ಜಾರಕಿಹೊಳಿ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಎಂಟ್ರಿ..?

By Kannadaprabha News  |  First Published Jul 12, 2021, 12:57 PM IST

* ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕ
* ಉ-ಖಾನಾಪುರ (ಎಸ್ಟಿ ಮೀಸಲು) ಜಿಪಂ ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ
* ಜಾರಕಿಹೊಳಿ ಕುಟುಂಬದಿಂದ ಮತ್ತೊಬ್ಬರು ರಾಜಕೀಯ ಎಂಟ್ರಿಗೆ ಸಿದ್ಧತೆ 


ಆನಂದ ಭಮ್ಮನ್ನವರ 

ಸಂಕೇಶ್ವರ(ಜು.12): ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಗೋಕಾಕನ ಜಾರಕಿಹೊಳಿ ಕುಟುಂಬದಿಂದ ಮತ್ತೋರ್ವ ಸದಸ್ಯೆ ಅಧಿಕೃತವಾಗಿ ಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಬರುವ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕುವ ಲೆಕ್ಕಾಚಾರದಲ್ಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೋಳಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿ.

Tap to resize

Latest Videos

ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರಕ್ಕೆ ಒಳಪಡುವ ಉ-ಖಾನಾಪುರ (ಎಸ್ಟಿಮೀಸಲು) ಜಿಪಂ ಕ್ಷೇತ್ರದಿಂದ ಶಾಸಕ ಸತೀಶ ಜಾರಕಿಹೊಳಿ ಪುತ್ರಿ ಸ್ಪರ್ಧೆಗೆ ಇಳಿಯಲಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬಂದಿದ್ದು, ಪ್ರಿಯಾಂಕ ಜಾರಕಿಹೊಳಿ ಸ್ಪರ್ಧೆ ಮಾಡಿದ್ದೆಯಾದರೆ ಉ-ಖಾನಾಪುರ ಜಿ.ಪಂ ಕ್ಷೇತ್ರದ ಚುನಾವಣೆ ಜಿಲ್ಲೆಯ ಜನರ ಗಮನ ಸೆಳೆಯಲಿದೆ.

ಪುತ್ರಿ ಪ್ರಿಯಾಂಕ ಜಾರಕಿಹೊಳಿ ಜಿ.ಪಂ ಗೆ ಸ್ಪರ್ಧೆ ಬಗ್ಗೆ ಅಧಿಕೃತ ಘೋಷಣೆ ಮಾಡದೆ ಕಾದು ನೋಡುವ ತಂತ್ರವನ್ನು ಸತೀಶ ಜಾರಕಿಹೊಳಿ ತಾಳಿದ್ದಾರೆ. ಈ ಹಿಂದೆ ಹೆಬ್ಬಾಳ ಜಿ.ಪಂ ಕ್ಷೇತ್ರವಾಗಿದ್ದ ಇದು ಪ್ರಸ್ತುತ ಸರ್ಕಾರ ಹೊರಡಿಸಿರುವ ನೂತನ ಉ.ಖಾನಾಪುರ ಕ್ಷೇತ್ರವಾಗಿದೆ. ಕಳೆದ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಗೆಲವು ಸಾಧಿಸಿದ್ದರು.

ರಾಜ್ಯದ ನಾಲ್ವರು ಕೇಂದ್ರದಲ್ಲಿ ಮಂತ್ರಿ ಆಗಿರೋದು ನಿಷ್ಪ್ರಯೋಜಕ: ಜಾರಕಿಹೊಳಿ

ಪ್ರಿಯಾಂಕ ಜಾರಕಿಹೊಳಿ ಸ್ಪರ್ಧೆಗೆ ಪೂರಕ ಎಂಬಂತೆ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ಪ್ರಿಯಾಂಕ ಹಾಗೂ ರಾಹುಲ್‌ ಜಾರಕಿಹೊಳಿ, ಸತೀಶ ಜಾರಕಿಹೋಳಿ ಪರವಾಗಿ ಓಡಾಟ ಹಾಗೂ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕ ಜಾರಕಿಹೊಳಿ ಜಿ.ಪಂ ಮುನ್ನೆಲೆಗೆ ಬಂದ ನಂತರ ಹಲವು ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದೆ.

