ಬ್ರಹ್ಮಗಿರಿ ಸರ್ಕಲ್‌ನಲ್ಲಿ ಅಳವಡಿಸಿದ್ದ ಸಾವರ್ಕರ್ ಬ್ಯಾನರ್ ತೆರವು; ಮೆರವಣಿಗೆ ಮೂಲಕ ತೆರವು ಮಾಡಿದ ಹಿಂದೂ ಕಾರ್ಯಕರ್ತರು

By Ravi Nayak  |  First Published Aug 19, 2022, 2:12 PM IST

ಉಡುಪಿಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಸಾವರ್ಕರ್ ಬ್ಯಾನರನ್ನು ತೆರವುಗೊಳಿಸಲಾಗಿದೆ. ಹಿಂದು ಸಂಘಟನೆಗಳು ಅದ್ಧೂರಿ ಮೆರವಣಿಗೆ ಮೂಲಕ ಬ್ಯಾನರ್ ತೆರವುಗೊಳಿಸಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಉಡುಪಿಯ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಅಳವಡಿಸಿದ್ದರು.


ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ ಆ.19: ಉಡುಪಿಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಸಾವರ್ಕರ್ ಬ್ಯಾನರನ್ನು ತೆರವುಗೊಳಿಸಲಾಗಿದೆ. ಬ್ಯಾನರ್ ಅಳವಡಿಸಿದವರೇ ಅದ್ದೂರಿ ಮೆರವಣಿಗೆಯ ಮೂಲಕ ಬ್ಯಾನರ್ ತೆರೆವು ಮಾಡಿದ್ದಾರೆ. ಅಜ್ಜರ ಕಾಡಿನ ಪ್ರಮುಖ ಮಾರ್ಗಗಳಲ್ಲಿ ಬ್ಯಾನರ್ ಕೊಂಡೊಯ್ದು ಬ್ಯಾನರ್ ಚಳುವಳಿ ಸಮಾಪ್ತಿಗೊಳಿಸಿದ್ದಾರೆ. ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ನಾನಾ ಭಾಗಗಳಿಂದ ಭಕ್ತರು ಉಡುಪಿಗೆ ಭೇಟಿ ನೀಡುತ್ತಿದ್ದಾರೆ ಭಕ್ತರ ಅನುಕೂಲಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸುವ ಅಗತ್ಯವಿದೆ ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಸಹಕಾರ ನೀಡುವ ದೃಷ್ಟಿಯಿಂದ ತೆರವುಗೊಳಿಸಿದ್ದೇವೆ ಎಂದು ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ ತಿಳಿಸಿದ್ದಾರೆ.

Latest Videos

undefined

ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ:ಯಶ್ ಪಾಲ್ ಸುವರ್ಣ ನಗರಸಭೆಗೆ ಪತ್ರ

ಬ್ರಹ್ಮಗಿರಿ ಸರ್ಕಲ್(Brahmagiri circle) ನಲ್ಲಿ ಬ್ಯಾನರ್(Banner) ಅಳವಡಿಸಿದಾಗಿನಿಂದಲೂ ವಿಶೇಷ ಪೊಲೀಸ್ ಭದ್ರತೆ ವಹಿಸಲಾಗಿತ್ತು ರಾತ್ರಿ ಹಗಲು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಇದೀಗ ಬ್ಯಾನರ್ ತರವುಗಳಿಸಿರುವುದರಿಂದ ಪೊಲೀಸರ ಕೆಲಸ ಹಗುರಗೊಳಿಸಲಾಗಿದೆ ಎಂದು ಹಿಂದೂ ಮುಖಂಡರು ತಿಳಿಸಿದ್ದಾರೆ. ಬ್ರಹ್ಮಗಿರಿ ಸರ್ಕಲ್ ಗೆ ತೆರಳಿ ಬ್ಯಾನರ್ ಗೆ ಪುಷ್ಪಾರ್ಚನೆ ನಡೆಸಿ ಹೂಹಾರ ಹಾಕಿದ ಬಳಿಕ ಚಂಡೆವಾದನದ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಯಿತು. ಅಜ್ಜರ ಕಾಡಿನಲ್ಲಿರುವ  ಹುತಾತ್ಮ ಸ್ಮಾರಕದ ಮುಂದೆ ಬ್ಯಾನರ್ ಇರಿಸಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಪುಷ್ಪಾರ್ಚನೆ ನಡೆಸಿದರು.

ಹಿಂದೂ ಮಹಾಸಭಾ(Hindu Mahasabha), ಹಿಂದೂ ಯುವ ಸೇನೆ(Hidu Yuvasene), ಹಿಂದು ಜಾಗರಣ ವೇದಿಕೆ(Hindu Jagaran Vedike)ಯ ಮುಖಂಡರು ಈ ವೇಳೆ ಹಾಜರಿದ್ದರು. ಬ್ಯಾನರ್ ತೆರವುಗೊಳಿಸಿರುವುದು ಕೇವಲ ತಾತ್ಕಾಲಿಕ ಕ್ರಮ. ಮುಂದಿನ ದಿನಗಳಲ್ಲಿ ಇದೇ ಸ್ಥಳದಲ್ಲಿ ಪುತ್ಥಳಿ ಅಳವಡಿಸಲು ನಗರ ಸಭೆ ಹಾಗೂ ಜಿಲ್ಲಾಡಳಿತದ ಮುಂದೆ ಬೇಡಿಕೆ ಇರಿಸಿದ್ದೇವೆ. ಪುತ್ಥಳಿ ಸ್ಥಾಪಿಸಲು ಹೋರಾಟ ಮುಂದುವರಿಸುವುದಾಗಿ ಬಿಜೆಪಿಯ ಹಿಂದುಳಿದ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ ಸುವರ್ಣ ಹೇಳಿದರು.

ಸಾವರ್ಕರ್‌ ಅಂದ್ರೆ, ತತ್ವ, ತರ್ಕ, ತ್ಯಾಗದ ರೂಪ.. ಅಟಲ್‌ ಹೇಳಿದ್ದ ಮಾತುಗಳಲ್ಲಿತ್ತು ಮಹಾನ್‌ ನಾಯಕನ ನೋವು!

ಸ್ವಾತಂತ್ರ್ಯ ಅಮೃತ ಮಹೋತ್ಸವ(Independence Amrit Mahotsav)ದ ಹಿನ್ನೆಲೆಯಲ್ಲಿ ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಿಂದೂ ಮಹಾಸಭಾ ಈ ಬ್ಯಾನರ್ ಅಳವಡಿಸಿತ್ತು ಒಟ್ಟು 15 ದಿನ ಬ್ಯಾನರ್ ಉಳಿಸಿಕೊಳ್ಳಲು ಅನುಮತಿ ಪಡೆಯಲಾಗಿತ್ತು ಇದೀಗ ಪೊಲೀಸರ ನಿವೇದನೆಯ ಮೇರೆಗೆ 5 ದಿನಗಳಲ್ಲಿ ಬ್ಯಾನರ್ ತೆರವು ಮಾಡಲಾಗಿದೆ ಈ ನಡುವೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಬ್ಯಾನರ್ ಗೆ ಪುಷ್ಪಾರ್ಚನೆ ನಡೆಸಿದ್ದರು ಮತ್ತು ಬಿಜೆಪಿ ಯುವ ಮೋರ್ಚಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಕೂಡ ಪ್ರಯತ್ನಿಸಿತ್ತು. ಆರಂಭದಲ್ಲಿ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಂತರ ತಟಸ್ಥ ಧೋರಣೆ ತಳೆದಿತ್ತು.

click me!