ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) ಫೆ.10 ರಂದು ಮೂರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಈ ಪೈಕಿ ಆಜಾದಿ ಸ್ಯಾಟ್-2 ಉಪಗ್ರಹವನ್ನು ದೇಶದ 750 ವಿದ್ಯಾರ್ಥಿನಿಯರು ಸೇರಿ ಅಭಿವೃದ್ಧಿಪಡಿಸಿದ್ದು, ಈ ಪೈಕಿ ವಿಜಯನಗರದ ಎಂಟು ಬಾಲಕಿಯರು ಕೂಡ ಇದರಲ್ಲಿ ಕೈಜೋಡಿಸಿದ್ದಾರೆ !.
ಕೃಷ್ಣ ಎನ್. ಲಮಾಣಿ
ಹೊಸಪೇಟೆ (ಫೆ.19) : ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) ಫೆ.10 ರಂದು ಮೂರು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಈ ಪೈಕಿ ಆಜಾದಿ ಸ್ಯಾಟ್-2 ಉಪಗ್ರಹವನ್ನು ದೇಶದ 750 ವಿದ್ಯಾರ್ಥಿನಿಯರು ಸೇರಿ ಅಭಿವೃದ್ಧಿಪಡಿಸಿದ್ದು, ಈ ಪೈಕಿ ವಿಜಯನಗರದ ಎಂಟು ಬಾಲಕಿಯರು ಕೂಡ ಇದರಲ್ಲಿ ಕೈಜೋಡಿಸಿದ್ದಾರೆ !.
undefined
ಹೌದು, ಆಜಾದಿ ಕಾ ಅಮೃತ ಮಹೋತ್ಸವ(Azadi ka Amrit Mahotsav)ದ ನಿಮಿತ್ತ ಇಸ್ರೋ(ISRO) ಈ ಅವಕಾಶವನ್ನು ದೇಶದ 750 ವಿದ್ಯಾರ್ಥಿನಿಯರಿಗೆ ನೀಡಿತ್ತು. ಚೆನ್ನೈ ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾ(Space Kidz India) ಎಂಬ ಸ್ಟಾರ್ಟ್ ಅಫ್ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿತ್ತು. ಆಜಾದಿ ಸ್ಯಾಟ್-2 ಉಪಗ್ರಹ(Azadi SAT-2 satellite)ವನ್ನು ದೇಶದ 750 ವಿದ್ಯಾರ್ಥಿನಿಯರು ಆನ್‌ಲೈನ್‌ನಲ್ಲಿ ಅಭಿವೃದ್ಧಿಪಡಿಸಿದ್ದು, ಅಟಲ್ ಟಿಂಕರಿಂಗ್ ಪ್ರಯೋಗಾಲಯ ಇರುವ ಶಾಲೆಯ ಬಾಲಕಿಯರು ಈ ಉಪಗ್ರಹ ತಯಾರಿಕೆಯಲ್ಲಿ ಕೈ ಜೋಡಿಸಿದ್ದರು. ವಿಜಯನಗರ ಜಿಲ್ಲೆಯ ಹೊಸಪೇಟೆಯ ಫäಲ್‌ಬನ್ ಶಾಲೆಯ ಎಂಟು ವಿದ್ಯಾರ್ಥಿನಿಯರು ಈ ಉಪಗ್ರಹ ತಯಾರಿಕೆಯಲ್ಲಿ ಕೈಜೋಡಿಸಿದಲ್ಲದೇ, ಈ ಉಪಗ್ರಹವನ್ನು ಇಸ್ರೋದ ಎಸ್‌ಎಸ್‌ಎಲ್‌ವಿ-ಡಿ2 ಉಪಗ್ರಹ ಉಡಾವಣಾ ವಾಹನ ಹೊತ್ತೊಯ್ಯುವುದನ್ನು ಶ್ರೀಹರಿಕೋಟಾಗೆ ತೆರಳಿ ಖುದ್ದು ವೀಕ್ಷಣೆ ಮಾಡಿದ್ದಾರೆ.
