ಗ್ರಾಮಕ್ಕೆ ನುಗ್ಗಿ ಎಮ್ಮೆ, ಹಸುಗಳ ತುಳಿದು ಕೊಂದ ಆನೆ

Kannadaprabha News   | Asianet News
Published : Mar 06, 2020, 10:39 AM IST
ಗ್ರಾಮಕ್ಕೆ ನುಗ್ಗಿ ಎಮ್ಮೆ, ಹಸುಗಳ ತುಳಿದು ಕೊಂದ ಆನೆ

ಸಾರಾಂಶ

ಗ್ರಾಮಕ್ಕೆ ನುಗ್ಗಿದ ಕಾಡಾನೆಯೊಂದು ಹಸು ಎಮ್ಮೆಗಳನ್ನು ತುಳಿದು ಕೊಂದಿದೆ. ಕಾಡಾನೆ ಪುಂಡಾಟಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. 

ರಾಮನಗರ [ಮಾ.06]:  ಕಾಡಿನಿಂದ ನಾಡಿಗೆ ಬಂದ ಆನೆಯಿಂದು ಹಸು ಎಮ್ಮೆಗಳ ಮೇಲೆ ದಾಳಿ ಮಾಡಿ ತುಳಿದು ಕೊಂದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. 

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಸಮೀಪದ ಗ್ರಾಮಗಳಲ್ಲಿ ಪುಂಡಾನೆ ದಾಂಧಲೆ ಮಾಡಿದೆ. 

ಬೆಳಗ್ಗೆ 8 ಗಂಟೆ ಸುಮಾರಿಗೆ ಗ್ರಾಮಕ್ಕೆ ನುಗ್ಗಿದ ಆನೆ ಸಾಸಲಪುರದಲ್ಲಿ ಎರಡು ಹಸುಗಳನ್ನು ತುಳಿದು ಕೊಂದಿದೆ. ಮರದದೊಡ್ಡಿ ಗ್ರಾಮದಲ್ಲಿ ಎಮ್ಮೆಯೊಂದನ್ನು ತುಳಿದು ಕೊಂದಿದೆ. 

ಅಮ್ಮ ಮರಿಯಾನೆಗೆ ಜನ್ಮ ನೀಡಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾದಾಗ!...

ಅಲ್ಲದೇ ಮಲ್ಲೇಗೌಡನ ದೊಡ್ಡಿಯಲ್ಲಿ ಬೈಕ್ ಒಂದನ್ನು ಜಖಂಗೊಳಿಸಿದೆ. ಈ ವೇಳೆ ಸಾರ್ವಜನಿಕರು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಗಂಟೆಗೂ ಹೆಚ್ಚು ಕಾಲ ಹರಸಾಹಸ ಮಾಡಿದ್ದಾರೆ. 

ಆನೆ ಹಾವಳಿಗೆ ಗ್ರಾಮಸ್ಥರು ತತ್ತರಿಸಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