ಸ್ವಾಮೀಜಿಗೆ ಕೈಕೊಟ್ಟ ಯುವತಿ: ಮಠದಲ್ಲಿರಬೇಕಾದವನು ಜೈಲು ಪಾಲು

By Suvarna News  |  First Published Mar 6, 2020, 10:52 AM IST

ಯುವತಿಯನ್ನು ನಂಬಿ ಓಡಿಹೋಗಿ ಮದುವೆಯಾಗಿದ್ದ ಸ್ವಾಮೀಜಿ ಇದೀಗ ಜೈಲು ಸೇರಿದ್ದಾನೆ. ಶಿವರಾತ್ರಿ ಸಮಯದಲ್ಲಿ ಇಬ್ಬರೂ ಓಡಿ ಹೋಗಿದ್ದು, ಈಗ ಯುವತಿ ಸ್ವಾಮೀಜಿಯನ್ನು ತೊರೆದಿದ್ದಾಳೆ.


ಕೋಲಾರ(ಮಾ.06) : ಯುವತಿಯನ್ನು ನಂಬಿ ಓಡಿಹೋಗಿ ಮದುವೆಯಾಗಿದ್ದ ಸ್ವಾಮೀಜಿ ಇದೀಗ ಜೈಲು ಸೇರಿದ್ದಾನೆ. ಶಿವರಾತ್ರಿ ಸಮಯದಲ್ಲಿ ಇಬ್ಬರೂ ಓಡಿ ಹೋಗಿದ್ದು, ಈಗ ಯುವತಿ ಸ್ವಾಮೀಜಿಯನ್ನು ತೊರೆದಿದ್ದಾಳೆ.

Tap to resize

Latest Videos

ಯುವತಿ ಜೊತೆ ಸ್ವಾಮೀಜಿ ಎಸ್ಕೇಪ್ ಆದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮಾಜಿ ಸ್ವಾಮೀಜಿಗೆ ಕೈಕೊಟ್ಟು ಉಲ್ಟಾ ಹೊಡೆದ ಯುವತಿ ಪೋಷಕರೊಂದಿಗೆ ಮನೆಗೆ ಹೋಗಿದ್ದಾಳೆ.

ಮಠ ಸ್ಥಾಪಿಸಲು ಬಂದ ಸ್ವಾಮೀಜಿ ಯುವತಿಯೊಂದಿಗೆ ಪರಾರಿ

ಯುವತಿ ನಂಬಿ ಮದುವೆಯಾಟ ಆಡಿದ್ದ ಮಾಜಿ ಸನ್ಯಾಸಿ ಜೈಲು ಪಾಲಾಗಿದ್ದಾನೆ. ಮಠದಲ್ಲಿರಬೇಕಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀ ಜೈಲು ಪಾಲಾಗಿದ್ದಾನೆ. ಯುವತಿ ಶ್ಯಾಮಲ ಉಲ್ಟಾ ಹೊಡೆದು ಪೋಷಕರೊಂದಿಗೆ ಸಂಬಂದಿಕರ ಮನೆಗೆ ತೆರಳಿದ್ದಾಳೆ.

ಕಾಣೆಯಾಗಿದ್ದ ಸನ್ಯಾಸಿ ಸಂಸಾರಿಯಾಗಿ ಪತ್ತೆ..!

ಸ್ವಾಮೀಜಿಯನ್ನು ಕೋಲಾರದ ಉಪ ಕಾರಾಗೃಹಕ್ಕೆ ಕೊರೆದೊಯ್ಯಲಾಗಿದೆ. ಪೊಲೀಸರು ಗೌಪ್ಯ ಸ್ಥಳದಿಂದ ಸ್ವಾಮೀಯನ್ನು ರಾತ್ರಿ ಜೈಲಿಗೆ ಕಳುಹಿಸಲಿದ್ದಾರೆ. ಯುವತಿಗೆ ನಂಬಿಸಿ ವಂಚನೆ ಪ್ರಕರಣ, ಹಾಗೂ 420 ಕೇಸ್ ದಾಖಲಿಸಲಾಗಿದೆ. ಸ್ವಾಮಿಗೆ ಹಣಕೊಟ್ಟು ವಂಚನೆಗೊಳಗಾದ 9 ಜನರಿಂದ ಸ್ವಾಮಿ ವಿರುದ್ಧ ದೂರು ದಾಖಲಿಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರ್ತ್ ಡೇ ದಿನವೇ ಬಿಜೆಪಿ ಮುಖಂಡನ ಬರ್ಬರ ಹತ್ಯೆ

click me!