ಅಮೃತ ಮಹೋತ್ಸವಕ್ಕೆ ‘ಆಜಾದಿ ಉಪಗ್ರಹ’..!
ಉಪಗ್ರಹ ತಯಾರಿಕೆ ಅವಕಾಶ:
ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ದೇಶದ 750 ವಿದ್ಯಾರ್ಥಿನಿಯರು ಸೇರಿ ಆಜಾದಿ ಸ್ಯಾಟ್-2 ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದಾರೆ. 8.7 ಕೆಜಿ ತೂಕದ ಈ ಕಿರು ಉಪಗ್ರಹ ತಯಾರಿಕೆಯಲ್ಲಿ ಚೆನ್ನೈನ ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆ ಬಾಲಕಿಯರಿಗೆ ಸಹಾಯ ಮಾಡಿದೆ. ಆನ್‌ಲೈನ್‌ನಲ್ಲೇ ಸಲಹೆ ನೀಡಿದ್ದು, ಇದರ ಫಲವಾಗಿ ಉಪಗ್ರಹ ತಯಾರಿಸಲಾಗಿತ್ತು. ಫೆ.10ರಂದು ದೇಶದ ವಿವಿಧ ರಾಜ್ಯಗಳ 750 ಮಕ್ಕಳು ಈ ಉಪಗ್ರಹ ಉಡಾವಣೆ ವೀಕ್ಷಣೆ ಮಾಡಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಏಕೈಕ ಶಾಲೆ ಎಂಬ ಹೆಗ್ಗಳಿಕೆಯನ್ನೂ ಫäಲ್‌ಬನ್ ಶಾಲಾ ಮಕ್ಕಳು ಪಡೆದಿದ್ದಾರೆ.
ಅಟಲ್ ಟಿಂಕರಿಂಗ್ ಲ್ಯಾಬ್:
ಫäಲ್‌ಬನ್ ಪ್ರೌಢಶಾಲೆಯಲ್ಲಿ ಸುಸಜ್ಜಿತ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಮೂರು ಕೊಠಡಿಗಳನ್ನು ಬಳಸಿ ಈ ಲ್ಯಾಬ್ ಮಾಡಲಾಗಿದೆ. ಲ್ಯಾಬ್‌ನ ಶಿಕ್ಷಕರಾಗಿರುವ ಸಯ್ಯದ್ ಸುಲೇಮಾನ್ ಅವರು ಮಕ್ಕಳಿಗೆ ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ವಿದ್ಯಮಾನ ಕಲಿಸುತ್ತಿದ್ದಾರೆ. ಜತೆಗೆ ಶಾಲೆಯ ವಿಜ್ಞಾನ ಶಿಕ್ಷಕರ ಜತೆಗೂಡಿ ಹೊಸ ಹೊಸ ಪ್ರಯೋಗ ಕೂಡ ಮಾಡುತ್ತಿದ್ದಾರೆ. ಇದರ ಫಲವಾಗಿ ಶಾಲಾ ಮಕ್ಕಳು ಉಪಗ್ರಹ ತಯಾರಿಕೆ ಜತೆಗೆ ವೀಕ್ಷಣೆಗೆ ಅವಕಾಶ ಪಡೆಯುವಂತಾಗಿದೆ.
