2023ರ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಚುನಾವಣೆ ಎದುರಿಸಲು ಶಕ್ತಿಯುತವಾಗಿದ್ದೇನೆ.
ಶಿರಾ (ಜ.03):2023ರ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಚುನಾವಣೆ ಎದುರಿಸಲು ಶಕ್ತಿಯುತವಾಗಿದ್ದೇನೆ. ನನಗೆ ಟಿಕೆಟ್ ನೀಡಿದರೆ ಜೆಡಿಎಸ್ ಪಕ್ಷದಿಂದ ಗೆದ್ದು, ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡಲು ಕೈ ಬಲಪಡಿಸುತ್ತೇನೆ ಹಾಗೂ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ರಾಜ್ಯ ಜೆಡಿಎಸ್ ಪರಿಷತ್ ಸದಸ್ಯರು ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್ ಹೇಳಿದರು.
ನಗರದ ಪ್ರೆಸಿಡೆನ್ಸಿ ಶಾಲೆಯ ಪಕ್ಕದಲ್ಲಿರುವ ಆವರಣದಲ್ಲಿ ಆರ್.ಉಗ್ರೇಶ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಆರ್.ಉಗ್ರೇಶ್ ಅವರ 55ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ 55 ಕೆಜಿ ತೂಕದ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿ ಮಾತನಾಡಿದರು.
ಭೂವನಹಳ್ಳಿ ಗ್ರಾಮದ ದಿವಂಗತ ಮಾಜಿ ಸಚಿವರಾದ ಬಿ.ಸತ್ಯನಾರಾಯಣ ಅವರ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ನಗರದ ದುರ್ಗಮ್ಮ ಹಾಗೂ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಜಿ.ಪಂ.ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಜಿಪಂ ಮಾಜಿ ಸದಸ್ಯ ಎಸ್.ರಾಮಕೃಷ್ಣ ಇತರರಿದ್ದರು.
ಅಧಿಕಾರ ಹಸ್ತಾಂತರದಲ್ಲಿ ನನ್ನದೇನು ತಪ್ಪಿಲ್ಲ
ಮೈಸೂರು (ಜ.03): ಜೆಡಿಎಸ್- ಬಿಜೆಪಿ 20:20 ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನನ್ನದೇನು ತಪ್ಪಿಲ್ಲ. ಆದರೂ ಈ ವಿಚಾರದಲ್ಲಿ ನನ್ನನ್ನು ಬಲಿಪಶು ಮಾಡಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ನಗರದ ನೇರಂಬಳ್ಳಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕೆ.ಆರ್. ಕ್ಷೇತ್ರ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಶರಣದೊಂದಿಗೆ ಕುಮಾರಣ್ಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2006ರಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಮಾಡಬೇಕಾದ್ರೆ ದೆಹಲಿ ನಾಯಕರು ನಿಶ್ಚಯ ಮಾಡಿದ ಸರ್ಕಾರವಲ್ಲ.
ಯಡಿಯೂರಪ್ಪನವರ ಶಿಷ್ಯ ಕಾ.ಪು. ಸಿದ್ದಲಿಂಗಸ್ವಾಮಿ ಮೂಲಕ ಸ್ಲಿಪ್ ಕಳುಹಿಸಿ ನನ್ನನ್ನು ಭೇಟಿ ಮಾಡಿದರು. ಬಿಜೆಪಿಯಲ್ಲಿ ಆದ ನೋವಿನ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಿದರು. ಜೆಡಿಎಸ್ ಪಕ್ಷಕ್ಕೆ ಬರುವ ಬಗ್ಗೆ ಮಾತನಾಡಿದರು. ನೀವು ರಾಜೀನಾಮೆ ಕೊಟ್ಟು ಹೊರಗಡೆ ಬಂದ್ರೇ ಕಷ್ಟಆಗುತ್ತದೆ, ದುಡುಕಿ ರಾಜೀನಾಮೆ ನೀಡಬೇಡಿ ಎಂದು ಸಲಹೆ ನೀಡಿದ್ದೆ ಎಂದರು. ಈ ವೇಳೆ ಬಿಜೆಪಿಯಲ್ಲಿದ್ದ ಜನತಾ ಪರಿವಾರದ ಶಾಸಕರು ನನ್ನ ಮೇಲೆ ಒತ್ತಡ ಹೇರಿದರು. ಜಗದೀಶ್ ಶೆಟ್ಟರ್, ಈಶ್ವರಪ್ಪ ಬಂದು ಭೇಟಿ ಮಾಡಿ ಏನಾದರೂ ಮಾಡಬೇಕು ಎಂದು ಕೇಳಿಕೊಂಡರು. ದೇವೇಗೌಡರ ಭಾವನೆಗಳಿಗೆ ಮೊದಲ ಬಾರಿ ಧಿಕ್ಕರಿಸಿದೆ. ಬಿಜೆಪಿ ಜೊತೆ ಸರ್ಕಾರ ಮಾಡಿದೆ. ಉದಾಸಿ ಮತ್ತು ಕಾರಜೋಳ ಮಾತುಕತೆ ನಡೆಸಿದರು ಎಂದರು.
