ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಮ್ಮ ನಾಡಿನ ನೆಲ, ಜಲ, ಮತ್ತಿತರ ಸೌಲಭ್ಯಗಳನ್ನು ಪಡೆದು ಪ್ರಾರಂಭಿಸುವ ಯಾವುದೇ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.50 ರಷ್ಟು ಉದ್ಯೋಗ ಮೀಸಲಿಡಲು ಕಾನೂನು ರೂಪಿಸುವುದು ಅಗತ್ಯ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದರು.
ಮೈಸೂರು : ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಮ್ಮ ನಾಡಿನ ನೆಲ, ಜಲ, ಮತ್ತಿತರ ಸೌಲಭ್ಯಗಳನ್ನು ಪಡೆದು ಪ್ರಾರಂಭಿಸುವ ಯಾವುದೇ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.50 ರಷ್ಟು ಉದ್ಯೋಗ ಮೀಸಲಿಡಲು ಕಾನೂನು ರೂಪಿಸುವುದು ಅಗತ್ಯ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದರು.
ನಗರದ ಉದಯಗಿರಿ ಬಡಾವಣೆಯಲ್ಲಿರುವ ಎಸ್ಡಿಪಿಐ ಕಚೇರಿ ಮುಂಭಾಗ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟದಲ್ಲಿಯೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವತ್ತೂ ಕೂಡ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಸಮಸ್ಯೆ ಬಗೆಹರಿಸುವಲ್ಲಿ ಯಾವೊಬ್ಬ ಮುಖಂಡರೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
undefined
ಕೇವಲ ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುವುದಷ್ಟೇ ವಿರೋಧ ಪಕ್ಷಗಳ ಕೆಲಸವಾಗಿದೆ. ಕರ್ನಾಟಕದಲ್ಲಿ ಬಿಜೆಪಿ 25 ಜನ ಸಂಸದರು ಇದ್ದರೂ ರಾಜ್ಯಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ, ಒಕ್ಕೂಟ ಸರ್ಕಾರದದಿಂದಲೂ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನೀಟ್, ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರ್ಕಾರ ನಡೆಸುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಲು ನೀರಾವರಿ ಮತ್ತು ಕಾನೂನು ತಜ್ಞರನ್ನು ಒಳಗೊಂಡ ಶಾಶ್ವತ ಸಮಿತಿ ರಚನೆ ಅಗತ್ಯ. ಸಮಸ್ಯೆ ಎದುರಾದಾಗ ಮಾತ್ರ ವಕೀಲರನ್ನು ನೇಮಿಸುವುದು.ಕೊಟ್ಯಾಂತರ ರೂ. ಖರ್ಚು ಮಾಡುವುದನ್ನು ಬಿಟ್ಟು. ಸರ್ವ ಪಕ್ಷಗಳು ಒಗ್ಗಟ್ಟಾಗಿ ರಾಜ್ಯದ ಪರ ನಿಲುವು ಪ್ರಕಟಿಸಿದರೆ ಮಾತ್ರ ಪರಿಹಾರ ಕಂಡುಕೊಳ್ಳಬಹುದು ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಜಿಲ್ಲಾಧ್ಯಕ್ಷ ರಫತ್ ಖಾನ್, ಉಪಾಧ್ಯಕ್ಷ ಎಸ್. ಸ್ವಾಮಿ, ಮುಖಂಡರಾದ ನೂರುದ್ದೀನ್ ಮೌಲಾನ, ಮೊಹಮ್ಮದ್ ಶಫಿ, ಫೈರೋಜುಲ್ಲಾ ಷರೀಫ್, ಫರ್ಧೀನ್ ಅಹಮದ್, ಟಿ.ಎಂ. ಜಾವೀದ್, ಮನ್ಸೂರ್ ಖಾನ್ ಮೊದಲಾದವರು ಇದ್ದರು.
