ಟಿಪ್ಪು ಸುಲ್ತಾನ ಬಗ್ಗೆ ರಾಜ್ಯದಲ್ಲಿ ಅನೇಕ ಗೊಂದಲ ಸೃಷ್ಟಿಸಲಾಗಿದೆ. ಟಿಪ್ಪು ಸುಲ್ತಾನರು ಮೈಸೂರು ಹುಲಿಯಾಗಿ ಬ್ರಿಟಿಷರ ವಿರುದ್ಧ ದೇಶಕ್ಕೆ ಸ್ವಾತಂತ್ರ ತಂದು ಕೊಡಲು ಹೋರಾಡಿದ್ದಾರೆ. ಆದರೆ, ಬಿಜೆಪಿಯ ಮಾಜಿ ಸಿಎಂಗಳು ಸೇರಿದಂತೆ ಕೆಲವು ನಾಯಕರು ಟಿಪ್ಪು ಸುಲ್ತಾನ ಮುಸ್ಲಿಮರ ಅರಸ, ಆತ ಓರ್ವ ಮತಾಂಧ ಎಂದು ಹೇಳುತ್ತ, ಹಿಂದೂ - ಮುಸ್ಲಿಮರನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಸಚಿವ ಡಾ.ಎಂ.ಬಿ.ಪಾಟೀಲ
ವಿಜಯಪುರ(ನ.03): ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಟಿಪ್ಪು ಸುಲ್ತಾನರ ಬಗ್ಗೆ ಬಿಜೆಪಿ ನಾಯಕರು ಅಪಪ್ರಚಾರ ಮಾಡಿದ್ದಾರೆ. ಆದರೆ, ಬಿಜೆಪಿಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಇದೇ ನಾಯಕರು ಟಿಪ್ಪು ಸುಲ್ತಾನರ ಟೋಪಿ ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಟೀಕಿಸಿದರು.
ತಿಕೋಟಾ ತಾಲೂಕಿನ ತಾಜಪುರ ಎಚ್. ಗ್ರಾಮದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ ವೃತ್ತ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಬಸವ ತತ್ವದಡಿ ಗ್ರಾಮಗಳಲ್ಲಿ ಎಲ್ಲ ಜಾತಿ ಮತ್ತು ಧರ್ಮದ ಜನರು ಸುಖ, ಸಂತೋಷದಿಂದ ಬದುಕಬೇಕು. ರಾಜಕೀಯದವರು ಬಂದು ಜಗಳ ಹಚ್ಚುತ್ತಾರೆ. ಆದರೆ, ತಾವು ಪ್ರತಿದಿನ ಒಬ್ಬರ ಮುಖವನ್ನೊಬ್ಬರು ನೋಡಲೇಬೇಕು. ಈ ಹಿನ್ನೆಲೆಯಲ್ಲಿ ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಜೀವನ ಸಾಗಿಸಬೇಕು. ಪ್ರತಿಯೊಂದು ಗ್ರಾಮಗಳು ಬಸವಣ್ಣನವರ ಅನುಭವ ಮಂಟಪದ ರೀತಿ ಇರಬೇಕು ಎಂದರು.
ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ಸಚಿವ ಎಂ.ಬಿ. ಪಾಟೀಲ
ಟಿಪ್ಪು ಸುಲ್ತಾನ ಬಗ್ಗೆ ರಾಜ್ಯದಲ್ಲಿ ಅನೇಕ ಗೊಂದಲ ಸೃಷ್ಟಿಸಲಾಗಿದೆ. ಟಿಪ್ಪು ಸುಲ್ತಾನರು ಮೈಸೂರು ಹುಲಿಯಾಗಿ ಬ್ರಿಟಿಷರ ವಿರುದ್ಧ ದೇಶಕ್ಕೆ ಸ್ವಾತಂತ್ರ ತಂದು ಕೊಡಲು ಹೋರಾಡಿದ್ದಾರೆ. ಆದರೆ, ಬಿಜೆಪಿಯ ಮಾಜಿ ಸಿಎಂಗಳು ಸೇರಿದಂತೆ ಕೆಲವು ನಾಯಕರು ಟಿಪ್ಪು ಸುಲ್ತಾನ ಮುಸ್ಲಿಮರ ಅರಸ, ಆತ ಓರ್ವ ಮತಾಂಧ ಎಂದು ಹೇಳುತ್ತ, ಹಿಂದೂ - ಮುಸ್ಲಿಮರನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬ್ರಿಟಿಷರ ಕಾಲದಲ್ಲಿ ಟಿಪ್ಪು ಸುಲ್ತಾನ ಮೈಸೂರು ಭಾಗದಲ್ಲಿ ಅನೇಕ ಹಿಂದು ದೇವಸ್ಥಾನಗಳಿಗೆ ಜಾಗ ನೀಡಿ ಅನುದಾನ ಕೊಟ್ಟಿದ್ದಾನೆ. ಇದು ಬಿಜೆಪಿಯವರಿಗೂ ಗೊತ್ತಿದೆ. ಆದರೂ ರಾಜಕೀಯಕ್ಕಾಗಿ ಹಿಂದೂ- ಮುಸ್ಲಿಮರ ಮತಗಳ ವಿಭಜನೆಗಾಗಿ ಟಿಪ್ಪು ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ ಅನುಭವಿಸಿದ ಕಷ್ಟಗಳು ಬಿಜೆಪಿಯವರಿಗೆ ಗೊತ್ತಿಲ್ಲ. ಬ್ರಿಟಿಷರು ಆತನ ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಇಂಥ ತ್ಯಾಗ, ಬಲಿದಾನ, ಪರಿಶ್ರಮದಿಂದ ಟಿಪ್ಪು ಸುಲ್ತಾನ ಆಡಳಿತ ಮಾಡಿದ್ದಾರೆ. ಅಂದಿನ ಕಾಲದಲ್ಲಿ ಭೂರಹಿತರಿಗೆ ಭೂಮಿ ನೀಡಿದ್ದಾರೆ ಎಂದು ಹೇಳಿದರು.
ಟಿಪ್ಪು ಅಪ್ಪಟ ದೇಶಭಕ್ತ. ಬ್ರಿಟಿಷರ ವಿರುದ್ಧ ಹೋರಾಡಿದ ಜಾತ್ಯತೀತ ವ್ಯಕ್ತಿ. ಹಿಜಾಬ್, ಹಲಾಲ್, ಅಜಾನ್, ಟಿಪ್ಪು ಸುಲ್ತಾನ ವಿಷಯಗಳನ್ನು ಬಳಸಿಕೊಂಡು ಹಿಂದೂ- ಮುಸ್ಲಿಂ ಮತಗಳ ವಿಭಜನೆಗಾಗಿ ಪ್ರತಿಪಕ್ಷಗಳು ಸುಖಾಸುಮ್ಮನೆ ವಿವಾದ ಮಾಡಿದ್ದಾರೆ ಎಂದು ದೂರಿದರು.
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮಾಡಲು ಸಿಎಂ ಜೊತೆ ಚರ್ಚೆ: ಎಂ.ಬಿ.ಪಾಟೀಲ
ಈ ಬಾರಿ ಇಡೀ ಜಿಲ್ಲೆಯಲ್ಲಿ ಕೇವಲ ಏಳು ಟ್ಯಾಂಕರ್ ಮಾತ್ರ ಬಳಸಲಾಗುತ್ತಿದೆ. ಒಂದು ವೇಳೆ ನಾವು ನೀರಾವರಿ ಮಾಡಿ ಅಂತರ್ಜಲ ಹೆಚ್ಚಿಸದಿದ್ದರೆ ಇಂದು 2000 ನೀರಿನ ಟ್ಯಾಂಕರ್‌ಗಳನ್ನು ಬಳಸಬೇಕಾಗುತ್ತಿತ್ತು. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖಂಡ ಆರ್.ಜಿ.ಯರನಾಳ, ಯಾಕೂಬ್ ಜತ್ತಿ, ಮಡ್ಡಿಸಿದ್ದ ಕುಮಟಗಿ, ಜಕ್ಕಪ್ಪ ಯಡವೇ, ಅನೀಲ ಹಿರೇಮಠ, ಶಂಕರಯ್ಯ ಶಾಸ್ತ್ರಿ, ಮಡಿಸಿದ್ದ ಕುಮಟಗಿ, ಶ್ರೀಶೈಲ ಹಾಲಳ್ಳಿ, ಪರಮೇಶ್ ಕಲಬೀಳಗಿ, ಗುರುರಾಜ ಸಾವಳಸಂಗ್, ಗೌಸಪೀರ್ ಮೊಕಾಶಿ, ಶಂಶುದ್ದೀನ್ ಮುಜಾವರ, ರಂಜಾನ್ ತಿಡಗುಂಡಿ, ಆಕೀಬ್ ತಿಡಗುಂದಿ, ಶರೀಪ್ ಸಗರ್, ಅಷ್ಪಾಕ್ ಮೊಕಾಶಿ, ಶೋಹೆಲ್ ಮೊಕಾಶಿ ಮುಂತಾದವರು ಇದ್ದರು.