ಮುಂದಿನ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಅಧಿಕಾರ ಯೋಗವಿಲ್ಲ; ಕೊಡೇಕಲ್ ಕಾಲಜ್ಞಾನಿಯ ಭವಿಷ್ಯನುಡಿ ನಿಜವಾಗುತ್ತಾ?

By Ravi JanekalFirst Published Feb 19, 2023, 8:52 AM IST
Highlights

ಮುಂದಿನ ಚುನಾವಣೆಯಲ್ಲಿ ಪಕ್ಷಾಂತರ, ಕುದುರೆ ವ್ಯಾಪಾರಕ್ಕೆ ಒಳಗಾಗುವವರಿಗೆ ಅಧಿಕಾರ ಯೋಗವಿಲ್ಲ ಎಂದು ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ (ಫೆ.19) : ಮುಂದಿನ ಚುನಾವಣೆಯಲ್ಲಿ ಪಕ್ಷಾಂತರ, ಕುದುರೆ ವ್ಯಾಪಾರಕ್ಕೆ ಒಳಗಾಗುವವರಿಗೆ ಅಧಿಕಾರ ಯೋಗವಿಲ್ಲ ಎಂದು ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ(Yadagiri) ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್(Kodekal) ಗ್ರಾಮದ ಕಾಲಜ್ಞಾನಿ ಬಸವಣ್ಣ(Kalagnani Basavanna)ನ ದೇವಸ್ಥಾನ. ಕಾಲಜ್ಞಾನಿ ಬಸವಣ್ಣನವರ ವಚನಗಳನ್ನ ಪ್ರತಿ ವರ್ಷ ಶಿವರಾತ್ರಿ ಹಬ್ಬ(Shivaratri festival)ದ ದಿನ ನುಡಿಯುತ್ತಾರೆ. ನಿನ್ನೆ ನಡೆದ ಶಿವರಾತ್ರಿ ಹಬ್ಬದ ಭವಿಷ್ಯನುಡಿಯಲ್ಲಿ ಪಕ್ಷಾಂತರಿಗಳಿಗೆ ಚಾಟಿ ಏಟು ಬೀಸಿರುವ ಬಸವಣ್ಣ. 2023ರ ಚುನಾವಣೆಯಲ್ಲಿ ಜನರೇ ತಕ್ಕ ಶಾಸ್ತಿ ಮಾಡುತ್ತಾರೆ. ನುಡಿದಂತೆ ನಡೆಯುವವರಿಗೆ ಮಾತ್ರ ಅಧಿಕಾರ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ದೇಶದ ಮೊದಲ SCADA Gate ಗೆ ಇಂದು ಪ್ರಧಾನಿ ಮೋದಿ ಚಾಲನೆ

'ಪುಣ್ಯ ಸ್ತ್ರೀ ಯಳ ಒಲುಮೆ ಬಣ್ಣ ಭಜನೆ ಅಲ್ಲ. ತನ್ನ ಪುರುಷನೆ ತನಗೆ ಗತಿ ಎಂದು ಇದ್ದರೆ ಮನ್ನಣೆ ಉಂಟು ಶಿವನಲ್ಲಿ' ಎಂಬ ಶಿವರಾತ್ರಿ ನುಡಿ. ಹಲವು ಅರ್ಥದಲ್ಲಿ ನುಡಿ ವಿಶ್ಲೇಷಣೆ ಮಾಡಲಾಗಿದೆ. ಬಣ್ಣದ ಮಾತನಾಡುವವರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ ನುಡಿದಂತೆ ನಡೆದುಕೊಳ್ಳುವವರಿಗೆ ಮಾತ್ರ ಅಧಿಕಾರ ಯೋಗ್ಯ. ಅಂಥವರ ಮೇಲೆ ಜನರು ನಂಬಿಕೆ ಇಟ್ಟು ಅಧಿಕಾರ ಗದ್ದುಗೆಗೆ ಏರಿಸುತ್ತಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಪಕ್ಷಾಂತರ ಕುದುರೆ ವ್ಯಾಪಾರಕ್ಕೊಳಗಾಗುವವರಿಗೆ ಅಧಿಕಾರ ಯೋಗವಿಲ್ಲ. ಅಂಥವರಿಗೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಕೊಡೇಕಲ್ ಬಸವಣ್ಣನವರ ಭವಿಷ್ಯ ನುಡಿಯಾಗಿದೆ. 

\ಕೊಡೇಕಲ್ ಬಸವಣ್ಣ ಭಾವೈಕ್ಯತೆಯ ಹರಿಕಾರ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ಕೊಡೇಕಲ್ ಕ್ಷೇತ್ರದಲ್ಲಿ ನೆಲೆಸಿರುವ ಬಸವಣ್ಣನವರು ಕಾಲಜ್ಞಾನದ ವಚನಗಳ ಮೂಲಕ ಮನುಕುಲವನ್ನು ಉದ್ಧರಿಸಿದ್ದಾರೆ. ಇವರ ಸಾಹಿತ್ಯವೆಲ್ಲ ಅಮರಗನ್ನಡ ಎಂಬ ಸಾಂಕೇತಿಕ ಲಿಪಿಯಲ್ಲಿವೆ. ಕೆಲವು ವಚನಕಾರರು ವಚನ ಬರೆದರೆ, ಕೊಡೇಕಲ್ ಬಸವಣ್ಣನವರು ವಚನಗಳ ಜತೆ ಮುಂದಾಗುವ ಭವಿಷ್ಯವನ್ನು ಕಾಲಜ್ಞಾನದ ಮೂಲಕ ತಿಳಿಸಿದ್ದಾರೆ.

ಕಾಲಜ್ಞಾನಸಾಹಿತ್ಯವೆಂದರೆ ಮುಂದಾಗುವುದನ್ನು ತಿಳಿಸುವುದು. ಉತ್ತರ ಕರ್ನಾಟಕದ ಕೊಡೇಕಲ್​ನ ಕಾಲಜ್ಞಾನ ಇಂದಿಗೂ ಹೆಸರುವಾಸಿಯಾಗಿದೆ. ಇದರ ಮೂಲಕ ಸಂಭವನೀಯ ದುರಂತಗಳ ಬಗ್ಗೆ ಮೊದಲೇ ಊಹಿಸಿ ಪರಿಹಾರ ನೀಡುವ ಪ್ರಯತ್ನವನ್ನು ಕೊಡೇಕಲ್ ಬಸವಣ್ಣ ಮಾಡಿದ್ದಾರೆ. ಅವರ ಸಾಹಿತ್ಯ ಸಾಮಗ್ರಿಯಲ್ಲಿ ಎರಡು ರೀತಿಯ ಕಾಲಜ್ಞಾನ ರಚನೆಗಳಿವೆ.

ಯಾದಗಿರಿ: ಕಲುಷಿತ ನೀರು ಸೇವನೆ, ಮೃತರ ಸಂಖ್ಯೆ 3ಕ್ಕೇರಿಕೆ

ಪ್ರತಿವರ್ಷ ಶಿವರಾತ್ರಿಯಂದು ನುಡಿಯುವ ಕಾಲಜ್ಞಾನಿ ಬಸವಣ್ಣ ಭವಿಷ್ಯ ನುಡಿಯುತ್ತಾರೆ. ಈ ಹಿಂದೆ ಭವಿಷ್ಯ ನಿಜವಾಗಿದೆ 

ಕಾಲಜ್ಞಾನಿ ಕೊಡೇಕಲ್ ಬಸವಣ್ಣ ದೇವಸ್ಥಾನ ಅರ್ಚಕ ಬಸವರಾಜ ಭದ್ರಗೋಳ 

click me!