ಕೆಆರ್‌ಎಸ್‌ ಸಂಪೂರ್ಣ ಭರ್ತಿ, ನಾಲೆಗೂ ನೀರು

Published : Aug 16, 2019, 01:09 PM ISTUpdated : Aug 16, 2019, 02:29 PM IST
ಕೆಆರ್‌ಎಸ್‌ ಸಂಪೂರ್ಣ ಭರ್ತಿ, ನಾಲೆಗೂ ನೀರು

ಸಾರಾಂಶ

ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಾವೇರಿ ನದಿ ಹಾಗೂ, ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ನಾಲೆಗಳಿಗೆ ನೀರು ಹರಿಸದೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದ್ದು, ಇದನ್ನು ರೈತರು ತೀವ್ರವಾಗಿ ಖಂಡಿಸಿದ್ದರು. ಇದೀಗ ಜಲಾಶಯ ಭರ್ತಿಯಾಗಿದ್ದು, ಕಾವೇರಿ ನದಿಗೂ, ನಾಲೆಗಳಿಗೂ ನೀರು ಬಿಡಲಾಗಿದೆ.

ಮಂಡ್ಯ(ಆ.16): ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್‌(ಕೃಷ್ಣರಾಜ ಸಾಗರ ಜಲಾಶಯ) ಅಣೆಕಟ್ಟೆಆ.15 ರಂದು ಸಂಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ.

ಜಲಾಶಯ 124.80 ಅಡಿ ಎತ್ತರವಿದ್ದು, ಗುರುವಾರ 124.80 ಅಡಿ ಭರ್ತಿಯಾಗಿದೆ. 18978 ಕ್ಯುಸೆಕ್‌ ಒಳ ಹರಿವು ಬರುತ್ತಿದ್ದರೆ, ಕಾವೇರಿ ನದಿಗೆ 13,459 ಕ್ಯುಸೆಕ್‌ ಹಾಗೂ ನಾಲೆಗಳಿಗೆ 2761 ಕ್ಯುಸೆಕ್‌ ನೀರನ್ನು ಬಿಡಲಾಗುತ್ತಿದೆ.

ಒಂದೆಡೆ ಪ್ರವಾಹ; ಮತ್ತೊಂದೆಡೆ ಹನಿ ನೀರಿಗಾಗಿ ಜನರ ಪರಿತಾಪ!

ಆ.5ಕ್ಕೆ ಕೇವಲ 83 ಅಡಿ ಇದ್ದ ಜಲಾಶಯ 10 ದಿನಗಳಲ್ಲಿ 41 ಅಡಿ ಏರಿಕೆ ಕಂಡಿದೆ. ಕಳೆದ ವರ್ಷ ಜುಲೈ 25ಕ್ಕೆ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಜಲಾಶಯದಿಂದ ನದಿ ಮೂಲಕ ತಮಿಳುನಾಡಿಗೆ ಸಾಕಷ್ಟುಪ್ರಮಾಣದಲ್ಲಿ ನೀರು ಬಿಡಲಾಗಿದೆ. ಆದರೆ, ನಾಲೆಗಳಿಗೆ ತಡವಾಗಿ ನೀರು ಹರಿಸಿದ್ದರಿಂದ ಕೆರೆ ಕಟ್ಟೆತುಂಬಲು ಇನ್ನೂ 15 ರಿಂದ 20 ದಿನಗಳ ಕಾಲ ಕಾಲಾವಕಾಶ ಬೇಕು.

ಮಳೆಗಾಗಿ ಹಾಡು ಹಾಡಿ ಪ್ರಾರ್ಥಿಸಿದ ಮಂಡ್ಯ ಶಾಸಕ

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