ಒಂದೇ ವೇದಿಕೆಯಲ್ಲಿ ಮೂರು ಟಗರುಗಳು..!

Suvarna News   | Asianet News
Published : Jan 19, 2020, 02:51 PM IST
ಒಂದೇ ವೇದಿಕೆಯಲ್ಲಿ ಮೂರು ಟಗರುಗಳು..!

ಸಾರಾಂಶ

ಪರಸ್ಪರ ವಾಕ್ಸಮರ ನಡೆಸುತ್ತಲೇ ಇರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆ. ಎಸ್. ಈಶ್ವರಪ್ಪ ಹಾಗೂ ಎಚ್‌. ವಿಶ್ವನಾಥ್‌ ಅವರು ಮೈಸೂರಿನಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆ ಹಂಚಿಕೊಂಡಿದ್ದಷ್ಟೇ ಅಲ್ಲ ಮೂವರು ಜೊತೆಯಾಗಿ ದೀಪ ಬೆಳಗಿದ್ದಾರೆ.

ಮೈಸೂರು(ಜ.19): ಪರಸ್ಪರ ವಾಕ್ಸಮರ ನಡೆಸುತ್ತಲೇ ಇರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆ. ಎಸ್. ಈಶ್ವರಪ್ಪ ಹಾಗೂ ಎಚ್‌. ವಿಶ್ವನಾಥ್‌ ಅವರು ಮೈಸೂರಿನಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆ ಹಂಚಿಕೊಂಡಿದ್ದಷ್ಟೇ ಅಲ್ಲ ಮೂವರು ಜೊತೆಯಾಗಿ ದೀಪ ಬೆಳಗಿದ್ದಾರೆ.

ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಕುರುಬ ಸಂಘದಿಂದ ಆಯೋಜನೆಗೊಂಡಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಮೂರು ಟಗರುಗಳು ಒಂದಾಗಿದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ತ್ರಿಮೂರ್ತಿಗಳ ಸಮಾಗಮವಾಗಿದೆ. ಒಂದೇ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ ಹಾಗೂ ಹೆಚ್.ವಿಶ್ವನಾಥ್ ಭಾಗಿಯಾಗಿದ್ದಾರೆ.

17 ಜನರಿಗೂ ಸಚಿವ ಸ್ಥಾನ ಬೇಕು: ವಿಶ್ವನಾಥ್

ಮೈಸೂರು ಜಿಲ್ಲೆ ಕೆಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದ ವೇದಿಕೆಗೆ ಸಿದ್ದರಾಮಯ್ಯ ಹಾಗೂ ಕೆ.ಎಸ್.ಈಶ್ವರಪ್ಪ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ.

ಒಂದೇ ವೇದಿಕೆಯಲ್ಲಿ ರಾಜಕೀಯ ವೈರಿಗಳು ಒಂದಾಗಿದ್ದು, ಸಿದ್ದರಾಮಯ್ಯ- ವಿಶ್ವನಾಥ್- ಕೆ.ಎಸ್.ಈಶ್ವರಪ್ಪ ಆತ್ಮೀಯ ಮಾತುಕತೆ ನಡೆಸಿದ್ದಾರೆ. ನಾಯಕರು ಪರಸ್ಪರ ಕೈ ಹಿಡಿದು ದೀಪ ಬೆಳಗಿದ್ದಾರೆ. 

'ಬಿಜೆಪಿಯಲ್ಲಿ ಸಿಗೋ ಗೌರವ ಬೇರೆಡೆ ಸಿಕ್ತಿದ್ರೆ ಪಕ್ಷ ಬಿಡ್ತಿರ್ಲಿಲ್ಲ'..!

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!