ಚುನಾವಣೆಗೆ ಹೊಸ್ತಿಲಲ್ಲೇ ಹಲವು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ

By Kannadaprabha NewsFirst Published Dec 6, 2022, 5:56 AM IST
Highlights

ರಾಜ್ಯದಲ್ಲಿ ಹಾಗೂ ತಾಲೂಕಿನಲ್ಲಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಕೆ. ವೆಂಕಟೇಶ್‌ ಹೇಳಿದರು. ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಪಿರಿಯಾಪಟ್ಟಣ (ಡಿ. 06):  ರಾಜ್ಯದಲ್ಲಿ ಹಾಗೂ ತಾಲೂಕಿನಲ್ಲಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಕೆ. ವೆಂಕಟೇಶ್‌ ಹೇಳಿದರು. ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಜೆಡಿಎಸ್‌ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು (Politics)  ಮಾಡುತ್ತಿವೆ. 2018ರ ಚುನಾವಣೆಯಲ್ಲಿ ಕೆಲವು ಜಾತಿ ಸಂಘಟನೆಗಳಿಗೆ ಮತ್ತಿತರರಿಗೆ ತಪ್ಪು ಸಂದೇಶ ರವಾನೆ ಮಾಡಿದ್ದರಿಂದ ಮತ ಪಡೆದ ಜೆಡಿಎಸ್‌ (JDS)  ಅಭ್ಯರ್ಥಿಯ ಆಟ ಈ ಬಾರಿ ನಡೆಯುವುದಿಲ್ಲ, ಪ್ರಸ್ತುತ ಮತದಾರರು ಎಚ್ಚರಗೊಂಡಿದ್ದು ಜೆಡಿಎಸ್‌ಗೆ ಮತನೀಡಿದಕ್ಕೆ ಪಶ್ಚಾತಾಪ ಪಡುತ್ತಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್‌, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಎಚ್‌.ಡಿ. ಗಣೇಶ್‌, ಆನಂದ್‌ ಮಾತನಾಡಿದರು.

ಕೆಪಿಸಿಸಿ ಸದಸ್ಯ ನಿತಿನ್‌ ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿ ಬಿ.ಜೆ. ಬಸವರಾಜು, ಮುಖಂಡರಾದ ಪುಟ್ಟಣ್ಣಯ್ಯ, ರಾಮಚಂದ್ರ, ಲಕ್ಷ ್ಮಣೇಗೌಡ, ಟೌನ್‌ ಘಟಕ ಅಧ್ಯಕ್ಷ ಅಶೋಕ್‌ಕುಮಾರ್‌ ಗೌಡ, ಎಸ್ಸಿ ಘಟಕದ ಅಧ್ಯಕ್ಷ ಪಿ.ಪಿ. ಮಹದೇವ್‌, ಯಜಮಾನರಾದ ಹೊನ್ನೇಗೌಡ, ಸ್ವಾಮಿಗೌಡ, ರಾಮಚಂದ್ರ, ಜಗದೀಶ್‌, ಶಿವರಾಜು, ಗೋವಿಂದೇಗೌಡ, ರಾಜೇಗೌಡ, ಮಂಜು, ಕುಮಾರ್‌ ಇದ್ದರು.

ಕಾಂಗ್ರೆಸ್ ಸೇರಲು ಬಿಜೆಪಿ ಹಾಲಿ ಶಾಸಕರ ಅರ್ಜಿ

ಬೆಂಗಳೂರು (ನ.30) : ‘ಬಿಜೆಪಿಯ ಹಲವು ಹಾಲಿ ಶಾಸಕರೇ ಕಾಂಗ್ರೆಸ್‌ ಸೇರಲು ‘ಅರ್ಜಿ’ ಹಾಕಿದ್ದಾರೆ. ಈ ಹಿಂದೆ ಬಿಜೆಪಿಗೆ ವಲಸೆ ಹೋದವರಲ್ಲೂ ಕೆಲವರು ಕಾಂಗ್ರೆಸ್‌ಗೆ ಮರಳಲು ಇಚ್ಛಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷ ಸೇರಲು ಬಿಜೆಪಿಯ ಹಲವಾರು ಮಂದಿ ಕಾಯುತ್ತಿದ್ದಾರೆ. ಇದರಲ್ಲಿ ಹಾಲಿ ಶಾಸಕರೂ ಇದ್ದಾರೆ. ಕಾಂಗ್ರೆಸ್‌ನಿಂದ ವಲಸೆ ಹೋಗಿದ್ದವರೂ ವಾಪಸ್‌ ಬರಲು ಸಿದ್ಧರಿದ್ದಾರೆ. ಆದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಂದು ನಿಯಮ ಇದೆ. ಹೈಕಮಾಂಡ್‌ ಜೊತೆ ಚರ್ಚಿಸಬೇಕಿದೆ. ಚರ್ಚೆ ನಡೆಸಿ ನಮ್ಮ ಪಕ್ಷದ ನಾಯಕರು ನಿರ್ಧಾರ ಮಾಡುತ್ತಾರೆ’ ಎಂದರು.

