ಸಿದ್ದು ಸುಲ್ತಾನ್‌ ಎಂದ ಸಂಸದ ಪ್ರತಾಪ್ ಸಿಂಹ ಗೆ ಎಂ.ಬಿ ಪಾಟೀಲ್ ಟಾಂಗ್

Published : Aug 22, 2022, 10:10 PM IST
ಸಿದ್ದು ಸುಲ್ತಾನ್‌ ಎಂದ ಸಂಸದ ಪ್ರತಾಪ್ ಸಿಂಹ ಗೆ ಎಂ.ಬಿ ಪಾಟೀಲ್ ಟಾಂಗ್

ಸಾರಾಂಶ

ಕಾಂಗ್ರೆಸ್ KPCC ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕಗೊಂಡ ಮೇಲೆ ಇಡೀ ರಾಜ್ಯದಲ್ಲಿ ಮಿಂಚಿನ ಪ್ರವಾಸ ಶುರು ಮಾಡಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ 

ಚಿತ್ರದುರ್ಗ (ಆ.22): ಕಾಂಗ್ರೆಸ್ KPCC ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕಗೊಂಡ ಮೇಲೆ ಇಡೀ ರಾಜ್ಯದಲ್ಲಿ ಮಿಂಚಿನ ಪ್ರವಾಸ ಶುರು ಮಾಡಿದ್ದಾರೆ. ಇಂದು ಕೋಟೆನಾಡಿನ ಪ್ರಸಿದ್ದ ಮಠಗಳಾದ ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಅವರೊಟ್ಟಿಗೆ ನೀರಾವರಿ ಕುರಿತು ಅನೇಕ ವಿಷಯಗಳನ್ನು ಚರ್ಚೆ ಮಾಡಿದರು. ನಂತರ ಚಿತ್ರದುರ್ಗದ ಮತ್ತೊಂದು ಪ್ರಸಿದ್ದ ಮಠವಾದ ಮುರುಘಾ ಮಠಕ್ಕೆ ಭೇಟಿ ನೀಡಿ, ಡಾ.ಶಿವಮೂರ್ತಿ ಮುರುಘಾ ಶರಣರಿಗೆ ನಮಿಸಿ ಆಶೀರ್ವಾದ ಪಡೆದರು.  ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ದ ಬಿಜೆಪಿ ನಾಯಕರು ವಾಗ್ದಾಳಿ ನಡೆಸ್ತಿರೋದಕ್ಕೆ ಕಿಡಿಕಾರಿದರು.‌ ಸಿದ್ದು ಸುಲ್ತಾನ್ ಗೆ ಹೆದರಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹರ ಭಾಷೆಯನ್ನು ಜನರು ತಡೆದುಕೊಳ್ಳಲ್ಲ. ಬಿಜೆಪಿಯವರದ್ದು ವಿನಾಶ ಕಾಲೆ, ವಿಪರೀತ ಬುದ್ದಿ ಎಂದು ಕಿಡಿಕಾರಿದರು.ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆಯೋದ್ರ ಪರಿಣಾಮ ಏನಾಗಿದೆ ಎಂದು ಇವ್ರು ಊಹಿಸಿಲ್ಲ. ಸಿದ್ದರಾಮಯ್ಯ ಶಕ್ತಿ ಏನು ಅಂತ ಇವರಿಗೆ ಅರ್ಥ ಆಗಿಲ್ಲ. ಜನರು ಕೂಡ ಈ ರೀತಿ ಹೇಳಿಕೆಗಳನ್ನು ವಹಿಸಿಕೊಳ್ಳಲ್ಲ.

