ನಂಜನಗೂಡು (ಡಿ.24): 17 ವರ್ಷದ ಅಪ್ರಾಪ್ತ ಬಾಲಕನೊಂದಿಗೆ (Minor Boy) ದೈಹಿಕ ಸಂಪರ್ಕ ಹೊಂದಿ ವಿವಾಹವಾಗಬೇಕೆಂದು (Marriage) ಪೀಡಿಸುತ್ತಿದ್ದ ಕೇರಳದ (Kerala) 35 ವರ್ಷದ ಮಹಿಳೆ ವಿರುದ್ಧ ನಂಜನಗೂಡು (Nanjanagudu) ಪಟ್ಟಣ ಪೊಲೀಸ್ (Police) ಠಾಣೆಯಲ್ಲಿ ಫೋಸ್ಕೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮೂಲತಃ ಕೇರಳದ ವೈನಾಡು ಜಿಲ್ಲೆಯ ಆ ಮಹಿಳೆಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ಪತಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದು, ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದಾರೆ. ಆರು ತಿಂಗಳ ಹಿಂದೆ ಫೇಸ್‌ಬುಕ್ (Facebook) ಮೂಲಕ ಈ ಅಪ್ರಾಪ್ತ ಬಾಲಕ ಪರಿಚಿತನಾದ. ಪ್ರತಿನಿತ್ಯ ಚಾಟಿಂಗ್ ಮಾಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಸಲುಗೆ ಹೆಚ್ಚಾಯಿತು. ತಿಂಗಳ ಹಿಂದೆ ಆ ಬಾಲಕ ಊರಿನಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆತ 10 ದಿನಗಳ ಕಾಲ ಆಕೆಯೊಂದಿಗೆ ಕೇರಳ (Kerala), ಆಂಧ್ರಪ್ರದೇಶ (Andhra Pradesh) ಹಾಗೂ ಬೆಂಗಳೂರು ಕಡೆ ಪ್ರವಾಸ ಮಾಡಿರುವುದು ಗೊತ್ತಾಗಿದೆ. ಆ ಸಂದರ್ಭದಲ್ಲಿ ದೈಹಿಕ ಸಂಪರ್ಕ ಬೆಳೆದಿದೆ. ಮದುವೆಯಾಗುವಂತೆ (Marriage) ದುಂಬಾಲು ಬಿದ್ದಾಗ ತಪ್ಪಿಸಿಕೊಂಡು ಆತ ಊರಿಗೆ ಮರಳಿದ್ದ. ಆತನನ್ನು ಹುಡುಕಿಕೊಂಡ ಬಂದ ಆ ಮಹಿಳೆ ಮದುವೆ ಮಾಡಿಕೊಡುವಂತೆ ಕುಟುಂಬದವರನ್ನು ಒತ್ತಾಯಿಸಿದರು. ಇದರಿಂದ ಕುಟುಂಬದವರು ರಕ್ಷಣೆ ಕೋರಿ ಶಿಶು ಅಭಿವೃದ್ಧಿ ಇಲಾಖೆಯ ಮೊರೆ ಹೋಗಿದ್ದಾರೆ. ಶಿಶು ಅಭಿವೃದ್ಧಿ ಇಲಾಖೆಯು ಅಪ್ರಾಪ್ತನನ್ನು ಮೈಸೂರಿನ (Mysuru) ಬಾಲಕರ ಬಾಲ ಮಂದಿರದಲ್ಲಿ ಹಾಗೂ ಆ ಮಹಿಳೆಯನ್ನು ರಾಜ್ಯ ಮಹಿಳಾ ನಿಲಯದಲ್ಲಿ ಇರಿಸಿದ್ದಾರೆ.
