ನ್ಯಾಯಾಲಯದ ಮುಂದೆ ಯಾವುದೇ ಪ್ರಕರಣದ ಸಂಗತಿ ಮಂಡಿಸುವ ಕಲೆ ಮತ್ತು ಸಂಬಂಧಿಸಿದ ಕಾನೂನುಗಳ ಅರ್ಥೈಸುವಿಕೆಯ ಕಲೆ ಇದ್ದಾಗ ಮಾತ್ರ ಅವನು ಒಬ್ಬ ಶ್ರೇಷ್ಠ ಮತ್ತು ಯಶಸ್ವಿ ವಕೀಲನಾಗಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ. ಅರುಣ ಹೇಳಿದರು.
ಧಾರವಾಡ (ಆ.22): ನ್ಯಾಯಾಲಯದ ಮುಂದೆ ಯಾವುದೇ ಪ್ರಕರಣದ ಸಂಗತಿ ಮಂಡಿಸುವ ಕಲೆ ಮತ್ತು ಸಂಬಂಧಿಸಿದ ಕಾನೂನುಗಳ ಅರ್ಥೈಸುವಿಕೆಯ ಕಲೆ ಇದ್ದಾಗ ಮಾತ್ರ ಅವನು ಒಬ್ಬ ಶ್ರೇಷ್ಠ ಮತ್ತು ಯಶಸ್ವಿ ವಕೀಲನಾಗಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ. ಅರುಣ ಹೇಳಿದರು. ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ 8ನೇ ಅಂತಾರಾಷ್ಟ್ರೀಯ ಕಲ್ಪಿತ ನ್ಯಾಯಾಲಯ (ಮೂಟ್ ಕೋರ್ಟ್) ಸ್ಪರ್ಧೆಯ ಸಮಾರೋಪದಲ್ಲಿ ಮಾತನಾಡಿದ ಅವರು, ನ್ಯಾಯವಾದಿಗೆ ಕಾನೂನುಗಳ ಪೂರ್ಣ ಜ್ಞಾನದ ಜೊತೆಗೆ ತಾನು ತೆಗೆದುಕೊಂಡಿರುವ ಪ್ರಕರಣದ ಪೂರ್ಣ ಮಾಹಿತಿ ಇರಬೇಕು.
ವಕೀಲರನ್ನು ಸಮಾಜದ ಕುಶಲಕರ್ಮಿಗಳೆಂದು ಕರೆಯಲಾಗುತ್ತದೆ. ವಿದ್ಯಾರ್ಥಿಗಳು ಇಂತಹ ಕಲ್ಪಿತ ನ್ಯಾಯಾಲಯಗಳ ಸ್ಪರ್ಧೆಗಳಿಂದ ವಾದಗಳನ್ನು ತಾಳ್ಮೆಯಿಂದ ಆಲಿಸುವ, ಬುದ್ದಿವಂತಿಕೆಯಿಂದ ಉತ್ತರಿಸುವ ಮತ್ತು ಸಂಗತಿಗನುಗುಣವಾಗಿ ಸಂಬಂಧಿತ ಕಾನೂನುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತವೆ ಎಂದರು. ಕಲ್ಪಿತ ನ್ಯಾಯಾಲಯ ಸ್ಪರ್ಧೆ ಹಿಂದಿನಿಂದಲೂ ಬಂದ ಕಲ್ಪನೆ. ಇಂತಹ ಸ್ಪರ್ಧೆಗಳು ಕಾನೂನಿನ ಜ್ಞಾನ, ಕಾನೂನಿನ ವ್ಯಾಖ್ಯಾನ, ಕಾನೂನಿನ ಸಮಗ್ರತೆ, ವಿಷಯ ವಸ್ತುಗಳ ತಿಳಿವಳಿಕೆ, ವೃತ್ತಿಪರತೆಯಲ್ಲಿ ಶ್ರೇಷ್ಠತೆಯನ್ನು ಪಡೆದವರನ್ನು ಅನುಸರಿಸಿ ಹೇಗೆ ಪ್ರಬುದ್ಧತೆಯನ್ನು ಪಡೆದುಕೊಳ್ಳಬೇಕು ಎಂಬ ಸೂಕ್ಷತ್ರ್ಮತೆಗಳನ್ನು ಅರಿವು ಮಾಡಿ ಕೊಡುವ ಸಾಧನಗಳಾಗಿವೆ ಎಂದರು.
