Uttara Kannada : ನದಿಗೆ ಉರುಳಿದ ಲಾರಿ- ಐವರ ರಕ್ಷಣೆ, ಓರ್ವ ನಾಪತ್ತೆ

Published : Aug 25, 2022, 06:37 AM IST
Uttara Kannada : ನದಿಗೆ ಉರುಳಿದ ಲಾರಿ- ಐವರ ರಕ್ಷಣೆ, ಓರ್ವ ನಾಪತ್ತೆ

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪಣಸಗುಳಿಯಲ್ಲಿ ಗಂಗಾವಳಿ ನದಿಯ ರಭಸಕ್ಕೆ ಮಾರ್ಗ‌‌ ತಪ್ಪಿ ಲಾರಿಯೊಂದು ಕೊಚ್ಚಿ ಹೋಗಿ ಐವರು ರಕ್ಷಣೆಗೊಳಗಾಗಿ ಓರ್ವ ನಾಪತ್ತೆಯಾದ ಘಟನೆ ನಡೆದಿದೆ. 

ಉತ್ತರ ಕನ್ನಡ (ಆ.25) :ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪಣಸಗುಳಿಯಲ್ಲಿ ಗಂಗಾವಳಿ ನದಿಯ ರಭಸಕ್ಕೆ ಮಾರ್ಗ‌‌ ತಪ್ಪಿ ಲಾರಿಯೊಂದು ಕೊಚ್ಚಿ ಹೋಗಿ ಐವರು ರಕ್ಷಣೆಗೊಳಗಾಗಿ ಓರ್ವ ನಾಪತ್ತೆಯಾದ ಘಟನೆ ನಡೆದಿದೆ.  ಯಲ್ಲಾಪುರ(Yallapura) ತಾಲೂಕಿನ ಅರಬೈಲ್(Arabail) ಸಮೀಪ ಗಂಗಾವಳಿ‌ ನದಿ(Gangawali river)ಗೆ ಅಡ್ಡಲಾಗಿ ಕಟ್ಟಿರುವ ಪಣಸಗುಳಿ ಸೇತುವೆ(Panasaguli bridge) ಉಕ್ಕಿ ಹರಿಯುತ್ತಿದ್ದ ನದಿಯಿಂದಾಗಿ‌ ಮುಳುಗಡೆಯಾಗಿತ್ತು‌.‌ ಈ ಸೇತುವೆಯ ಮೇಲೆಯೇ ಚೀರೆಕಲ್ಲು ಲೋಡ್ ಮಾಡಿಕೊಂಡು ಹೋಗಿದ್ದ ಲಾರಿ ಅನ್ಲೋಡ್ ಮಾಡಿ ವಾಪಾಸ್ಸಾಗುತ್ತಿದ್ದಾಗ ನೀರಿನ ಒತ್ತಡದಲ್ಲಿ ಸೇತುವೆಯಲ್ಲಿ ಸಾಗಲಾಗದೆ ಲಾರಿ ಪಲ್ಟಿಯಾಗಿ ಬಿದ್ದಿದೆ. ನದಿ ಮಧ್ಯೆ ಸಿಲುಕಿದ ಕಾರ್ಮಿಕರು ಪ್ರಾಣ ರಕ್ಷಣೆಗಾಗಿ ಸಾಕಷ್ಟು ಪರದಾಡಿದ್ದು, ಬಳಿಕ ಲಾರಿಯ ಮೇಲೆ ನಿಂತು ರಕ್ಷಣೆಗಾಗಿ ಕೂಗಾಡಿದ್ದಾರೆ. 

ರೋಚಕ RESCUE OPERATION: ಚಾಲಕ ಬಚಾವ್; ಕ್ಲೀನರ್ ನಾಪತ್ತೆ!

ಘಟನಾ ಸ್ಥಳದಲ್ಲಿ ಯಲ್ಲಾಪುರ ಹಾಗೂ ಅಂಕೋಲಾ ಪೊಲೀಸರು ಮತ್ತು ಸ್ಥಳೀಯರು ಜಮಾಯಿಸಿದ್ದು, ನಂತರ ಗುಳ್ಳಾಪುರದ ಬೋಟ್ ಸಹಾಯದಿಂದ ಲಾರಿಯಲ್ಲಿದ್ದ ರಾಜೇಶ್ ಹರಿಕಂತ್ರ, ಸುನೀಲ, ರಾಜು, ಶಿವಾನಂದ, ದಿನೇಶ್ ಅವರನ್ನು ರಕ್ಷಣೆ‌ ಮಾಡಲಾಗಿದೆ. ಆದರೆ, ಇದೇ ಲಾರಿಯಲ್ಲಿದ್ದ ಸಂದೀಪ ಎಂಬಾತ ನಾಪತ್ತೆಯಾಗಿದ್ದು, ಆತನ ಹುಡುಕಾಟ ಮುಂದುವರಿದಿದೆ.‌ 

ಅಂಕೋಲಾ‌ ಪಣಸಗುಳಿಯಲ್ಲಿ ಒಂದೆಡೆಯಿಂದ‌ ಮತ್ತೊಂದೆಡೆ ಸಾಗಲು ಜನರು ಇದೇ ಸೇತುವೆಯನ್ನು ಅವಲಂಭಿಸುತ್ತಿದ್ದು, ಮಳೆಗಾಲದ ಸಂದರ್ಭದಲ್ಲೂ ನೀರು ಕೊಂಚ ಇಳಿಯಾದಾಗ ವಾಹನಗಳ ಮೂಲಕ ಇದೇ ದಾರಿಯಲ್ಲಿ ಸಾಗುತ್ತಾರೆ. ಇದೇ ಕಾರಣದಿಂದ ಲಾರಿ ಕೂಡಾ ಈ ರಸ್ತೆಯಲ್ಲಿ ಸಾಗಿದ್ದು, ಹಿಂತಿರುಗುವಾಗ ಈ ದುರ್ಘಟನೆ ನಡೆದಿದೆ.‌ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನೊಬ್ಬಾತನಿಗೆ ಹುಡುಕಾಟ ಮುಂದುವರಿಸಿದ್ದಾರೆ. ಬಳ್ಳಾರಿ: ರಾರಾವಿ ಬಳಿ ವೇದಾವತಿ ನದಿಯಲ್ಲಿ ಕೊಚ್ಚಿಹೋಗಿದ್ದ ಲಾರಿ ಪತ್ತೆ

PREV
Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!