ನಮ್ಮ ಮೆಟ್ರೋ ಹಳದಿ ಮಾರ್ಗ ಶೀಘ್ರವೇ ಆರಂಭ, ಚೀನಾದಿಂದ ಬೋಗಿ ಬರುವುದನ್ನೇ ಕಾಯುತ್ತಿದೆ ಬಿಎಂಆರ್‌ಸಿಎಲ್‌

By Gowthami K  |  First Published Nov 3, 2023, 2:46 PM IST

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಫೆಬ್ರವರಿ 2024 ರ ಗಡುವನ್ನು ನಿಗದಿಪಡಿಸಿದೆ.


ಬೆಂಗಳೂರು (ಅ.3): ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಫೆಬ್ರವರಿ 2024 ರ ಗಡುವನ್ನು ನಿಗದಿಪಡಿಸಿದೆ. 16 ಕೇಂದ್ರಗಳ ಪೈಕಿ 15 ಕೇಂದ್ರಗಳ ಸಿವಿಲ್ ಕಾಮಗಾರಿ ಶೇ 95 ರಷ್ಟು ಪೂರ್ಣಗೊಂಡಿದ್ದು, ಉಳಿದ ಶೇ 5 ರಷ್ಟು ಡಿಸೆಂಬರ್ 2023 ರ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳಲಿದೆ. 

ಬೆಂಗಳೂರಿನ ಹಳದಿ ಮಾರ್ಗವು 16 ನಿಲ್ದಾಣಗಳೊಂದಿಗೆ ಜಯನಗರದ ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರದವರೆಗೆ (RV road to bommasandra) 18.8 ಕಿಮೀ ವ್ಯಾಪಿಸಿದೆ.  ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗದ ಮೆಟ್ರೋ ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕಾಗಿ ಮೆಟ್ರೋ ರೈಲುಗಳು ಚೀನಾದಲ್ಲಿ ತಯಾರಾಗಿದ್ದು ಭಾರತಕ್ಕೆ ತೆಗೆದುಕೊಂಡು ಬರುವುದು ಮಾತ್ರವೇ ಬಾಕಿಯಿದೆ.  216 ಬೋಗಿ ರೆಡಿಯಾಗಿದ್ದು ನೇರಳೆ ಮತ್ತು ಹಸಿರು ಮಾರ್ಗದ ಮೆಟ್ರೋದಲ್ಲಿ ಓಡಾಡುವ ರೈಲಿಗೆ 126 ಬೋಗಿ ಅಳವಡಿಕೆ ಮಾಡಲಾಗುತ್ತದೆ. ಆರ್‌ವಿ ರಸ್ತೆಯಿಂದ-ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗದಲ್ಲಿ ತಲಾ 6 ಬೋಗಿಗಳ 12 ರೈಲುಗಳು ಓಡಲಿವೆ. 90 ಬೋಗಿಗಳನ್ನು ಹಳದಿ ಮಾರ್ಗಕ್ಕೆ ಮೀಸಲಿಡಲಾಗಿದೆ.

Tap to resize

Latest Videos

undefined

ಪ್ರಯಾಣಿಕರಿಗೆ ಮತ್ತೆ ಸಂಕಷ್ಟ, ಬೆಂಗಳೂರಿನ ಈ ರಸ್ತೆ ಬರೋಬ್ಬರಿ 4 ತಿಂಗಳು ಬಂದ್‌!

ಬೆಂಗಳೂರು ಮೆಟ್ರೋಗಾಗಿ ಕೋಚ್‌ಗಳನ್ನು ಚೀನಾದ ಸಂಸ್ಥೆಯಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಮತ್ತು ಅವರ ದೇಶೀಯ ಪಾಲುದಾರರಾದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ತಯಾರಿಸುತ್ತಿದೆ. ನಿರ್ದಿಷ್ಟವಾಗಿ ಹಳದಿ ಮಾರ್ಗಕ್ಕಾಗಿ ಸಿಆರ್‌ಆರ್‌ಸಿ 12 ಬೋಗಿಯ ಎರಡು ರೈಲುಗಳನ್ನು ತಯಾರಿಸಿ ಕಳುಹಿಸುತ್ತದೆ ಮತ್ತು ಇನ್ನೂ ಐದು Titagarh Rail Systems Ltd ನಿಂದ ತಯಾರಿಸಲ್ಪಟ್ಟಿದೆ. ಚೀನಾದ ಸಿಆರ್‌ಆರ್‌ಸಿಯ ಫ್ಯಾಕ್ಟರಿ ಘಟಕಕ್ಕೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇತ್ತೀಚೆಗೆ ಭೇಟಿ ಕೊಟ್ಟು, ರೈಲುಗಳನ್ನು ವೀಕ್ಷಿಸಿದ್ದಾರೆ.

 ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೊ ಓಡಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ. ಕಮ್ಯುನಿಕೇಷನ್‌ ಬೇಸ್ಡ್‌ ಟ್ರೇನ್‌ ಕಂಟ್ರೊಲ್‌ ಸಿಗ್ನಲಿಂಗ್‌ ಸಿಸ್ಟಂ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲು ಸಂಚಾರವನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಫೆಬ್ರವರಿ 2024 ರಲ್ಲಿ ನಮ್ಮ ಮೆಟ್ರೋದ ಹಳದಿ ಮಾರ್ಗ ಪ್ರಾರಂಭದ ಕುರಿತು ಸುಳಿವು ನೀಡಿದರು.  ಜೊತೆಗೆ ಈ ಮೂರನೇ ಹಂತದ ಮೆಟ್ರೋಗೆ ರೋಲಿಂಗ್ ಸ್ಟಾಕ್‌ನ ಲಭ್ಯತೆ ಮತ್ತು TCMS (ಟ್ರೇನ್ ಕಂಟ್ರೋಲ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಸಾಫ್ಟ್‌ವೇರ್ ವಿತರಣೆಯಲ್ಲಿನ ವಿಳಂಬವು ಯೋಜನೆಗೆ ಅಡ್ಡಿಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಮೆಟ್ರೋ ಸ್ಫೋಟಿಸುವ ಬೆದರಿಕೆ; ಮಹಿಳೆಗೆ ಪ್ಯಾರಿಸ್ ಪೊಲೀಸರ ಗುಂಡೇಟು!

ಈ ಬಗ್ಗೆ ತಮ್ಮ ಟ್ವಿಟ್ಟರ್ (ಎಕ್ಸ್) ಖಾತೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಈ ರೀತಿ ಬರೆದುಕೊಂಡಿದ್ದಾರೆ.

ನಮ್ಮ ಮೆಟ್ರೋ ಹಳದಿ ಮಾರ್ಗ ಕುರಿತಾದ ಮಹತ್ವದ ಅಪ್ಡೇಟ್ : 
ಕಳೆದ ತಿಂಗಳು ನಮ್ಮ ಮೆಟ್ರೋ ಹಳದಿ ಮಾರ್ಗದ ಪರಿಶೀಲನೆ ನಡೆಸಿದ ನಂತರ ನನ್ನ ಗಮನಕ್ಕೆ ಬಂದ ಸಂಗತಿ ಎಂದರೆ, 2024ರ ಆರಂಭದ ಹೊತ್ತಿನಲ್ಲಿ ಈ ಮಾರ್ಗ ಕಾರ್ಯಾರಂಭಕ್ಕೆ ಇದ್ದ ಅಡಚಣೆಗಳು ರೈಲು ಬೋಗಿಗಳು ಹಾಗೂ ಟ್ರೈನ್ ಕಂಟ್ರೋಲ್ ಮ್ಯಾನೇಜ ಮೆಂಟ್ ಸಾಫ್ಟವೇರ್ ಎಂಬುದು. ಬಿ.ಎಂ.ಆರ್.ಸಿ ಎಲ್ ಅಧಿಕಾರಿಗಳು ನೀಡಿದ ಗಡುವು ( ಫೆಬ್ರುವರಿ 2024) ಬಗ್ಗೆಯೂ ಕೂಡ ನನಗೆ ಸಂಶಯವಿದ್ದ ಕಾರಣ, ಮೇಲ್ಕಂಡ ನಮೂದಿಸಿದ ಕಾರಣಗಳನ್ನು ಶೀಘ್ರ ಪರಿಹರಿಸಲು ನಾನು ಸಿ ಆರ್ ಸಿ ಸಿ & Titagarh ರೈಲ್ ಸಿಸ್ಟಮ್ಸ್ ಹಾಗೂ ಬಿ.ಎಂ.ಆರ್.ಸಿ ಎಲ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ನಂತರ ಸಿ ಆರ್ ಸಿ ಸಿ ವತಿಯಿಂದ ಜನವರಿ ಒಳಗಾಗಿ ಬೋಗಿ ಗಳನ್ನು ಒದಗಿಸುವ ವಾಗ್ದಾನ ದೊರೆಯಿತು. ಹೆಚ್ಚಿನ ಸಂವಹನಕ್ಕಾಗಿ ಬಿ.ಎಂ.ಆರ್.ಸಿ .ಎಲ್ ನ ಉನ್ನತ ಆಧಿಕಾರಿ ಶ್ರೀ ಧೋಕೆ ಅವರ ತಂಡವನ್ನು ಬೀಜಿಂಗ್ ಗೆ ಕಳುಹಿಸಲಾಗಿದ್ದು, ಅವರ ಭೇಟಿ ಫಲಪ್ರದವಾಗಿದೆ ಎಂದು ತಿಳಿಸಲು ಹರ್ಷವೆನಿಸುತ್ತಿದೆ.

