ಮಂಡ್ಯ: ನೆರೆ ಸಂತ್ರಸ್ತರಿಗೆ 10 ಲಾರಿ ಸಾಮಗ್ರಿ ರವಾನೆ

By Kannadaprabha NewsFirst Published Aug 16, 2019, 1:26 PM IST
Highlights

ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಶಾಸಕ ಡಿ.ಸಿ.ತಮ್ಮಣ್ಣ ಪ್ರತಿಷ್ಠಾನದ ವತಿಯಿಂದ 50 ಲಕ್ಷ ರು. ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ರವಾನಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.  ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯರಮೇಶ್‌ ಹಸಿರು ನಿಶಾನೆ ತೋರಿಸುವ ಮೂಲಕ ಪರಿಹಾರ ಸಾಮಗ್ರಿಗಳನ್ನು ಹೊತ್ತ 10 ಲಾರಿಗಳಿಗೆ ಚಾಲನೆ ನೀಡಿದರು.

ಮಂಡ್ಯ(ಆ.16): ಶಿವಮೊಗ್ಗ ಮತ್ತು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಶಾಸಕ ಡಿ.ಸಿ.ತಮ್ಮಣ್ಣ ಪ್ರತಿಷ್ಠಾನದ ವತಿಯಿಂದ 50 ಲಕ್ಷ ರು. ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ರವಾನಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿದರು.

10 ಲಾರಿ ಸಾಮಾಗ್ರಿ:

ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸುವ ಕಾರ್ಯಕ್ಕೆ ಶಾಸಕ ಡಿ.ಸಿ.ತಮ್ಮಣ್ಣ , ಪುತ್ರಿ ಡಿ.ಸಿ.ತಮ್ಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯರಮೇಶ್‌ ಹಸಿರು ನಿಶಾನೆ ತೋರಿಸುವ ಮೂಲಕ ಪರಿಹಾರ ಸಾಮಗ್ರಿಗಳನ್ನು ಹೊತ್ತ 10 ಲಾರಿಗಳಿಗೆ ಚಾಲನೆ ನೀಡಿದರು.

ಶಾಸಕ ತಮ್ಮಣ್ಣ ಮಾತನಾಡಿ, ಉತ್ತರ ಕರ್ನಾಟಕ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉಂಟಾದ ಜಲ ಪ್ರಳಯದಿಂದ ಜನರು ಸಂತ್ರಸ್ತರಾಗಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಸ್ಪಂದಿಸಿ ನೆರವಿಗೆ ಧಾವಿಸುವುದು ಪ್ರತಿಯೊಬ್ಬರ ಕರ್ತವ್ಯ. ಮದ್ದೂರು ಕ್ಷೇತ್ರದ ದಾನಿಗಳು ನೆರವಿನ ಮಹಾಪೂರವೇ ಹರಿಸಿದ್ದಾರೆ. ಈ ಸಹೃದಯ ದಾನಿಗಳಿಗೆ ಪ್ರತಿಷ್ಠಾನದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿಷ್ಠಾನದ ಅಧ್ಯಕ್ಷೆ ಸೌಮ್ಯರಮೇಶ್‌ ಮಾತನಾಡಿ, ಉತ್ತರಕರ್ನಾಟಕದಲ್ಲಿ ವರ ಆಗ ಬೇಕಾದಂತಹ ಮಳೆಯೇ ಶಾಪವಾಗಿ ಪರಿಣಮಿಸಿದೆ. ಸಂತ್ರಸ್ತರಿಗೆ ನೆರವಾಗಬೇಕೆಂಬ ಉದ್ದೇಶದಿಂದ 50 ಲಕ್ಷ ರು. ಮೌಲ್ಯದ ವಸ್ತುಗಳನ್ನು ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ನೆರೆ ಸಂತ್ರಸ್ತರಿಗೆ ನೆರವು: 4000 ಚಪಾತಿ ತಯಾರಿ

ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್‌, ಮೈಸೂರು ವಿಭಾಗದ ವೀಕ್ಷಕ ಎಸ್‌.ಪಿ.ಸ್ವಾಮಿ, ಜಿ.ಪಂ.ಸದಸ್ಯ ಬೋರಯ್ಯ, ಮರಿಹೆಗ್ಗಡೆ, ಮುಖಂಡರಾದ ಚಿಕ್ಕತಿಮ್ಮೆಗೌಡ, ದಾಸೇಗೌಡ, ಹೊನ್ನೇಗೌಡ, ಗ್ರಾ ಪಂ.ರವಿ, ಮಹೇಶ್‌, ಪುರಸಭಾ ಸದಸ್ಯರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.

click me!