ಐವತ್ತು ಮೀಟರ್‌ ಬಾಕಿ ಇದ್ದಂತೆ ಅನುದಾನ ಖಲಾಸ್‌!

By Kannadaprabha News  |  First Published Oct 9, 2022, 11:36 AM IST
  • ಐವತ್ತು ಮೀಟರ್‌ ಬಾಕಿ ಇದ್ದಂತೆ ಅನುದಾನ ಖಲಾಸ್‌!
  • ಒಂದೇ ರಸ್ತೆಗೆ ಎರಡೆರಡು ಇಲಾಖೆ ಅನುದಾನ
  • ಏಜೆನ್ಸಿಗಳೇ ಬೇರೆ; ಗುಣಮಟ್ಟಸಮೀಕರಣ ಆಗುವುದೆಂತು?

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ಅ.9) : ಬೃಹತ್‌ ಪ್ರಮಾಣದ ಕಾಮಗಾರಿಗಳ ತುಂಡು ಗುತ್ತಿಗೆ ನೀಡಿ ಬೇಗನೆ ಪೂರ್ಣಗೊಳಿಸುವ ಪರಿಪಾಟಲು ಎಲ್ಲ ಇಲಾಖೆಗಳು ಪ್ರಧಾನವಾಗಿ ಅಳವಡಿಸಿಕೊಂಡಿವೆ. ಇದಕ್ಕಾಗಿ ಪ್ಯಾಕೇಜ್‌ ರೂಪದಲ್ಲಿ ಟೆಂಡರ್‌ ಕರೆದು ಕಾಮಗಾರಿ ನಿರ್ವಹಿಸಲಾಗುತ್ತದೆ. ಆದರೆ ಚಿತ್ರದುರ್ಗದ ಮಟ್ಟಿಗೆ ಐವತ್ತರಿಂದ ನೂರು ಮೀಟರ್‌ಗೂ ಸಿಸಿ ರಸ್ತೆ ಮಾಡುವ ಸುವರ್ಣ ಅವಕಾಶ ಗುತ್ತಿಗೆದಾರರಿಗೆ ಕಲ್ಪಿಸಲಾಗಿದೆ. ಇದಕ್ಕಾಗಿ ಎರಡೆರಡು ಏಜೆನ್ಸಿಗಳನ್ನು ಫಿಕ್ಸ್‌ ಮಾಡಲಾಗಿದ್ದು ಗುಣಮಟ್ಟಸಮೀಕರಣವಾಗುವುದರ ಬಗ್ಗೆ ಗ್ಯಾರಂಟಿಗಳಿಲ್ಲ.

Latest Videos

undefined

ತುಂಡು ಗುತ್ತಿಗೆ ದರ್ಬಾರ್, PWD ಇಲಾಖೆ ಗೋಲ್ಮಾಲ್‌ ಬಗ್ಗೆ ಕೇಳೋರೇ ಇಲ್ಲ!

ಡಿಡಿಪಿಐ ಕಚೇರಿಯಂದ ಸಂತ ಜೋಸೆಫರ್‌ ಕಾನ್ವೆಂಟ್‌ವರೆಗೆ ಸಿಸಿ ರಸ್ತೆ ಮಾಡಲಾಗುತ್ತದೆ ಎಂದು ಎಲ್ಲರೂ ಅಂದು ಕೊಂಡಿದ್ದರು. ವಿದ್ಯುತ್‌ ಕಂಬಗಳ ಶಿಫ್‌್ಟಮಾಡದೇ ಕಾಮಗಾರಿ ನಿರ್ವಹಿಸಲಾಗಿತ್ತು. ಕಾನ್ವೆಂಟ್‌ ಗೆ ಹೋಗುವ ಮಕ್ಕಳಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಐವತ್ತು ಮೀಟರ್‌ನಷ್ಟುಕಾಮಗಾರಿ ನಿರ್ವಹಿಸದೆ ಬಿಡಲಾಗಿದೆ ಎಂದೇ ಜನತೆ ಭಾವಿಸಿದ್ದರು. ಆದರೆ ಭದ್ರಾ ಮೇಲ್ದಂಡೆ ಎಂಜಿನಿಯರ್‌ ಕಾಮಗಾರಿ ಹಿಂದಿನ ಅಸಲಿಯತ್ತನ್ನು ಬಹಿರಂಗ ಪಡಿಸಿದ್ದಾರೆ.

ಡಿಡಿಪಿಐ ಕಚೇರಿಯಿಂದ ಡಿವೈಎಸ್ಪಿ ಮನೆ ಹಾಗೂ ಜಿಲ್ಲಾಧಿಕಾರಿ ನಿವಾಸದಿಂದ ಒನಕೆ ಓಬವ್ವ ಪ್ರತಿಮೆ ವರೆಗೆ ಒಟ್ಟು 2.20 ಕೋಟಿ ರುಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಡಿವೈಎಸ್ಪಿ ಮನೆಯಿಂದ ಕಾನ್ವೆಂಟ್‌ವರೆಗೆ ಇರುವ ನೂರು ಮೀಟರ್‌ನಷ್ಟುರಸ್ತೆಯನ್ನು ನಗರಸಭೆಯವರೇ ಮಾಡುತ್ತಾರೆ. ನಮ್ಮ ಕಾಮಗಾರಿ ಪಟ್ಟಿಯಲ್ಲಿ ಅದು ಇಲ್ಲವೆಂಬ ಸಂಗತಿ ಸ್ಪಷ್ಟಪಡಿಸಿದ್ದಾರೆ.