ಉ.ಖಾನಾಪುರ ಜಿ.ಪಂ ಕ್ಷೇತ್ರದ ವ್ಯಾಪ್ತಿಗೆ ಗೋಟೂರ, ಗಾಯಕವಾಡ ನಗರ (ಸಂಕೇಶ್ವರ ಗ್ರಾಮೀಣ) ಕೋಚರಿ, ಅರ್ಜುನವಾಡ, ಕುರಣಿ, ಕುರಣಿವಾಡಿ, ಹೆಬ್ಬಾಳ, ಚಿಕ್ಕಾಲಗುಡ್ಡ, ಹಂಚಿನಾಳ ಮತ್ತು ಉ.ಖಾನಾಪುರ ಗ್ರಾಮಗಳು ಒಳ ಪಡಲಿವೆ. ಈ ಜಿ.ಪಂ ಕ್ಷೇತ್ರದ ವಿಶೇಷ ಎಂದರೆ ಈ ಕ್ಷೇತ್ರದಲ್ಲಿಯೆ ಕಳೆದ 2018ರ ಚುನಾವಣೆಯಲ್ಲಿ ಸತೀಶ ಗೆಲುವಿಗೆ ಸಹಕಾರಿಯಾಗಿದ್ದು, ಇಲ್ಲಿಂದಲೇ ಪುತ್ರಿಯನ್ನು ರಾಜಕೀಯಕ್ಕೆ ಎಂಟ್ರಿ ಕೊಡಿಸುವ ಲೆಕ್ಕಾಚಾರ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಜಾರಕಿಹೊಳಿ ಕುಟುಂಬದಿಂದ ಮತೋರ್ವ ಸದಸ್ಯೆ ಜಿ.ಪಂ ಚುನಾವಣಾ ಮೂಲಕ ಅಧಿಕೃತ ರಾಜಕೀಯ ಎಂಟ್ರಿಗೆ ಸಿದ್ಧತೆ ನಡೆಸಿದ್ದು, ಪ್ರಿಯಾಂಕ ಜಾರಕಿಹೊಳಿ ಜಿ.ಪಂ ಚುನಾವಣೆಗೆ ಸ್ಪರ್ಧಿಸುವ ಮೂಲಕ ಜಾರಕಿಹೋಳಿ ಕುಟುಂಬದಿಂದ ಮೊದಲ ಮಹಿಳೆ ರಾಜಕೀಯ ಪ್ರವೇಶವಾದಂತಾಗಲಿದೆ. ಈ ಬಗ್ಗೆ ಶಾಸಕ ಸತೀಶ ಜಾರಕಿಹೋಳಿ ಮಾತ್ರ ಗುಟ್ಟು ಬಿಟ್ಟು ಕೊಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಜಿ.ಪಂ, ತಾ.ಪಂ ಮೀಸಲಾತಿ ಇನ್ನು ಬದಲಾವಣೆ ಆಗುವ ಹಂತದಲ್ಲಿದೆ. ಉ.ಖಾನಾಪುರ ಕ್ಷೇತ್ರದಿಂದ ಮಗಳನ್ನು ಕಣಕ್ಕೆ ಇಳಿಸುವ ವಿಚಾರ ಇನ್ನು ಮಾಡಿಲ್ಲ. ಚುನಾವಣಾ ಬರಲಿ ನೋಡೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. 

ಪ್ರಿಯಾಂಕ ಜಾರಕಿಹೊಳಿ ಉ.ಖಾನಾಪುರ ಜಿ.ಪಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ನಮ್ಮೆಲ್ಲ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ. ಹಾಗೂ ಸಹೋದರಿ ಪ್ರಿಯಾಂಕ ಜಾರಕಿಹೊಳಿ ಜಿ.ಪಂ ಸದಸ್ಯೆಯಾದರೆ ಯಮಕನಮರಡಿ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳು ಆಗಲಿವೆ ಎಂದು ಗೋಟೂರ ಗ್ರಾಪಂ ಮಾಜಿ ಉಪಾಧ್ಯಕ್ಷ ಹನುಮಂತ ಶೇಖನ್ನವರ ಹೇಳಿದ್ದಾರೆ.
 

click me!