ಬ್ರಶ್ ಮಾಡಿದ ವ್ಯಕ್ತಿ ಸಾವು: ಟೂತ್ ಪೇಸ್ಟ್ ಎಂದು ಈತ ಬ್ರಶ್‌ಗೆ ಹಾಕಿದ್ದೇನು..?

By Kannadaprabha News  |  First Published Nov 25, 2019, 9:09 AM IST

ಟೂತ್‌ಪೇಸ್ಟ್‌ ಬಳಸುವಾಗ ಆದ ಸಣ್ಣ ತಪ್ಪಿನಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಪೇಸ್ಟ್ ಎಂದು ವ್ಯಕ್ತಿ ತಮ್ಮ ಬ್ರಶ್‌ಗೆ ಹಾಕಿಕೊಂಡ ವಸ್ತು ಅವರ ಪ್ರಾಣವನ್ನೇ ತೆಗೆದಿದೆ. ನಡೆದಿದ್ದೇನು..? ಇಲ್ಲಿದೆ ವಿವರ.


ಉಡುಪಿ(ನ.25): ಟೂತ್‌ಪೇಸ್ಟ್‌ ಬಳಸುವಾಗ ಆದ ಸಣ್ಣ ತಪ್ಪಿನಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಪೇಸ್ಟ್ ಎಂದು ವ್ಯಕ್ತಿ ತಮ್ಮ ಬ್ರಶ್‌ಗೆ ಹಾಕಿಕೊಂಡ ವಸ್ತು ಅವರ ಪ್ರಾಣವನ್ನೇ ತೆಗೆದಿದೆ.

ಮಲ್ಪೆ: ಇಲ್ಲಿನ ಕೊಡವೂಕರು ಗ್ರಾಮದ ಮಲ್ಪೆಕೊಳ ನಿವಾಸಿ ಲೀಲಾ ಕರ್ಕೇರ (57) ಎಂಬುವರು ಅರಿವಿಲ್ಲದೆ ಇಲಿ ಪಾಶಾಣ ಸೇವಿಸಿ ಮೃತಪಟ್ಟಘಟನೆ ನಡೆದಿದೆ. ಅವರು ನ.19ರಂದು ಬೆಳಗ್ಗೆ ಟೂತ್‌ ಪೇಸ್ಟ್‌ ಬದಲಾಗಿ, ಅದರಂತೆ ಇದ್ದ ಇಲಿ ಪಾಶಾಣದ ಟ್ಯೂಬ್‌ನಿಂದ ಪೇಸ್ವ್‌ ತೆಗೆದು ಹಲ್ಲುಜ್ಜಿದ್ದಾರೆ.

Tap to resize

Latest Videos

undefined

ಗುದ​ದ್ವಾ​ರ ​ಹೊ​ಕ್ಕಿದ್ದ ಪೊರಕೆ ಪ್ಲಾಸ್ಟಿಕ್‌ ಹಿಡಿ ಹೊರ ತೆಗೆದ ವೈದ್ಯ​ರು!

ಪರಿಣಾಮ ಅಸ್ವಸ್ಥಗೊಂಡ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟರು. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: 1 ದಿನದಲ್ಲಿ 750ಕ್ಕೂ ಅಧಿಕ ಆಧಾರ್‌ ತಿದ್ದುಪಡಿ..!

click me!