ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ಖಂಡಿಸುತ್ತೇನೆ: ಸಚಿವ ಸುಧಾಕರ್

By Gowthami K  |  First Published Aug 19, 2022, 2:51 PM IST

ರಾಜ್ಯದಲ್ಲಿ ಕೆಲವು ನಾಯಕರು ಸಾವರ್ಕರ್ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.  ಮಾತನಾಡುವ ಮೊದಲು ಸಾವರ್ಕರ್ ಬಗ್ಗೆ ತಿಳಿದುಕೊಳ್ಳಲಿ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಇದರ ಜೊತೆಗೆ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿದ್ದಾರೆ. 


ಚಿಕ್ಕಬಳ್ಳಾಪುರ (ಆ.19): ಕೊಡಗು ಪ್ರವಾಸ ಮಾಡುವ ವೇಳೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೆಲೆ ಮೊಟ್ಟೆ ಎಸೆದ ಪ್ರಕರಣವನ್ನು  ಸಚಿವ ಡಾ. ಕೆ. ಸುಧಾಕರ್ ಖಂಡಿಸಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಕೆಲವು ನಾಯಕರು ಸಾವರ್ಕರ್ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸಾವರ್ಕರ್ ಒಬ್ಬ ಅಪ್ಪಟ ದೇಶ ಪ್ರೇಮಿ, ಆದರ್ಶದ ಹೋರಾಟ ಮಾಡಿದ್ದಾರೆ. ಇದರ ಬಗ್ಗೆ ಕೆಲವರಿಗೆ ಭಿನ್ನಾಭಿಪ್ರಾಯ ವಿದ್ದರೇ ಅವರಿಗೆ ದೇಶದ ಬಗ್ಗೆ ಅಭಿಮಾನ ಇರೋದಿಲ್ಲ, ಅಥವಾ ಸ್ವಾತಂತ್ಯ್ಯದ ಹೋರಾಟದ ಬಗ್ಗ ಅರಿವೇ ಇರುವುದಿಲ್ಲ. ಮಾತನಾಡುವ ಮೊದಲು ಸಾವರ್ಕರ್ ಬಗ್ಗೆ ತಿಳಿದುಕೊಳ್ಳಲಿ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಸ್ವಾತಂತ್ಯ್ಯ ಹೋರಾಟದ ವೇಳೆ ಅವರ ಪಾತ್ರ ಜೈಲುವಾಸ ಇವೆಲ್ಲವನ್ನು ತಿಳಿದುಕೊಂಡು ಮಾತನಾಡಬೇಕು, ಸುಮ್ಮನೇ ಬಾಯಿಗೆ ಬಂದ ಹಾಗೆ  ಮಾತನಾಡಬಾರದು ಎಂದಿದ್ದಾರೆ. ಯಾರೆಲ್ಲ ಸಾವರ್ಕರ್ ಬಗ್ಗೆ ತಿಳಿದುಕೊಳ್ಳುವವರಿಗೆ ನಾನೇ ಪ್ರಾಯೋಜಕತ್ವ ನೀಡಿ ಪುಸ್ತಕಗಳನ್ನು ತಂದು ಕೊಡುವೆ ಬೇಕಾದ್ರೆ ಆ ಪುಸ್ತಕಗಳನ್ನು ಓದಿಕೊಳ್ಳಲಿ, ಸಾಕಷ್ಟು ಒಳ್ಳೆಯ ಪುಸ್ತಕಗಳು ಸಾವರ್ಕರ್ ಬಗ್ಗೆ ಬರೆದಿದ್ದಾರೆ,  ಅವುಗಳನ್ನೆಲ್ಲ ಓದಿದ ಬಳಿಕ ಅಚರ ಬಗ್ಗೆ ಮಾತನಾಡಲಿ ಎಂದು ಕಿವಿಮಾತು ಹೇಳಿದ್ದಾರೆ.