ಕಾರ್ಖಾನೆಗಳಿಗೆ ಭಾರಿ ಸಾಲ: ಡಿಸಿಸಿ ದಿವಾಳಿ ಅಂಚಲ್ಲಿ, ಆತಂಕ

‘ಕಾಂಗ್ರೆಸ್‌ನ ಹಲವರು ಬಿಜೆಪಿಗೆ ಹೋಗಲು ಸಿದ್ಧರಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲಾ?’ ಎಂಬ ಪ್ರಶ್ನೆಗೆ, ‘ಬಿಜೆಪಿ ಮುಳುಗುವ ಹಡಗು. ಬಿಜೆಪಿಯವರ ಸಮೀಕ್ಷೆಯಲ್ಲೇ ಅದು ಮೂರನೇ ಸ್ಥಾನಕ್ಕೆ ಹೋಗಿದೆ. ಬಿಜೆಪಿಯವರ ಅಧಿಕಾರಾವಧಿಯಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ರಾಜ್ಯ ನಂ.1 ಸ್ಥಾನಕ್ಕೇರಿದೆ. ಬಿಜೆಪಿ ದುರಾಡಳಿತದಿಂದ ಜನ ರೋಸಿಹೋಗಿದ್ದು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುತ್ತಾರೆ. ಇದರಿಂದ ಆತಂಕಗೊಂಡಿರುವ ಬಿಜೆಪಿಯ ಅನೇಕರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ’ ಎಂದರು. ಇದರಿಂದಾಗಿ ರೌಡಿಗಳು, ಸಮಾಜಘಾತಕ ಶಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆ ಪಕ್ಷ ಪ್ರಯತ್ನಿಸುತ್ತಿದೆ, ಹೀಗಿರುವಾಗ ಆ ಪಕ್ಷಕ್ಕೆ ಯಾರು ತಾನೆ ಹೋಗುತ್ತಾರೆ ಎಂದು ಖಂಡ್ರೆ ಪ್ರಶ್ನಿಸಿದ್ದಾರೆ.

ವೀರಶೈವ ಲಿಂಗಾಯಿತ ಮಠಗಳ ಕೊಡುಗೆ ಅಪಾರ; ಈಶ್ವರ್ ಖಂಡ್ರೆ

ಹೋರಾಟದಿಂದ ಅಂತರ ಕಾಯ್ದುಕೊಂಡ ಜೆಡಿಎಸ್

ಚಿಕ್ಕಬಳ್ಳಾಪುರ ( ನ.29):  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 123 ಸೀಟು ಗುರಿಯೊಂದಿಗೆ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಮೂಲಕ ಚುನಾವಣೆ ಘೋಷಣೆಗೂ ಮೊದಲೇ ಮತದಾರರ ಬೇಟೆ ಆರಂಭಿಸಿರುವ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಸದ್ಯ ಭುಗಿಲೇಳುತ್ತಿರುವ ಒಕ್ಕಲಿಗರ ಮೀಸಲಾತಿ ಹೋರಾಟದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ.

 (Chikkaballapura)  ವಿಧಾನಸಭಾ ಕ್ಷೇತ್ರದ ನಂದಿಯಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ವೇಳೆ, ಒಕ್ಕಲಿಗರ ಮೀಸಲಾತಿ ಹೋರಾಟದಿಂದ ಅಂತರ ಕಾಪಾಡುವ ಸುಳಿವು ಎಚ್ ಡಿ  (HD Kumaraswamy ) ನೀಡಿದ್ದು, ಇದೇ ಕಾರಣಕ್ಕೆ ಪಂಚರತ್ನ ರಥಯಾತ್ರೆ ನೆಪವೊಡ್ಡಿ ಭಾನುವಾರ ಬೆಂಗಳೂರಿನಲ್ಲಿ ಒಕ್ಕಲಿಗ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಹೋರಾಟದ ರೂಪುರೇಷಗಳ ಸಭೆಗೂ ಕುಮಾರಸ್ವಾಮಿ ಗೈರಾಗಿದ್ದರು.

ಕಾಂಗ್ರೆಸ್‌ ಪಕ್ಷದಿಂದ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌, ಬಿಜೆಪಿ ಪಕ್ಷದಿಂದ ಮಾಜಿ ಸಿಎಂ ಸದಾನಂದಗೌಡ ಸೇರಿದಂತೆ ಕಂದಾಯ ಸಚಿವರಾದ ಆರ್‌.ಅಶೋಕ್‌, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪಾಲ್ಗೊಂಡಿದ್ದರು. ಆದರೆ ಜೆಡಿಎಸ್‌ನಿಂದ ಪಕ್ಷದ ಪ್ರಮುಖರು ಯಾರು ಕೂಡ ಒಕ್ಕಲಿಗರ ಮೀಸಲಾತಿ ಸಂಬಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರ ಹಿಡಿಯಬೇಕೆಂಬ ಮಹತ್ವಕಾಂಕ್ಷೆ ಹೊತ್ತು ಕುಮಾರಸ್ವಾಮಿ ರಾಜ್ಯದಲ್ಲಿ 100 ದಿನಗಳ ಕಾಲ ಪಂಚ±ರತ್ನ ರಥಯಾತ್ರೆ ನಡೆಸುತ್ತಿದ್ದು ಇತಂಹ ಸಂದರ್ಭದಲ್ಲಿ ತಮ್ಮ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡರೆ ಬೇರೆ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬಹುದೆಂದು ಹೇಳಿ ಕುಮಾರಸ್ವಾಮಿ ಮೀಸಲಾತಿ ಕಿಚ್ಚಿನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆಂದು ತಿಳಿದು ಬಂದಿದೆ.

click me!