ಉಡುಪಿಯಲ್ಲಿ ಮಗು ಅಪಹರಣ : ಉತ್ತರ ಕನ್ನಡದಲ್ಲಿ ಸಿಕ್ಕಿಬಿದ್ದ ಆರೋಪಿ

By Suvarna NewsFirst Published Jul 12, 2021, 12:49 PM IST
Highlights
  • ಉಡುಪಿಯಲ್ಲಿ ನಡೆದ ಗಂಡು ಮಗುವಿನ ಅಪಹರಣ ಪ್ರಕರಣ 
  • ಅಪಹರಣಕಾರನನ್ನು ಬಂಧಿಸಿದ್ದು, ಮಗುವನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ.  

ಉಡುಪಿ (ಜು.12):  ಉಡುಪಿಯಲ್ಲಿ ನಡೆದ ಗಂಡು ಮಗುವಿನ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯವಾಗಿದೆ. ಅಪಹರಣಕಾರನನ್ನು ಬಂಧಿಸಿದ್ದು, ಮಗುವನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ.  

ನಿನ್ನೆ ಬೆಳಿಗ್ಗೆ ಉಡುಪಿಯ ಕರಾವಳಿ ಜಂಕ್ಷನ್ ನಲ್ಲಿ ನಡೆದಿದ್ದ ಮಗು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮ್ (45) ಎಂಬಾತನನ್ನು ಬಂಧಿಸಲಾಗಿದೆ. ಉತ್ತರಕನ್ನಡ‌‌‌ ಜಿಲ್ಲೆಯ ಕುಮಟ ರೈಲ್ವೆ  ನಿಲ್ದಾಣದಲ್ಲಿಂದು ಬಂಧಿಸಲಾಗಿದೆ. 

ಗಂಡು ಮಗುವಿಲ್ಲದ ಕೋಪ: ಹೆಣ್ಮಗಳನ್ನು ಗೋಡೆಗೆ ಜಜ್ಜಿ ಕೊಂದ ತಂದೆ

 ನಗರ ಠಾಣೆ ಎಸ್ಸೈ ಅಶೋಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಬಂಧನವಾಗಿದ್ದು, ಮಗು ಹಾಗೂ ಆರೋಪಿಯನ್ನ ನಗರ ಠಾಣೆಗೆ ಕರೆತರಲಾಗಿದೆ. 

ಮಗುವನ್ನ ಅಪಹರಿಸಿ ಖಾಸಗಿ ಬಸ್ಸು ಹತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಯ ಪರಿಚಯ ಮಾಡಿಕೊಂಡಿದ್ದ ಆರೋಪಿ ನಿನ್ನೆ ಬೆಳಿಗ್ಗೆ ಮಗುವಿಗೆ ತಿಂಡಿ ಮಾಡಿಸಿ ಬರುತ್ತೇನೆ ಎಂದು ಕರೆದುಕೊಂಡು ಹೋಗಿ ಮಗುವನ್ನ ಎತ್ತಿಕೊಂಡು ಬಸ್ಸು ಹತ್ತಿ ಪರಾರಿಯಾಗಿದ್ದ.

ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕು ಬಂಧಿಸಿದ್ದಾರೆ. 

ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ವಿಚಾರಣೆ ವೇಳೆ ಈ ಮಗು ತನ್ನದೇ ಎಂದು ಅರೋಪಿ ವಾದಿಸುತ್ತಿದ್ದಾನೆನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಲಾಗಿದೆ.

click me!