ನೆರೆ ಸಂತ್ರಸ್ತ ಕೇಂದ್ರದಲ್ಲಿ ಹಿಂದು ಮುಸ್ಲಿಂ ರಕ್ಷಾ ಬಂಧನ

Published : Aug 16, 2019, 12:51 PM IST
ನೆರೆ ಸಂತ್ರಸ್ತ ಕೇಂದ್ರದಲ್ಲಿ ಹಿಂದು ಮುಸ್ಲಿಂ ರಕ್ಷಾ ಬಂಧನ

ಸಾರಾಂಶ

ಬೆಳಗಾವಿ ನೆರೆ ಸಂತ್ರಸ್ತರ ಕೇಂದ್ರದಲ್ಲಿ ಹಿಂದು, ಮುಸ್ಲಿಂರು ಒಂದಾಗಿ ರಕ್ಷಾ ಬಂಧನ ಆಚರಿಸಿದರು. ಮನೆ, ತೋಟ ಎಲ್ಲವನ್ನೂ ಕಳೆದುಕೊಂಡಿದ್ದರೂ ಕೇಂದ್ರದಲ್ಲಿದ್ದ ಮಹಿಳೆಯರು ಪುರುಷರನ್ನು ಸಾಲಾಗಿ ಕೂರಿಸಿ ರಾಖಿ ಕಟ್ಟಿ ಸಹೋದರ ಸಂಬಂಧ ಎತ್ತಿ ಹಿಡಿಯುವ ಹಬ್ಬವನ್ನು ಸರಳವಾಗಿ ಆಚರಿಸಿದರು.

ಬೆಳಗಾವಿ(ಆ.16): ನೆರೆ ಸಂತ್ರಸ್ತರ ಕೇಂದ್ರದಲ್ಲಿ ಹಿಂದು, ಮುಸ್ಲಿಂರು ಒಂದಾಗಿ ರಕ್ಷಾ ಬಂಧನ ಆಚರಿಸಿದರು. ಮನೆ, ತೋಟ ಎಲ್ಲವನ್ನೂ ಕಳೆದುಕೊಂಡಿದ್ದರೂ ಕೇಂದ್ರದಲ್ಲಿದ್ದ ಮಹಿಳೆಯರು ಪುರುಷರನ್ನು ಸಾಲಾಗಿ ಕೂರಿಸಿ ರಾಖಿ ಕಟ್ಟಿ ಸಹೋದರ ಸಂಬಂಧ ಎತ್ತಿ ಹಿಡಿಯುವ ಹಬ್ಬವನ್ನು ಸರಳವಾಗಿ ಆಚರಿಸಿದರು.

ಸಂಕಷ್ಟದಲ್ಲೂ ಹಿಂದೂ ಮುಸ್ಲಿಂ ಬಾಂಧವರು ರಕ್ಷಾ ಬಂಧನ ಆಚರಣೆ ಮಾಡಿದ್ದಾರೆ. ಪರಿಹಾರ ಕೇಂದ್ರದಲ್ಲಿರಾಖಿ ಹಬ್ಬ ಆಚರಣೆ ಮಾಡಿ ಸಹೋದರ ಸಂಬಂಧ ವೃದ್ದಿಸಿಕೊಂಡರು.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದಲ್ಲಿ ಪರಿಹಾರ ಕೇಂದ್ರದಲ್ಲಿ ಪುರುಷರನ್ನು ಸಾಲಾಗಿ ಕೂರಿಸಿ ಸಹೋದರಿಯರು ರಾಖಿ ಕಟ್ಟಿ ಸಿಹಿ ತಿನ್ನಿಸಿದರು. ಸಮಸ್ಯೆ ಆಲಿಸಲು ಬಂದ ಶಾಸಕ ಸತೀಶ್ ಜಾರಕಿಹೊಳಿಗೂ ನೆರೆ ಸಂತ್ರಸ್ತರು ರಾಖಿ ಕಟ್ಟಿದರು.

PREV
click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ: ಇಂದು ಕಲಾಪ ಮುಂದೂಡುವ ಸಾಧ್ಯತೆ
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!