ಮಾರುಕಟ್ಟೆಯಲ್ಲಿ ಹೆಸರು ಕಾಳು ಬೆಲೆ ದಿಢೀರ್ ಕುಸಿತ: ಸಂಕಷ್ಟದಲ್ಲಿ ಬೆಳೆಗಾರ
ಹೈಕೋರ್ಟ್ ಇನ್ನೋರ್ವ ನ್ಯಾಯಮೂರ್ತಿ ರವಿ ವಿ.ಹೊಸಮನಿ ಮಾತನಾಡಿ, ನಾವು ಕಾನೂನು ಕಲಿಯುವಾಗಿನ ಪರಿಸ್ಥಿತಿಗಿಂತ ಇಂದಿನ ಸ್ಥಿತಿ ತಂತ್ರಜ್ಞಾನದಲ್ಲಿ ತುಂಬ ಸುಧಾರಿಸಿದೆ. ವಿದ್ಯಾರ್ಥಿಗಳಿಗೆ ಸಂಪನ್ಮೂಲದ ಕೊರತೆ ಅಷ್ಟಾಗಿ ಇರದ ಕಾರಣ ಅವಕಾಶಗಳನ್ನು ಬಳಸಿಕೊಂಡು ತಮ್ಮ ಸಾಮರ್ಥ್ಯ ಮೀರಿ ಬೆಳೆಯಬಹುದು ಎಂದರು. ಕಾನೂನು ಕಾಲೇಜಿನ ನಿವೃತ್ತ ಪ್ರಚಾರ್ಯ ಡಿ.ವೈ. ಕುಲಕರ್ಣಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಅಂತಾರಾಷ್ಟ್ರೀಯ ಕಾನೂನು ಅತ್ಯಂತ ಮಹತ್ವದ ಸ್ಢಾನ ಹೊಂದಿದೆ. ಬದಲಾದ ಪರಿಸ್ಥಿಗನುಗುಣವಾಗಿ ಅಂತಾರಾಷ್ಟ್ರೀಯ ಕಾನೂನು ಜಟಿಲ ಕಾನೂನಾಗಿ ಮಾರ್ಪಡುತ್ತಿದೆ. ಹಾಗಾಗಿ ಕಾನೂನು ಪದವೀಧರರಿಗೆ ಸಾಕಷ್ಟು ಅವಕಾಶ ತೆರೆದುಕೊಂಡಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮಾಂಸದೂಟದಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಪ್ರಮೋದ್ ಮುತಾಲಿಕ್
ಅಧ್ಯಕ್ಷತೆ ವಹಿಸಿದ್ದ ವಿವಿ ಪ್ರಭಾರ ಕುಲಪತಿ ಪ್ರೊ.ರತ್ನಾ ಆರ್. ಭರಮಗೌಡರ್, ವಾದ ಮಂಡನೆ ಎಂಬುದು ಒಂದು ಕಲೆ,ಅದನ್ನು ಬೆಳೆಸಿಕೊಳ್ಳಬೇಕಾದರೆ ಕಠಿಣ ಪರಿಶ್ರಮ ಸತತ ಅಭ್ಯಾಸದ ಅಗತ್ಯವಿದೆ.ಇಂತಹ ಸ್ಪರ್ಧೆಗಳು ಕಾನೂನಿನ ಜ್ಞಾನ, ಕಾನೂನಿನ ವ್ಯಾಖ್ಯಾನ, ಕಾನೂನಿನ ಸಮಗ್ರತೆ,ವಿಷಯವಸ್ತುಗಳ ತಿಳಿವಳಿಕೆ, ವೃತ್ತಿಪರತೆಯಲ್ಲಿ ಶ್ರೇಷ್ಠತೆಯನ್ನು ಪಡೆದವರನ್ನು ಅನುಸರಿಸಿ ಪ್ರಭುದ್ಧತೆ ಪಡೆದುಕೊಳ್ಳಬೇಕು ಎಂದರು. ವಿಜೇತ ತಂಡಗಳ ಘೋಷಣೆಯನ್ನು ಗಿರೀಶ್ ಕೆ.ಸಿ ಮಾಡಿದರು.ಕುಲಸಚಿವ ಮಹಮ್ಮದ್ ಝುಬೇರ, ಪ್ರೊ.ಜಿ.ಬಿ. ಪಾಟೀಲ, ಡಾ.ಸಿ.ಎಸ್. ಪಾಟೀಲ, ರಂಗಸ್ವಾಮಿ ಇದ್ದರು.