ಬಿಜೆಪಿ ಸಂಘಟನೆ ತಾಲೂಕಿನಲ್ಲಿ ದಿನೇ ದಿನೇ ಬಲವಾಗುತ್ತಿರುವುದು ಪ್ರತಿಪಕ್ಷದ ಮುಖಂಡರಿಗೆ ನುಂಗಲಾರದ ತುತ್ತಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ ಹೇಳಿದರು.
ಪಿರಿಯಾಪಟ್ಟಣ (ಜ. 03): ಬಿಜೆಪಿ ಸಂಘಟನೆ ತಾಲೂಕಿನಲ್ಲಿ ದಿನೇ ದಿನೇ ಬಲವಾಗುತ್ತಿರುವುದು ಪ್ರತಿಪಕ್ಷದ ಮುಖಂಡರಿಗೆ ನುಂಗಲಾರದ ತುತ್ತಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ ಹೇಳಿದರು.
ತಾಲೂಕಿನ ಬೆಟ್ಟದಪುರ ಮಹಾಶಕ್ತಿ ಕೇಂದ್ರದಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಡಲ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
undefined
ಬಿಜೆಪಿ ತನ್ನದೇ ಆದ ತತ್ವ ಸಿದ್ಧಾಂತವಿದ್ದು, ನಾವು ಚುನಾವಣೆ ಸಂದರ್ಭ ಹಿಂಬಾಗಿಲ ಮೂಲಕ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ, ತಾಲೂಕಿನಾದ್ಯಂತ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ನೋಡುತ್ತಿರುವ ಪ್ರತಿಪಕ್ಷಗಳು ನಮ್ಮ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿವೆ, ಮಾಜಿ ಶಾಸಕ ಕೆ. ವೆಂಕಟೇಶ್ ಅವರು ಸೋಲಿನ ಹತಾಶರಾಗಿ ಈ ರೀತಿ ಮಾತನಾಡಿಕೊಂಡು ತಿರುಗಾಡುತ್ತಿದ್ದಾರೆ, ತಾಲೂಕು ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡು ನಮಗೆ ಪ್ರತಿಪಕ್ಷಗಳೇ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸೂಚನೆ ನೀಡಿದ್ದು, ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆಯ ಮಾತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
Mysuru: ಅಮಿತ್ ಶಾ ಹೇಳಿಕೆ ಹಾಸ್ಯಾಸ್ಪದ: ಎಚ್.ಸಿ.ಮಹದೇವಪ್ಪ
ಜ. 3 ರಿಂದ 12 ರವರೆಗೆ 235 ಬೂತ್‌ಗಳಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಬೂತ್ ಸಮಿತಿಗಳ ಪರಿಶೀಲನೆ, ಪೇಜ… ಪ್ರಮುಖರ ನಿಯುಕ್ತಿ, ಮತಗಟ್ಟೆಗಳಲ್ಲಿ ವಾಟ್ಸಪ್ ಗ್ರೂಪ್‌ಗಳ ರಚನೆ, ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ, ಮನ್ ಕಿ ಬಾತ್ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ, ಜ. 3ರಂದು ನಂದಿಪುರ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಮಾಜಿ ಶಾಸಕ ಎಚ್.ಸಿ. ಬಸವರಾಜು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲೂಕು ಉಪಾಧ್ಯಕ್ಷ ಶಶಿ, ವಿಸ್ತಾರಕ ಮಂಜುನಾಥ್, ಕಾರ್ಯದರ್ಶಿ ಬೆಮ್ಮತ್ತಿ ಚಂದ್ರು, ಬೆಟ್ಟದಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಮೈಲಾರಿ, ಪ್ರಧಾನ ಕಾರ್ಯದರ್ಶಿ ಅರುಣ… ರಾಜೇ ಅರಸ್, ಭೂ ನ್ಯಾಯ ಮಂಡಳಿ ಸದಸ್ಯ ಸುಂದರ್, ಕೊಪ್ಪ ಶಕ್ತಿ ಕೇಂದ್ರ ಅಧ್ಯಕ್ಷ ಚಂದ್ರನ್, ಹುಣಸವಾಡಿ ಶಕ್ತಿ ಕೇಂದ್ರ ಅಧ್ಯಕ್ಷ ರವಿ, ಬೂತ್ ಅಧ್ಯಕ್ಷ ಯೋಗೇಶ್, ಮುಖಂಡರಾದ ಗಣೇಶ್, ಶ್ರೀನಿವಾಸ್, ಪ್ರವೀಣ… ಇದ್ದರು.
