
ಧಾರವಾಡ(ಜು.12): ನಾನು 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. 6 ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಮುಖ್ಯಮಂತ್ರಿ ಆಗುವ ಯೋಗ್ಯತೆ ನನೆಗೂ ಇದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಮುಖ್ಯಮಂತ್ರಿ ಆಗಲಿಕ್ಕೆ ಆಸೆ ನನಗೂ ಆಸೆ ಇದ್ದೇ ಇದೆ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಉಮೇಶ ಕತ್ತಿ, ಶಾಸಕ, ಸಚಿವ, ಸಿಎಂ ಬಳಿಕ ಪ್ರಧಾನಿ ಆಗುವ ಆಸೆ ಇದ್ದೇ ಇರುತ್ತದೆ. ಹಾಗೆ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದ್ರೆ ನಾನು ಉತ್ತರ ಕರ್ನಾಟಕ ಜನರನ್ನ ಎಬ್ಬಿಸಬೇಕಾಗುತ್ತದೆ. ಉ.ಕರ್ನಾಟಕಕ್ಕೆ ಅನ್ಯಾಯ ಆದ್ರೆ ನಾನು ಸುಮ್ಮನಿರಲ್ಲ, ತೊಂದರೆ ಆದರೆ ಉ.ಕರ್ನಾಟಕದ ಪ್ರತ್ಯೇಕವಾಗಿ ಕಟ್ಟಬೇಕಾಗುತ್ತದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿದ್ದಾರೆ. ರಾಜ್ಯಕ್ಕೆ ಒಬ್ಬ ಮುಖ್ಯಮಂತ್ರಿ ಇರ್ತಾರೆ. ಈ ಸಾರಿ ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಾಲಾವಣೆ ಮಾಡ್ತೀರೋ?, ಇಲ್ಲೋ? ಎಂದ ಕತ್ತಿ
ದೆಹಲಿಯಲ್ಲಿ ಸಿಎಂ ಕುಟುಂಬ ವಿರುದ್ಧ ಆರೋಪದ ವಿಚಾರವಾಗಿ ಮಾತನಾಡಿದ ಸಚಿವ ಕತ್ತಿ ಅವರು, ಕಾಂಗ್ರೆಸ್‌ನವರಿಗೆ ಬೇರೆ ಕೆಲಸವಿಲ್ಲ ಅವರು ಬರೀ ಆರೋಪವನ್ನೇ ಮಾಡುತ್ತಿದ್ದಾರೆ. ಕೋರ್ಟ್ ಹೋಗಲಿ, ಸಿಬಿಐ ಇದೆ ಇಡಿ ಇದೆ. ಸಿದ್ದರಾಮಯ್ಯರದ್ದು 10 ಪರ್ಸೆಂಟ್ ಸರಕಾರ ಎಂದು ರಾಜ್ಯದ ಜನರು ಮಾತನಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಸರಕಾರ ಏನೆ ಬ್ರಷ್ಟಾಚಾರ ಮಾಡಲಿ, ಕೋರ್ಟ್‌ಗೆ ಹೋಗಲಿ, ನಮ್ಮ ಸರಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಶಾಸಕ ಅರವಿಂದ ಬೆಲ್ಲದ್ ಸಿಎಂ ಆಗುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾಕೆ ಅರವಿಂದ ಬೆಲ್ಲದ್ ಸಿಎಂ ಆಗಬಾರದು ? ಎಂದು ಹೇಳುವ ಮೂಲಕ ಸಚಿವ ಉಮೇಶ ಕತ್ತಿ. ಶಾಸಕ ಅರವಿಂದ ಬೆಲ್ಲದ್ ಪರ ಬ್ಯಾಟ್ ಮಾಡಿದ್ದಾರೆ. ನಾನು ಆಗಬಹುದು, ನಿರಾಣಿ ಅವರೂ ಆಗಬಹುದು. ಸದ್ಯ ಆರ್ಥಿಕವಾಗಿ ಸದೃಢವಾಗಬೇಕಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದ್ರೆ ನಾನು ಸುಮ್ಮನಿರಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂಗೆ ಕತ್ತಿ ಟಾಂಗ್ ಕೊಟ್ಟಿದ್ದಾರೆ.