ನರೇಗಾ ಕೆಲಸಕ್ಕಾಗಿ ಮಹಿಳೆಯರ ಅಲೆದಾಟ
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಅ.19): ರಾಜ್ಯದಲ್ಲಿ ಕಂಡು ಕೇಳರಿಯದಷ್ಟು ಬರ ಪರಿಸ್ಥಿತಿ ಎದುರಾಗಿದೆ. ಮಳೆಯಿಲ್ಲದೇ ಬೆಳೆ ಒಣಗುತ್ತಿವೆ. ಇದರಿಂದ ರೈತಾಪಿ ವರ್ಗ ಸಂಪೂರ್ಣ ಕಂಗಲಾಗಿದ್ದು, ಜಮೀನುಗಳಲ್ಲಿ ಕೆಲಸವಿಲ್ಲದೇ ಗ್ರಾಮೀಣ ಭಾಗದ ಜನರು ಬದುಕಲು ಸಂಕಷ್ಟಪಡುವಂತಾಗಿದೆ. ಆದ್ರೆ ಸರ್ಕಾರದ ನರೇಗಾ ಕೆಲಸ ಮಾಡಿಯಾದ್ರು ಬದುಕು ನಡೆಸಬೇಕು ಅಂದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಇಲ್ಲದಂತಾಗಿದೆ. ಇದರಿಂದ ಕೆಲಸಕ್ಕಾಗಿ ಮಹಿಳಾ ಕಾರ್ಮಿಕರು ಅಲೆದಾಡುವಂತಾಗಿದೆ.
ಯಾದಗಿರಿಯಲ್ಲಿ ನರೇಗಾ ಕೆಲಸಕ್ಕಾಗಿ ಮಹಿಳೆಯರ ಅಲೆದಾಟ..!
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಜನರು ನಿರುದ್ಯೋಗದಿಂದ ಬಳಲಬಾರದೆಂದು ಕೋಟ್ಯಂತರ ರೂ. ಹಣವನ್ನು ಬಿಡುಗಡೆ ಮಾಡ್ತದೆ. ಅದರಲ್ಲೂ ಸರ್ಕಾರದ ರಾಷ್ಟ್ರೀಯ ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಬಾಗದ ಜನರ ಜೀವನಾಡಿ. ಆದ್ರೆ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ಜನರು ಈ ನರೇಗಾ ಕೆಲಸಕ್ಕಾಗಿ ನಿತ್ಯವೂ ಅಲೆದಾಡುವಂತಾಗಿದೆ. ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎಂಬಂತಾಗಿದೆ ಮಹಿಳಾ ಕೂಲಿ ಕಾರ್ಮಿಕರ ಪರಿಸ್ಥಿತಿ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರು ಕೈಯಲ್ಲಿ ಜಾಬ್ ಕಾರ್ಡ್ ಹಿಡಿದು ನಿತ್ಯವೂ ಅಲೆಯುವಂತಾಗಿದೆ.
ಕೃಷಿ ಸಖಿಯರು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ
ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ನೂರಾರು ಮಹಿಳಾ ಕಾರ್ಮಿಕರು ಕೂಲಿ ಕೆಲಸವನ್ನು ಬಯಸಿ ಅರ್ಜಿ ಸಲ್ಲಿಸಿದ್ರು, ಆದ್ರೆ ಆ ಸಮಯದೊಳಗೆ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಮಳೆಯಿಲ್ಲದೇ ಬೆಳೆ ಹಾನಿಯಾಗಿದ್ದು, ಒಂದು ಕಡೆ ಬದುಕು ಬರಿದಾಗಿದೆ. ಇನ್ನೊಂದು ಕಡೆ ನರೇಗಾ ಕೆಲಸ ಮಾಡಿಯಾದ್ರೂ ಬದುಕನ್ನು ನಡೆಸಬೇಕು ಅಂದ್ರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸವಿಲ್ಲದೇ ಬದುಕಿಗೆ ಬರೆ ಬಿದ್ದಿದೆ. ಸರ್ಕಾರ ಯಾದಗಿರಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಅಂತ ಘೋಷಣೆ ಮಾಡಿದ್ರೂ ಯಾವುದೇ ರೀತಿಯಲ್ಲಿ ಉಪಯೋಗ ಆಗ್ತಿಲ್ಲ. ಇನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಭಾಗದ ಜನರಿಗೆ ಕೂಲಿ ಕೆಲಸ ನೀಡಿ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬೇಕು. ಆದ್ರೆ ಅಧಿಕಾರಿಗಳು ಇರುವ ಕೆಲಸವನ್ನು ಜನರಿಗೆ ನೀಡದೇ ಮಹಾನಗರಗಳಿಗೆ ವಲಸೆ ಹೋಗಲು ಕಾರಣರಾಗ್ತಿರುವುದು ದುರಂತವೇ ಸರಿ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯರಗೋಳ ಮಹಿಳೆಯರ ಆಕ್ರೋಶ
ರಾಷ್ಟ್ರೀಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡೀ ಗ್ರಾಮೀಣ ಭಾಗದ ಜನರಿಗೆ ಒಂದು ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ಹೊಂದಿರ್ತಾರೆ. ಆ ಜಾಬ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಒಂದು ವರ್ಷದಲ್ಲಿ 100 ದಿನ ಕೆಲಸವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಒದಗಿಸಬೇಕು. ಕೂಲಿ ಕಾರ್ಮಿಕರಿಗೆ ಒಂದು ದಿನಕ್ಕೆ 316 ರೂಪಾಯಿ ಹಣವನ್ನು ನೀಡಲಾಗುತ್ತದೆ. ಆದ್ರೆ ಯರಗೋಳ ಗ್ರಾಮದ ಮಹಿಳಾ ಕಾರ್ಮಿಕರಿಗೆ ಪಿಡಿಓ ಕಲ್ಯಾಣ ಕುಮಾರ್ ಅವರು ಸರಿಯಾಗಿ ಕೆಲಸ ನೀಡುತ್ತಿಲ್ಲ ಎಂಬ ಆರೋಪವಾಗಿದೆ.
ಈ ಬಗ್ಗೆ ಕೂಲಿ ಕಾರ್ಮಿಕರು ಮೇಲಾಧಿಕಾರಿಗಳಿಗೆ ದೂರು ನೀಡಿದ ನಂತರ ಕೆಲ ದಿನಗಳ ಕಾಲ ಕೆಲಸ ನೀಡ್ತಾರಂತೆ, ಆಗ ಮತ್ತೆ ಕೆಲಸ ನೀಡದೇ ನಿರ್ಲಕ್ಷ್ಯ ವಹಿಸ್ತಾರೆ. ಇದರಿಂದ ಯರಗೋಳ ಗ್ರಾಮೀಣ ಮಹಿಳಾ ಕಾರ್ಮಿಕರು ತಾಲೂಕಾ ಪಂಚಾಯತ್ ಇಓ ಗಮನಕ್ಕೂ ಸಹ ಸಮಸ್ಯೆ ಬಗೆಹರಿದಿಲ್ಲ. ಈಗ ಯರಗೋಳ ಗ್ರಾಮದ ಮಹಿಳಾ ಕೂಲಿ ಕಾರ್ಮಿಕರು ಸಮರ್ಪಕ ಕೆಲಸ ನೀಡುವಂತೆ ಜಿಲ್ಲಾ ಪಂಚಾಯತ್ ಬಾಗಿಲು ತಟ್ಟಿದ್ದಾರೆ. ಮಳೆಯಿಲ್ಲದೇ ಕೆಲಸವಿಲ್ಲ. ಕೆಲಸವಿದ್ರೂ ಕೆಲಸ ನೀಡದೇ ಅಧಿಕಾರಿಗಳು ನಮ್ಮ ಬದುಕಿಮ ಜೊತೆ ಆಟ ಆಡ್ತಿದ್ದಾರೆ. ನಮಗೆ ಕೆಲಸ ಕೊಡಿ, ಇಲ್ಲ ಜಿಲ್ಲಾ ಪಂಚಾಯತ್ ಬಳಿಯೇ ಇರ್ತಿವ, ಊಟ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.