ಬಿಜೆಪಿಗರ ಗುಣವೇ ಸುಳ್ಳು ಹೇಳುವುದು
ಬೆಂಗಳೂರು (ಜ.03): ‘ದೇಶಭಕ್ತರು ಬೇಕಾ? ದೇಶ ವಿಭಜಕರು ಬೇಕಾ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ದೇಶಕ್ಕಾಗಿ ಪ್ರಾಣ, ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದವರು ಕಾಂಗ್ರೆಸ್ಸಿನವರು. ದೇಶಕ್ಕಾಗಿ ಬಿಜೆಪಿಯವರು ಹೋರಾಡಿದ ಒಂದು ಉದಾಹರಣೆ ಹೇಳಲಿ ನೋಡೋಣ’ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸವಾಲು ಹಾಕಿದ್ದಾರೆ. ಬಿಜೆಪಿಯವರ ಗುಣವೇ ಸುಳ್ಳು ಹೇಳುವುದು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಹೋರಾಟಗಾರರ ಪಟ್ಟಿತೆಗೆದುಕೊಳ್ಳಲಿ. ಅದರಲ್ಲಿ ಯಾವುದಾದರಲ್ಲಾದರೂ ಬಿಜೆಪಿಯವರು ಭಾಗವಹಿಸಿದ್ದರೆ ಉದಾಹರಣೆ ನೀಡಲಿ ಎಂದರು. ಅವರಿಗೆ ದೇಶಭಕ್ತಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.
ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧಾರ: ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಸೃಷ್ಟಿಯಾಗಿರುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಹೀಗಾಗಿ ಇದೊಂದು ಉತ್ತಮ ಅವಕಾಶ, ನಾವೂ ಶಾಸಕರಾಗಬಹುದು ಎಂಬ ಕಾರಣಕ್ಕೆ ಹಲವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಅಂತಿಮವಾಗಿ ಟಿಕೆಟ್ ಯಾರಿಗೆ ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ನನಗೆ ಹಾಗೂ ನನ್ನ ಮಗನಿಗೆ ಟಿಕೆಟ್ ನೀಡುವ ಬಗ್ಗೆಯೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ ಎಂದರು.
ಬಿಜೆಪಿಗರು ಬ್ರಿಟಿಷರ ಋಣ ತೀರಿಸುತ್ತಿದ್ದಾರೆ: ಎಚ್.ಸಿ.ಮಹದೇವಪ್ಪ ಟೀಕೆ
ಸಮಯ ಸಾಧಕ ರಾಜಕಾರಣ, ಜೆಡಿಎಸ್ ಬಗ್ಗೆ ಪರೋಕ್ಷ ಟೀಕೆ: ಕೆಲವರು ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿ ಎಂದು ಕಾಯುತ್ತಿದ್ದಾರೆ. ಅಂತಹ ಪಕ್ಷಗಳಿಗೆ ಏನೆಂದು ಕರೆಯಬೇಕು. ಸಮಯ ಸಾಧಕ ರಾಜಕಾರಣವೇ ಹಾಗಲ್ಲವೇ? ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷವನ್ನು ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ. ಇನ್ನು ಎಚ್.ಡಿ. ದೇವೇಗೌಡರು ಮಾಜಿ ಪ್ರಧಾನಮಂತ್ರಿಗಳು. ಅವರು ಯಾರನ್ನು ಯಾವಾಗ ಬೇಕಾದರೂ ಭೇಟಿಯಾಗಬಹುದೆಂದು ಎಂದು ಅಮಿತ್ ಶಾ ಜತೆ ವೇದಿಕೆ ಹಂಚಿಕೊಂಡ ಬಗ್ಗೆ ವ್ಯಂಗ್ಯವಾಡಿದರು.