ಚಾಮರಾಜನಗರ: ಆನೆಯ ರಕ್ಷಿಸಿದ ಬಂಡೀಪುರ ಸಿಬ್ಬಂದಿಗೆ ಮೋದಿ ಶಹಬ್ಬಾಸ್‌

By Kannadaprabha News  |  First Published Feb 19, 2023, 6:43 AM IST

ವಿದ್ಯುತ್‌ ಶಾಕ್‌ನಿಂದ ಆನೆ ಚೇತರಿಸಿಕೊಂಡು ಬಚಾವ್‌ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆಯನ್ನೂ ವ್ಯಕ್ತ​ಪ​ಡಿಸಿ​ದ ಪ್ರಧಾನಿ ಮೋದಿ. 


ಗುಂಡ್ಲುಪೇಟೆ (ಚಾ.​ನ​ಗ​ರ​)(ಫೆ.19):  ವಿದ್ಯುತ್‌ ಸ್ಪರ್ಶಿಸಿ ಸಾವು-ನೋವಿನ ನಡುವೆ ನರಳುತ್ತಿದ್ದ ಕಾಡಾನೆಯೊಂದನ್ನು ಬಂಡೀ​ಪು​ರದ ಅರಣ್ಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ ಬದುಕುಳಿಸಿದ ಕಾರ್ಯ ಇದೀಗ ಪ್ರಧಾನಿ ಮೋದಿ ಅವ​ರ ಮೆಚ್ಚುಗೆಗೆ ಪಾತ್ರ​ವಾ​ಗಿ​ದೆ. ಬಂಡೀ​ಪುರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯ​ವನ್ನು ಶ್ಲಾಘಿಸಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್‌ ಟ್ವೀಟ್‌ ಮಾಡಿದ್ದರು. ಅರಣ್ಯ ಸಚಿವರ ಈ ಟ್ವೀಟ್‌ ಅನ್ನು ಶನಿವಾರ ಬೆಳಗ್ಗೆ ಪ್ರಧಾನಿ ಮೋದಿ ಅವ​ರು ಮರು ಟ್ವೀಟ್‌ ಮಾಡಿ, ವಿದ್ಯುತ್‌ ಶಾಕ್‌ನಿಂದ ಆನೆ ಚೇತರಿಸಿಕೊಂಡು ಬಚಾವ್‌ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆಯನ್ನೂ ವ್ಯಕ್ತ​ಪ​ಡಿಸಿ​ದ್ದಾ​ರೆ.

ಪ್ರಧಾನಿ ಹಾಗೂ ಕೇಂದ್ರ ಅರಣ್ಯ ಸಚಿವರ ಟ್ವೀಟ್‌ ಸಂಬಂಧ ಕನ್ನ​ಡ​ಪ್ರ​ಭದ ಜತೆಗೆ ಮಾತ​ನಾ​ಡಿ​ದ ಎಸಿಎಫ್‌ ಜಿ.ರವೀಂದ್ರ, ಪ್ರಧಾನಿ ತಳಮಟ್ಟದ ಅರಣ್ಯ ಸಿಬ್ಬಂದಿ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಂತಸ ತಂದಿದೆ ಎಂದರು.

Tap to resize

Latest Videos

undefined

ಕುಮಾರಣ್ಣ ಸರ್ಕಾರ ರಚನೆಗೆ ಬೆಂಬಲ ಸೂಚಿಸಬೇಕು: ನಿಖಿಲ್‌ ಕುಮಾರಸ್ವಾಮಿ

ಅರಣ್ಯ ಸಿಬ್ಬಂದಿ ಜೊತೆಗೆ ಬಂಡೀಪುರ ಸಿ.ಎಫ್‌.ರಮೇಶ್‌ ಕುಮಾರ್‌ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ, ಸೂಚನೆಗಳೊಂದಿಗೆ ಆನೆ ಬದುಕಿಸಲೇಬೇಕು ಎಂದು ಸವಾಲು ಸ್ವೀಕರಿಸಿದಂತೆ ಕೆಲಸ ಮಾಡಿದ್ದರಿಂದ ಯಶ ಸಿಕ್ಕಿದೆ. ವಿದ್ಯುತ್‌ ಅವಘಡದಿಂದ ಈವ​ರೆ​ಗೆ 60ಕ್ಕೂ ಹೆಚ್ಚು ಆನೆಗಳು ಸಾವಿಗೀ​ಡಾ​ಗಿ​ವೆ. ಆದರೆ, ವಿದ್ಯುತ್‌ ತಗುಲಿಯೂ ಆನೆ ಬದುಕುಳಿದದ್ದು ಬಹಳ ವಿರಳ ಎಂದರು.

ಫೆ.15ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಅರಣ್ಯ ವಲಯದಂಚಿನ ತಾಲೂಕಿನ ಬರಗಿ ಬಳಿ ರೈತರ ಜಮೀನಿನಲ್ಲಿ ಅಕ್ರಮವಾಗಿ ಅಳ​ವ​ಡಿ​ಸಿದ್ದ ವಿದ್ಯುತ್‌ ತಂತಿ ಬೇಲಿ ಸ್ಪರ್ಶಿಸಿ ಸುಮಾರು 25 ವರ್ಷದ ಹೆಣ್ಣಾನೆ ಅಸ್ವ​ಸ್ಥ​ಗೊಂಡಿ​ತ್ತು. ಸಾವು-ನೋವಿನ ನಡುವೆ ಹೋರಾಟ ನಡೆಸುತ್ತಿದ್ದ ಆನೆಗೆ ಬಂಡೀಪುರ ಅರಣ್ಯ ಇಲಾಖೆ ಪಶು ವೈದ್ಯ ಡಾ.ವಾಸೀಂ ಮಿರ್ಜಾ ಸತತ 4 ತಾಸು ಚಿಕಿತ್ಸೆ ಕೊಟ್ಟಬಳಿಕ ಚೇತರಿಸಿಕೊಂಡಿದೆ. ಆನೆಗೆ ಚಿಕಿತ್ಸೆ ನೀಡಲು ಅದನ್ನು ಎದ್ದು​ನಿ​ಲ್ಲಿ​ಸಲು ಅರಣ್ಯ ಸಿಬ್ಬಂದಿ ಸಾಕಷ್ಟು ಪರಿ​ಶ್ರ​ಮ​ಪ​ಟ್ಟಿದ್ದು, ಅದು ಮೆಚ್ಚು​ಗೆಗೆ ಪಾತ್ರ​ವಾ​ಗಿ​ತ್ತು.

click me!