ದೇಹದೊಳಗೆ ಸೂಕ್ಷ್ಮ ವಸ್ತುಗಳು ಹೋಗುವುದು ಸಾಮಾನ್ಯ. ಆದರೆ ಪೊರಕೆಯೊಂದು ವ್ಯಕ್ತಿಯೊಬ್ಬರ ಗುದದ್ವಾರದ ಒಳಗೆ ಹೋಗಿ ಶಸ್ತ್ರಚಿಕಿತ್ಸೆ ನಡೆದಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರ (ನ. 25): ವ್ಯಕ್ತಿಯೊಬ್ಬರ ಗುದದ್ವಾರದ ಮೂಲಕ ಒಳ ಹೋಗಿದ್ದ ಪೊರಕೆಯ ಪ್ಲಾಸ್ಟಿಕ್ ಹಿಡಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ನಾರಾಯಣ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ನಗರದ ಮಹಬೂಬ್ ನಗರ ಬಡಾವಣೆ ವಾಸಿ ಇರ್ಫಾನ್ ಷರೀಫ್ (26) ಅವರಿಗೆ ಗುದದ್ವಾರದ ಮೂಲಕ ಪೊರಕೆಯ ಪ್ಲಾಸ್ಟಿಕ್ ಹಿಡಿಯನ್ನು ಯಾರೊ ಮೂರು ದಿನಗಳ ಹಿಂದೆ ಹಾಕಿದ್ದರು. ಇದರಿಂದ ಕರುಳಿನ ಭಾಗಕ್ಕೆ ತುಂಬಾ ತೊಂದರೆಯಾಗುತ್ತಿತ್ತು.
undefined
ಅಯೋಧ್ಯೆ ಗೋಶಾಲೆಗಳ ಹಸುಗಳಿಗೆ ಚಳಿ ತಡೆಯಲು ವಿಶೇಷ ಸೆಣಬಿನ ಕೋಟ್!
ಡಾ.ಎಸ್.ವಿ. ನಾರಾಯಣಸ್ವಾಮಿ ಅವರು ಇರ್ಫಾನ್ ಷರೀಫ್ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಗುದದ್ವಾರದ ಮೂಲಕ ಬಾಟಲ್ ಅನ್ನು ಹಾಕಿರಬೇಕೆಂದು ಭಾವಿಸಿದ್ದರು. ಶಸ್ತ್ರ ಚಿಕಿತ್ಸೆಗೂ ಮುನ್ನ ಹಿರಿಯ ವೈದ್ಯರೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆದುಕೊಂಡಿದ್ದರು.
ಆಸ್ಪತ್ರೆಯಲ್ಲಿ ಭಾನುವಾರ ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಎಸ್.ವಿ. ನಾರಾಯಣಸ್ವಾಮಿ ಅವರು ಗುದದ್ವಾರದ ಮೂಲಕ ಹೊಟ್ಟೆಯ ಭಾಗಕ್ಕೆ ತಲುಪಿದ್ದ 24 ಸೆ.ಮೀ ಉದ್ದದ ಪೊರಕೆಯ ಪ್ಲಾಸ್ಟಿಕ್ ಹಿಡಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಅರವಳಿಕೆ ತಜ್ಞ ಡಾ. ಸಂಪಂಗಿ ರಾಮಯ್ಯ, ಶುಶ್ರೂಷಕರಾದ ಸಂಧ್ಯಾ, ದಿಲೀಪ್, ನಾರಾಯಣ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್.ಎನ್. ಮಧುಸೂದನ್ ಇದ್ದರು.