ಸಾವರ್ಕರ್, ಟಿಪ್ಪು ಫ್ಲೆಕ್ಸ್ ವಿವಾದದಿಂದ ಪ್ರಕ್ಷುಬ್ದಗೊಂಡಿದ್ದ ಶಿವಮೊಗ್ಗ ನಗರ ಗುರುವಾರ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನೈಟ್ ಕರ್ಫ್ಯೂ ವಿಸ್ತರಿಸಲಾಗಿದೆ.
ಶಿವಮೊಗ್ಗ (ಆ.19) : ಸಾವರ್ಕರ್, ಟಿಪ್ಪು ಫ್ಲೆಕ್ಸ್ ವಿವಾದದಿಂದ ಪ್ರಕ್ಷುಬ್ದಗೊಂಡಿದ್ದ ಶಿವಮೊಗ್ಗ ನಗರ ಗುರುವಾರ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತು, ರಾತ್ರಿ ನೈಟ್‌ಕಫä್ರ್ಯ ಗುರುವಾರವೂ ಮುಂದುವರಿಯಿತು. ನಗರದಲ್ಲಿ 144ನೇ ವಿಧಿಯ ಅನ್ವಯ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಆ.19ರವರೆಗೆ ವಿಸ್ತರಿಸಲಾಗಿದೆ.
ಶಾಲಾ-ಕಾಲೇಜು, ವಾಹನ ಸಂಚಾರ, ಬಸ್ ಸಂಚಾರ ಸೇರಿದಂತೆ ಎಲ್ಲ ಸಾಮಾನ್ಯ ಚಟುವಟಿಕೆ ಎಂದಿನಂತೆ ನಡೆಯಿತು. ಗಾಂಧಿ ಬಜಾರ್, ಬಿ.ಎಚ್. ರಸ್ತೆ, ನೆಹರು ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಎಂದಿನಂತೆ ಚಟುವಟಿಕೆ ಕಂಡುಬಂದಿತು. ಆದರೆ, ಸಾವರ್ಕರ್ ಫ್ಲೆಕ್ಸ್‌ಗೆ ಸಂಬಂಧಿಸಿದಂತೆ ಮೊದಲು ವಿವಾದ ಹುಟ್ಟಲು ಕಾರಣವಾಗಿದ್ದ ಸಿಟಿ ಸೆಂಟ್ರಲ್ ಮಾಲ್ ಮಾತ್ರ ಸೋಮವಾರ ಸಂಜೆ ಗಲಭೆಯ ಬಳಿಕ ಮುಚ್ಚಿದ್ದು, ಈವರೆಗೆ ತೆರೆದಿಲ್ಲ. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್‌್ತ ಬಿಗಿಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪೊಲೀಸ್ ರೂಟ್ ಮಾಚ್‌ರ್ ನಡೆಯಿತು.
ಶಿವಮೊಗ್ಗದಲ್ಲಿ ಹಿಂಸಾಚಾರ ಭುಗಿಲೆದ್ದದ್ದೇಕೆ?: ಹಣೆ ಮೇಲೆ ನಾಮ ನೋಡಿ ನಡೆದಿತ್ತಾ ಅಟ್ಯಾಕ್?
ಆರೋಪಿಗಳ ಪೊಲೀಸ್ ಕಸ್ಟಡಿ ವಿಸ್ತರಣೆ:
ಪ್ರೇಮ್ ಸಿಂಗ್(Prem singh) ಎಂಬವರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಒಪ್ಪಿಸಲ್ಪಟ್ಟಿದ್ದ ಎಲ್ಲ ಮೂರು ಆರೋಪಿಗಳ ಪೊಲೀಸ್ ಕಸ್ಟಡಿ ಗುರುವಾರಕ್ಕೆ ಮುಕ್ತಾಯ ಆಗಿದ್ದರಿಂದ ಗುರುವಾರ ಪುನಃ ನ್ಯಾಯಾಲಯ ಎದುರು ಹಾಜರುಪಡಿಸಲಾಯಿತು. ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳಾದ ನದೀಮ್, ಅಬ್ದುಲ್ ರೆಹಮಾನ್, ತನ್ವಿರ್ ಅವರನ್ನು ಪೊಲೀಸರು ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳನ್ನು ಪುನಃ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿತು. ಪೊಲೀಸರು ಶೂಟೌಟ್ ಮಾಡಿ ಬಂಧಿಸಿದ ನಾಲ್ಕನೇ ಆರೋಪಿ ಜಬೀವುಲ್ಲಾ ಸಧ್ಯ ಆಸ್ಪತ್ರೆಯಲ್ಲಿ ಪೊಲೀಸ್ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಂಪೂರ್ಣ ನಿಯಂತ್ರಣದಲ್ಲಿ ನಗರ: ಐಜಿಪಿ:
ನಗರದಲ್ಲಿ ಫ್ಲೆಕ್ಸ್ ವಿವಾದದಿಂದ ಹಳಿ ತಪ್ಪಿದ್ದ ಪರಿಸ್ಥಿತಿ ಈಗ ಸಂಪೂರ್ಣ ಹತೋಟಿಯಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆ.19ರ ಸಂಜೆಯವರೆಗೆ 144ರ ಅನ್ವಯ ನಿಷೇಧಾಜ್ಞೆ ಮುಂದುರಿಯಲಿದೆ ಎಂದು ಪೂರ್ವ ವಲಯ ಐಜಿಪಿ ಕೆ.ತ್ಯಾಗರಾಜನ್ ಹೇಳಿದರು. ಗುರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಂದೋಬಸ್‌್ತ ಕಾರ್ಯಕ್ಕೆಂದು ಹೆಚ್ಚುವರಿಯಾಗಿ ಕರೆಸಿಕೊಳ್ಳಲಾಗಿದ್ದ ಪೊಲೀಸ್ ತುಕಡಿಗಳು ಶಿವಮೊಗ್ಗದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಬಂದೋಬಸ್‌್ತ ಬಿಗಿಗೊಳಿಸಿದ್ದೇವೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.
ಟಿಪ್ಪು Vs ಸಾವರ್ಕರ್ ಫೋಟೋ ವಾರ್: ಶಿವಮೊಗ್ಗ ಘರ್ಷಣೆ ಹಿಂದಿದೆಯಾ SDPI
ಯುವಕನ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಗಲಭೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಶಾಂತಿ- ಸುವ್ಯವಸ್ಥೆಗೆ ಭಂಗ ಉಂಟುಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೊರ ಜಿಲ್ಲೆಗಳಿಂದ ಬಂದ ಪೊಲೀಸ್ ಸಿಬ್ಬಂದಿಯನ್ನು ವಾಪಸ್ ಕಳಿಸುವ ಬಗ್ಗೆ ಶುಕ್ರವಾರ ತೀರ್ಮಾನಿಸಲಾಗುವುದು. ನಗರ ಸಂಪೂರ್ಣ ಸಹಜ ಸ್ಥಿತಿಗೆ ಬಂದ ನಂತರ ನಿಷೇಧಾಜ್ಞೆ ಮುಂದುವರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಳಗ್ಗೆ ಮತ್ತು ಸಂಜೆ 2 ಹೊತ್ತು ವಿವಿಧ ಪಡೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲಿದ್ದಾರೆ. ರಾತ್ರಿ ಬಿಗಿ ಪೊಲೀಸ್ ಬಂದೋಬಸ್‌್ತ ಏರ್ಪಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೇ ಪ್ರಸಾದ್ ಇದ್ದರು.