯಕ್ಷರು ಯಾಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!