ಇದೇ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕಳೆದ ವಾರ ನಾನು ಕೊಲ್ಕತ್ತಾದಲ್ಲಿನ Titagarh ರೈಲ್ ಸಿಸ್ಟಮ್ಸ್ ನ ಫ್ಯಾಕ್ಟರಿ ಗೆ ತೆರಳಿ, ಬೋಗಿ ಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿಶೀಲಿಸಿದ್ದು, ಈ ಕುರಿತಾದ ಕಸ್ಟಮ್ಸ್ & ವೀಸಾ ಸಂಬಂಧಿತ ಮಾಹಿತಿಗಳನ್ನು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ರವರ ಗಮನಕ್ಕೆ ತಂದಿದ್ದು, ಅವುಗಳ ಪರಿಹಾರಕ್ಕಾಗಿ ಸಮರ್ಪಕ ಭರವಸೆಯನ್ನು ಸಚಿವರು ನೀಡಿರುತ್ತಾರೆ. Titagarh ತಂಡವು ನಿಗದಿತ ಸಮಯಕ್ಕೆ ಬೋಗಿಗಳನ್ನು ಒದಗಿಸಲಿರುವದು ಗಮನಾರ್ಹ.

ಇದೇ ಸಂದರ್ಭದಲ್ಲಿ ಎದುರಾದ ಇನ್ನೊಂದು ಅಡೆತಡೆ ಎಂದರೆ TCMS ಸಾಫ್ಟವೇರ್ ನದ್ದು, MELCO ವತಿಯಿಂದ ಈ ಮುಂಚೆ ನಿಗದಿಯಾಗಿದ್ದ ಸಮಯ ಜೂನ್ 2024. ಆದರೆ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಜನವರಿ 2024 ರ ಒಳಗಾಗಿ ಈ ಸಾಫ್ಟವೇರ್ ಬಳಕೆಗೆ ಸಿಗಲಿದೆ ಎಂಬುದು ವಿಶೇಷ .

ಪ್ರಸ್ತುತ ಘಟನಾವಳಿಗಳನ್ನು ಗಮನಿಸಿದ ನಂತರ, ನಮ್ಮ ಮೆಟ್ರೋ ಹಳದಿ ಮಾರ್ಗದ ಕಾಮಗಾರಿಗಳು ನಿಗದಿಯಂತೆಯೇ ಪೂರ್ಣಗೊಳ್ಳಲಿದೆ ಎಂಬುದು ಗಮನಾರ್ಹ. ಈ ಕಾಮಗಾರಿ ಕುರಿತಾದ ಹೆಚ್ಚಿನ ಅಪ್ಡೇಟ್ ಗಳನ್ನು ತಮಗೆ ಕಾಲಕಾಲಕ್ಕೆ ನೀಡುತ್ತಲಿರುತ್ತೇನೆ.

click me!