ಉಪಗ್ರಹ ಉಡಾವಣೆ ವೀಕ್ಷಿಸಿದ ಬಾಲಕಿಯರು:
ಶ್ರೀಹರಿಕೋಟಾಗೆ ತೆರಳಿ ಫäಲ್‌ಬನ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯರಾದ ಅಸ್ವಿಯಾ ಎನ್.,ಬಿಬಿ ಆಯಿಷಾ, ಎಂಟನೇ ತರಗತಿಯ ನಿಸತ್ ಅಂಜುಂ, ಸಾಲಿಯಾ, ನಾಜ್ನಿನ್ ಕೌಸರ್ ಮತ್ತು ಹತ್ತನೇ ತರಗತಿಯ ಶಾಹಿನ್ ನಿಶಾ, ಫಿರ್ದೋಸ್ ಮತ್ತು ಶಿರಿನ್ ಉಪಗ್ರಹ ಉಡಾವಣೆ ವೀಕ್ಷಿಸಿದ್ದಾರೆ. ಇದಕ್ಕೂ ಮುನ್ನ ಆಜಾದಿ ಸ್ಯಾಟ್-2 ಉಪಗ್ರಹವನ್ನು ಆನ್‌ಲೈನ್‌ನಲ್ಲಿ ದೇಶದ 750 ವಿದ್ಯಾರ್ಥಿನಿಯರು ತಯಾರಿಸಿದ್ದಾಗಲೂ ಭಾಗಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕರ್ನಾಟಕದ ಕೀರ್ತಿ ಬೆಳಗಿದ್ದಾರೆ.
ಶಾಲೆಯ ಮುಖ್ಯಶಿಕ್ಷಕಿಯರಾದ ಫಹಮಿದಾಬಾನು ಮತ್ತು ಸಬಹತ್ ಹಾಗೂ ಶಾಲೆಯ ಎಟಿಎಲ್‌ನ ಮುಖ್ಯಸ್ಥ ಸಯ್ಯದ್ ಸುಲೇಮಾನ್ ಕೂಡ ಮಕ್ಕಳ ಜತೆಗೆ ತೆರಳಿ ಇಸ್ರೋದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿಯೂ ಮಕ್ಕಳ ಕಾರ್ಯಕ್ಕೆ ಭೇಷ್ ಎಂದಿದೆ.
ಮಾನವ ಸಹಿತ ಚಂದ್ರಯಾನಕ್ಕೆ ಸ್ವದೇಶಿ ಅಂತರಿಕ್ಷ ನೌಕೆ ಸಿದ್ಧ ಶೀಘ್ರವೇ ಇಸ್ರೋಗೆ ಹಸ್ತಾಂತರ
ವಿಜಯನಗರ ಜಿಲ್ಲೆಯ ಫäಲ್‌ಬನ್ ಶಾಲೆ ಮಕ್ಕಳು ಉಪಗ್ರಹ ತಯಾರಿಕೆ ಹಾಗೂ ಉಡಾವಣೆಯಲ್ಲಿ ಭಾಗಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು,ನೂತನ ವಿಜಯನಗರ ಜಿಲ್ಲೆಗೆ ಸಂದ ಕೀರ್ತಿಯಾಗಿದೆ.
ಸಯ್ಯದ್ ನಾಜೀಮುದ್ದಿನ್, ಅಧ್ಯಕ್ಷರು, ಫäಲ್‌ಬನ್ ಪ್ರೌಢ ಶಾಲೆ
ಶ್ರೀಹರಿಕೋಟಾದಲ್ಲಿ ಉಪಗ್ರಹ ಉಡಾವಣೆ ವೀಕ್ಷಣೆ ಮಾಡಿದ್ದು, ನಮ್ಮ ಜೀವನದ ಹೆಮ್ಮೆಯಾಗಿದೆ. ವಿಜ್ಞಾನದಲ್ಲಿ ಆಸಕ್ತಿ ಬೆಳೆಸಲು ಇಂಥ ಕಾರ್ಯಕ್ಕೆ ನಮ್ಮನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಅವೀಸ್ಮರಣಿಯ.
ನಾಜ್ನಿನ್ ಕೌಸರ್, ಫಿರ್ದೋಸ್ ಮತ್ತು ಶಿರಿನ್, ಶಾಹಿನ್ ನಿಶಾ ಶ್ರೀಹರಿಕೋಟಾಗೆ ತೆರಳಿದ್ದ ವಿದ್ಯಾರ್ಥಿನಿಯರು.