undefined
ಬಾಲಮಂದಿರದಲ್ಲಿ ಅಪ್ರಾಪ್ತನನ್ನು ವಿಚಾರಣೆಗೆ ನಡೆಸಿದಾಗ ಆಕೆ ಮದುವೆಯಾಗಲು ದುಂಬಾಲು ಬಿದ್ದಿರುವುದು ಹಾಗೂ ಪ್ರವಾಸಕ್ಕೆ (Tour) ತೆರಳಿದ್ದ ಸಂದರ್ಭದಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದ ಬಗ್ಗೆ ಬಾಲಕ ವಿವರಿಸಿದ್ದಾನೆ. ಅಪ್ರಾಪ್ತನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಡಿ ಮಹಿಳೆಯ ವಿರುದ್ಧ ಫೋಸ್ಕೋ ಕಾಯಿದೆಯಡಿ ಮೈಸೂರಿನ ಬಾಲಮಂದಿರದವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪದೇ ಪದೇ ಅದೇ ಪಾಠ ಹೇಳುತ್ತಿದ್ದ ಶಿಕ್ಷಕ ಅರೆಸ್ಟ್ :
ಮಧ್ಯಪ್ರದೇಶದ ಗುಣಾದಲ್ಲಿ ಶಾಕಿಂಗ್ ಘಟನೆಯೊಂದು ವರದಿಯಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರಿಗೆ ಪೋರ್ನ್ ವಿಡಿಯೋ ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಜೀವಶಾಸ್ತ್ರ ತರಗತಿ ತೆಗೆದುಕೊಳ್ಳುತ್ತಿದ್ದ ಶಿಕ್ಷಕ ಪ್ರದೀಪ್ ಸೋಲಂಕಿ ಪದೇ ಪದೇ ಸಂತಾನೋತ್ಪತ್ತಿ ಪಾಠವನ್ನೇ ಹೇಳಿಕೊಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಶಾಲೆಯ ಪ್ರಯೋಗಾಲಯದಲ್ಲಿ ಪೋರ್ನ್ ವೀಡಿಯೊಗಳು ಮತ್ತು ಫೋಟೋಗಳನ್ನು ತೋರಿಸುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು..
ವಿದ್ಯಾರ್ಥಿನಿಯರಿಗೆ ಪೋರ್ನ್ ತೋರಿಸಿದ ಶಿಕ್ಷಕನ ಬಂಧನ
ವಿದ್ಯಾರ್ಥಿನಿಯರು ಈ ಘಟನೆಯ ಬಗ್ಗೆ ಮೊದಲು ಶಾಲಾ ಶಿಕ್ಷಕರಿಗೆ ತಿಳಿಸಿದ್ದಾರೆ. ನಂತರ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ. ಶಿಕ್ಷಕ ಪ್ರದೀಪ್ ಸೋಲಂಕಿ ಪದೇ ಪದೇ ಬೆದರಿಕೆ ಹಾಕುತ್ತಿದ್ದರು ಮತ್ತು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದನ್ನು ವಿರೋಧಿಸಿ ಬಾಲಕಿಯರು ಪ್ರತಿಭಟನೆ ನಡೆಸಿದಾಗ ಪ್ರತಿಭಟಿಸಿದವರನ್ನು ಶಾಲೆಯಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದರು. ಹೆದರಿಕೆಯಿಂದ ಹುಡುಗಿಯರು ಬಹಳ ಸಮಯ ಯಾರಿಗೂ ಏನೂ ಹೇಳಿರಲಿಲ್ಲ. ಆದರೆ ವಿದ್ಯಾರ್ಥಿನಿಯೊಬ್ಬಳು ಪ್ರಾಯೋಗಿಕ ಪ್ರತಿ ಪಡೆಯಲು ಹೋದಾಗ ಪ್ರದೀಪ್ ಸೋಲಂಕಿ ಆಕೆಯನ್ನು ಹಿಡಿಯಲು ಯತ್ನಿಸಿದ್ದಾನೆ. ಹುಡುಗಿ ಹೇಗೋ ಮಾಡಿ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ನಂತರ ಆಕೆ ತನ್ನ ಕುಟುಂಬ ಸದಸ್ಯರಿಗೆ ಈ ಮಾಹಿತಿ ನೀಡಿದ್ದಳು.