ಸಿದ್ದರಾಮಯ್ಯ ಅವರ ದಾವಣಗೆರೆ ಕಾರ್ಯಕ್ರಮದಿಂದ ಬಿಜೆಪಿಗೆ ನಡುಕ ಹುಟ್ಟಿದೆ. ರಾಜ್ಯದಲ್ಲಿ ಸಂಪೂರ್ಣ ಬಿಜೆಪಿ ನೆಲಕ್ಕೆ ಕುಸಿದಿದೆ‌. ಚುನಾವಣೆ ನಡೆದರೆ 50 ಸೀಟ್ ಕೂಡ ಗೆಲ್ಲೋದಿಲ್ಲ. ನಾವು 130ರಿಂದ 140 ಸ್ಥಾನ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರ ಅನುಭವಿಸಲು ಅಲ್ಲ, ಕರ್ನಾಟಕ ನಂಬರ್ ಒನ್ ಆಗಬೇಕು. ಯುಪಿ ಮಾಡೆಲ್ ಅಂದ್ರೆ ಕೊನೆಯಿಂದ ಮೊದಲು ಬರ್ತೀವಿ ಅದು ಬೇಡ ನಮಗೆ ನಮಗೆ ಕರ್ನಾಟಕ ಮಾಡೆಲ್ ಇಂಪಾರ್ಟೆಂಟ್ ಅವರಿಗೆ ಯುಪಿ ಮಾಡೆಲ್ ಇಂಪಾರ್ಟೆಂಟ್.

ಸಿದ್ದುಗೆ ಮೊಟ್ಟೆ ಎಸೆತ ಬಗ್ಗೆ ತನಿಖೆ: ಸಿಎಂ ಬೊಮ್ಮಾಯಿ

ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ ಬಿಜೆಪಿಯವರು ಇದರ ಬಗ್ಗೆ ಮಾತಾಡಲಿ. ಮೊಟ್ಟೆ ಎಸೆತ, ಹಿಜಾಬ್, ಪಠ್ಯ ಪರಿಷ್ಕರಣೆಯಿಂದ ತಿರುಚುವ ಕೆಲಸ. ಇದ್ರಿಂದ ಮತ್ತೆ ಅಧಿಕಾರಿಕ್ಕೆ ಬರುವ ಕನಸು ಕಾಣ್ತಿದ್ದಾರೆ.‌ ಜನರು ಪ್ರಭುದ್ದರಾಗಿದ್ದಾರೆ ಇವರಿಗೆ ಪಾಠ ಕಲಿಸ್ತಾರೆ. ಮೊಟ್ಟೆ ಎಸೆತ ಬಹಳ ಚಿಲ್ಲರೆ ಕೆಲ್ಸ ನಮಗೆ ಮಾಡೋಕ್ ಬರಲ್ವಾ, ಆದ್ರೆ ನಾವು ಮಾಡಲ್ಲ. ನಿನ್ನೆ ರಾತ್ರಿ ಹೋಗಿ ವಿಜಯಪುರದ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಪೊಟೋ ಹಚ್ಚಿದ್ದಾರೆ.

 

 ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ಕತ್ತಲಲ್ಲಿ ಹೋಗಿ ಪೋಸ್ಟರ್ ಹಚ್ಚೋದು ಅದೇನ್ ದೊಡ್ಡ ಕೆಲಸನಾ ಕೊಡಗು ಚಲೋ ಹೋಗುವುದು ಆಡಳಿತ ಯಂತ್ರ ಕುಸಿದಿದೆ. ಇದಕ್ಕೆ ನಮ್ಮ ನಾಯಕರು ಎಲ್ಲರದ್ದೂ ಸಹಮತವಿದೆ. ಕೊಡಗು ಚಲೋ ಕೇವಲ ಸಿದ್ದರಾಮಯ್ಯ ಅವರು ಹೇಳಿಲ್ಲ. ನಮ್ಮ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸೇರಿ ಎಲ್ಲರೂ ನಿರ್ಧಾರ ಮಾಡಿದ್ದಾರೆ. ಬಳ್ಳಾರಿ ಮಾದರಿ ಬೇರೆ, ಕೊಡಗು ಚಲೋನೇ ಬೇರೆ ಎಂದರು.

PREV
Read more Articles on
click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!