ಡಿಡಿಪಿಐ ಕಚೇರಿಯಿಂದ ಕಾನ್ವೆಂಟ್‌ವರೆಗೆ ಒಂದೇ ರಸ್ತೆ ಬರುತ್ತದೆ. ಸಿಸಿ ರಸ್ತೆ ಕಾಮಗಾರಿ ಮಾಡುವಾಗ ಪೂರ್ತಿ ಪರಿಗಣಿಸಿ ಎಸ್ಟಿಮೇಷನ್‌ ಮಾಡಿ ಕೈಗೆತ್ತಿಕೊಂಡು ಮುಗಿಸಬಹುದಿತ್ತು. ಒಂದೇ ಇಲಾಖೆ, ಒಬ್ಬರೇ ಗುತ್ತಿಗೆದಾರನಾಗಿದ್ದರೆ ಕಾಮಗಾರಿ ಗುಣಮಟ್ಟಒಂದೇ ತೆರನಾಗಿದ್ದು ಒಮ್ಮೆಲೆ ಮುಗಿಯುತ್ತಿತ್ತು. ಅಚ್ಚರಿ ಎಂದರೆ ಭದ್ರಾ ಮೇಲ್ದಂಡೆ ಅಧಿಕಾರಿಗಳು ಈ ರಸ್ತೆಯಲ್ಲಿ ಕಾಂಕ್ರೀಟ್‌ ಕೆಲಸ ಮುಗಿಸಿದ್ದಾರೆ. ಆದರೆ ನಗರಸಭೆಯವರು ಇನ್ನು ಅಥ್‌ರ್‍ ವರ್ಕ್ ಕೈಗೆತ್ತಿಕೊಂಡಿಲ್ಲ. ಈ ಐವತ್ತು ಮೀಟರ್‌ ಸಿಸಿ ರಸ್ತೆ ಮಾಡುವ ಗುತ್ತಿಗೆದಾರ ಕಾಂಕ್ರೀಟನ್ನು ಬಾಂಡ್ಲಿಯಲ್ಲಿ ತಂದು ಸುರಿಯುತ್ತಾನೋ, ಮಷನರಿ ಬಳಸುತ್ತಾನೋ ಅರ್ಥವಾಗದಂತಾಗಿದೆ.

ಚಿತ್ರದುರ್ಗದ ತುಂಬಾ ಇಂತಹ ಅನೇಕ ಕಾಮಗಾರಿಗಳು ನಿರ್ವಹಣೆ ಮಾಡಲ್ಪಟ್ಟಿವೆ. ಕಾಮಗಾರಿಗಳ ಉದ್ದ ಅಗಲ ಗ್ರಹಿಸಲು ನಿಲುಕುತ್ತಿಲ್ಲ. ಬಹುತೇಕ ಕಡೆ ಪಾರದರ್ಶಕ ನಿಯಮಾವಳಿ ಅನುಸರಿಸಲಾಗಿಲ್ಲ. ನಿಯಮಾವಳಿ ಪ್ರಕಾರ ಕಾಮಗಾರಿ ಪೂರ್ಣಗೊಂಡ ನಂತರ ಬೋರ್ಡ್‌ ನೆಟ್ಟು ಸಂಬಂಧಿಸಿದ ಗುತ್ತಿಗೆದಾರನ ಹೆಸರು, ಮೊತ್ತ, ಕಾಮಗಾರಿ ಪ್ರಾರಂಭದ ದಿನ, ಮಕ್ತಾಯ ಎಲ್ಲವೂ ನಮೂದಿಸಬೇಕು. ಆದರೆ ಚಿತ್ರದುರ್ಗದ ಸಿಸಿ ರಸ್ತೆ ಕಾಮಗಾರಿಗೆ ಇದು ಅನ್ವಯವಾದಂತೆ ಕಾಣಿಸುತ್ತಿಲ್ಲ. ಲೋಕೋಪಯೋಗಿ ಇಲಾಖೆಯವರು ಮಾಡಿದ ಕಾಮಗಾರಿ ಹೊರತು ಪಡಿಸಿ ಉಳಿದ ಯಾವ ಸಿಸಿ ರಸ್ತೆ ನಿರ್ಮಾಣಕ್ಕೂ ಬೋರ್ಡ್‌ ನೆಟ್ಟು ಮಾಹಿತಿ ಹಾಕಿದ ದೃಶ್ಯಗಳು ಕಾಣಿಸುತ್ತಿಲ್ಲ.

ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ : ತಾಯಿ ಮುಂದೆಯೇ ಪ್ರಾಣಬಿಟ್ಟ ನವಜಾತ ಅವಳಿ ಮಕ್ಕಳು

ಅಂದಹಾಗೆ ಡಿಡಿಪಿಐ ಕಚೇರಿಯಿಂದ ಡಿವೈಎಸ್ಪಿ ಮನೆವರೆಗೆ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿರುವ ಭದ್ರಾ ಮೇಲ್ದಂಡೆ ಅಧಿಕಾರಿಗಳು ಈ ರಸ್ತೆ ಪಕ್ಕದಲ್ಲಿಯೇ ಚರಂಡಿ ಹಾಗೂ ಫುಟ್‌ ಪಾತ್‌ ನಿರ್ಮಿಸುತ್ತಾರಂತೆ. ಮೊದಲು ಚರಂಡಿ ನಿರ್ಮಿಸಿ ನಂತರ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿತ್ತು. ವಿದ್ಯುತ್‌ ಕಂಬಗಳ ಸ್ಥಳಾಂತರ ಮಾಡುವ ಕೆಲಸ ನಿಧಾನವಾಗಿದ್ದರಿಂದ ಏಜೆನ್ಸಿಯವ ಸಿಸಿ ರಸ್ತೆ ಮಾಡಿದ್ದಾನೆಂಬ ಸಮಜಾಯಿಷಿ ಅಧಿಕಾರಿಗಳದ್ದು.

click me!