ಪದೇ ಪದೇ ಸಂತಾನೋತ್ಪತ್ತಿ ಪಾಠ
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅನುಸೂಯ್ಯಾ ರಘುವಂಶಿ ಅವರು ಕಸ್ತೂರಬಾ ವಸತಿ ನಿಲಯವನ್ನು ಪರಿಶೀಲಿಸಿದ್ದಾರೆ. ಅಲ್ಲಿ ಐವರು ಬಾಲಕಿಯರು ಜೀವಶಾಸ್ತ್ರ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಶಿಕ್ಷಕನ ಕೆಟ್ಟ ವರ್ತನೆಯಿಂದ ಕಂಗಾಲಾಗಿದ್ದಾರೆಂದೂ ತಿಳಿದು ಬಂದಿದೆ. ಸರ್ ತಮಗೆ ಪ್ರತ್ಯೇಕವಾಗಿ ಪ್ರಯೋಗಾಲಕ್ಕೆ ಕರೆದೊಯ್ದು ಅಶ್ಲೀಲ ವಿಡಿಯೋಗಳನ್ನು ತೋರಿಸಿ ಕೆಟ್ಟದಾಗಿ ವರ್ತಿಸಲು ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾರೆ. ದೂರು ನೀಡಿದರೆ ನಿಮ್ಮ ಓದು ನಿಲ್ಲಿಸುತ್ತೇನೆ ಎಂದು ಶಿಕ್ಷಕರು ನಮಗೆ ಬೆದರಿಕೆ ಹಾಕುತ್ತಿದ್ದರು. ನಾನು ಮನೆಯಲ್ಲಿ ನಿಮ್ಮ ಬಗ್ಗೆ ದೂರು ನೀಡುತ್ತೇನೆ. ಬಳಿಕ ನಿಮ್ಮ ಅಧ್ಯಯನವು ಸ್ವಯಂಚಾಲಿತವಾಗಿ ನಿಲ್ಲುತ್ತದೆ. ನಾನೇ ಈ ಶಾಲೆಯ ಪ್ರಾಂಶುಪಾಲನಾಗಲಿದ್ದೇನೆ ಎಂದು ಹುಡುಗಿಯರೊಂದಿಗೆ ತಪ್ಪಾಗಿ ವರ್ತಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು
ಶಾಲೆಯ ಐವರು ವಿದ್ಯಾರ್ಥಿನಿಯರಿಂದ ಶಿಕ್ಷಕನ ವಿರುದ್ಧ ದೂರು
ವಾರ್ಡನ್ ನೀತು ಸೋನಿ ಅವರು ಡಿಸೆಂಬರ್ 20 ರಂದು ವಿದ್ಯಾರ್ಥಿನಿಯರಿಂದ ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಐವರು ವಿದ್ಯಾರ್ಥಿನಿಯರು ತಮಗೆ ವಿವಿಧ ಅರ್ಜಿಗಳನ್ನು ನೀಡಿ ದೂರು ಸಲ್ಲಿಸಿದ್ದರು. ಇದರಲ್ಲಿ ಜೀವಶಾಸ್ತ್ರ ಶಿಕ್ಷಕರು ಪದೇ ಪದೇ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ತಿಳಿಸಲಾಗಿದ್ದು, ಶಿಕ್ಷಕನ ವಿರುದ್ಧ ದೂರು ದಾಖಲಿಸಲಾಗಿದೆ. ಇದಲ್ಲದೇ ಶಿಕ್ಷಕನ ಅಮಾನತು ಕ್ರಮಕ್ಕೆ ಆಯುಕ್ತರಿಗೆ ಡಿಇಒ ಪತ್ರ ಬರೆದಿದ್ದರು.