ಬಿಜೆಪಿಗೂ ಕರ್ನಾಟಕ ರಾಜ್ಯ ಎಟಿಎಂ: ಅಮಿತ್ ಶಾಗೆ ಎಚ್‌ಡಿಕೆ ತಿರುಗೇಟು
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬಂದ ಎರಡೇ ತಿಂಗಳಿಗೆ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮನಸ್ತಾಪ ಶುರುವಾಯ್ತು. ಜನಾರ್ದನ ರೆಡ್ಡಿ ನನ್ನ ಮೇಲೆ 150 ಕೋಟಿ ಲಂಚದ ಆರೋಪ ಮಾಡಿದರು. ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ದೇವೇಗೌಡರಿಗೆ ಮಧ್ಯ ಬರಬೇಡಿ ಎಂದು ಹೇಳಿದ್ದಾಗಿ ಅವರು ತಿಳಿಸಿದರು. ನಾನು ಎಂದಿಗೂ ತಪ್ಪು ಮಾಡಿಲ್ಲ. ವೈಕುಂಠ ಏಕಾದಶಿ ದಿವಸ ಹೇಳುತ್ತಿದ್ದೇನೆ. ನಾನು ಅಧಿಕಾರ ಬಿಡಲು ತಯಾರಿಗಿದ್ದೆ. ಆಗ ಬಿಜೆಪಿಯಲ್ಲಿದ್ದ ಯಶವಂತ್ ಸಿನ್ಹಾ ಮತ್ತು ದೇವೇಗೌಡರು ಚರ್ಚೆ ಮಾಡಿದರು. ನಂತರ ಹಲವು ರಾಜಕೀಯ ಬೆಳವಣಿಗೆ ಶುರುವಾಯ್ತು. ಅಂದು ಏನು ಮಾತುಕತೆ ಆಯಿತೆಂದು ಇಂದಿಗೂ ಗೊತ್ತಿಲ್ಲ ಎಂದರು.
ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್.ಡಿ.ಕುಮಾರಸ್ವಾಮಿ
ಅಗ್ರಿಮೆಂಟ್‌ಗೆ ಸಹಿ ಹಾಕಬೇಕೆಂದು ಒತ್ತಡ ಹೇರಿದರು. ಆದರೆ ನಾನು ಆ ಸಂದರ್ಭದಲ್ಲಿ ಹೇಳಿದ್ದಿಷ್ಟು. ಇದು ದೆಹಲಿ ನಾಯಕರ ಜೊತೆ ಮಾತನಾಡಿ ರಚನೆ ಮಾಡಿದ ಸರ್ಕಾರವಲ್ಲ. ಆದರೂ ನಾನು ಸಹಿ ಹಾಕಲು ನಿರ್ಧರಿಸಿದೆ. ಹೀಗಿದ್ದರೂ ಸರ್ಕಾರ ಪತನವಾಯ್ತು. ನಂತರ ನಮ್ಮ ಪಕ್ಷದ ಶಾಸಕರನ್ನು ಸೆಳೆದು ಸರ್ಕಾರ ಮಾಡಲು ರಚನೆ ಮಾಡಲು ಸಿದ್ದರಾಗಿದ್ರು. ನಾನು ದೇವೇಗೌಡರ ಜೊತೆ ಮಾತನಾಡಿ ಬಿಜೆಪಿಗೆ ಅಧಿಕಾರ ಕೊಡಲು ಸಿದ್ಧನಾದೆ. ಇದರಲ್ಲಿ ನನ್ನ ತಪ್ಪು ಏನು ಇಲ್ಲ. ಆದರೂ ಬಲಿಪಶು ಆಗಿದ್ದು ನಾನು ಎಂದು ಅವರು ಹೇಳಿದರು.