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತವನ್ನು ಖಂಡಿಸುತ್ತೇನೆ:
ಕೊಡಗು ಪ್ರವಾಸ ಮಾಡುವ ವೇಳೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೆಲೆ ಮೊಟ್ಟೆ ಎಸೆತ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಆರೋಗ್ಯ ಇಲಾಖೆ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ವಿಪಕ್ಷ ನಾಯಕ ಎಂದರೆ ಶಾಡೋ ಸಿಎಂ ಇದ್ದ ಹಾಗೆ ಅವರ ಮೆಲೆ  ಈ ರೀತಿ ವರ್ತಿಸಿರೋದು ಸರಿಯಲ್ಲ ಎಂದಿದ್ದಾರೆ. ಈಗಾಗಲೇ ಈ ಘಟನೆಯನ್ನು ಸಿಎಂ ಬೊಮ್ಮಾಯಿ ಹಾಗೂ ಬಿ ಎಸ್ ಯಡಿಯೂರಪ್ಪ ಖಂಡಿಸಿದ್ದು, ನಾವು ಇಂತಹ ಘಟನೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ ಎಂದಿದ್ದಾರೆ, ಏನೆ ಆಗಲಿ ಇಂತಹ ಘಟನೆ ನಡೆಯಬಾರದಿತ್ತು, ಮುಂದೆ ಹೀಗೆ ನಡೆಯದಂತೆ ಎಚ್ಚರ ವಹಿಸಲಾಗುವುದೆಂದು ಹೇಳಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಗೂಂಡಾಗಳನ್ನು ಬಂಧಿಸಲು ಎಚ್‌ಸಿಎಂ ಆಗ್ರಹ
ಮೈಸೂರು : ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ವಿಪಕ್ಷೀಯ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆಎಸೆಯುವ ಮೂಲಕ ಅಗೌರವಯುತವಾಗಿ ನಡೆದುಕೊಂಡಿರುವ ಬಿಜೆಪಿ ಯುವ ಮೋರ್ಚಾದ ಗೂಂಡಾಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಆಗ್ರಹಿಸಿದ್ದಾರೆ.

'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'

ಶೇ.40 ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯವನ್ನು ಸಂಪೂರ್ಣ ಕತ್ತಲಿಗೆ ಕೊಂಡೊಯ್ಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಸಂಪುಟದಲ್ಲಿರುವ ಸದಸ್ಯರೇ ಉಗಿಯುತ್ತಿದ್ದರೂ ಬುದ್ಧಿ ಬರುವಂತೆ ತೋರುತ್ತಿಲ್ಲ. ಆಡಳಿತ ನಡೆಸುವ ಯೋಗ್ಯತೆ ಇಲ್ಲದ ಇವರು, ಜನಪರವಾಗಿ ಮತ್ತು ಬಡವರ ಪರವಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರ ಮೇಲೆ ತೋರಿರುವ ವರ್ತನೆ ಸರಿಯಲ್ಲ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಬಿಜೆಪಿಗೆ ಹತಾಶೆ, ಪ್ರತಿಭಟನೆಗೆ ಸರ್ಕಾರದ ಕುಮ್ಮಕ್ಕು: ಸಿದ್ದರಾಮಯ್ಯ ಕಿಡಿ

ಇದು ಗೂಂಡಾ ರಾಜ್ಯದ ಮನಸ್ಥಿತಿಯ ಪ್ರತೀಕವಾಗಿದ್ದು, ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ಬಿಜೆಪಿಗರು ತಮ್ಮ ಹತಾಶೆಯನ್ನು ಈ ರೀತಿಯಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳು ಮತ್ತು ಶೋಷಿತ ವರ್ಗಗಳ ಪರವಾದ ನಾಯಕರೆಂದರೆ ಈ ಮನುವಾದಿಗಳಿಗೆ ಸದಾ ಎಲ್ಲಿಲ್ಲದ ಅಸಹನೆ ಎಂಬುದಕ್ಕೆ ಇದು ಕೂಡಾ ಒಂದು ಉದಾಹರಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

click me!