ಭತ್ತದ ಗದ್ದೆಯೊಂದರಲ್ಲಿ ಭಾರೀ ಗಾತ್ರದ ಮೊಸಳೆಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಕೊಪ್ಪಳ [ಜ.19]: ಭತ್ತದ ಗದ್ದೆಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಮೊಸಳೆ ಕಂಡು ಜನರು ಭಯಗೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮೈಲಾಪುರದ ಭತ್ತದ ಗದ್ದೆಯಲ್ಲಿ ಕಂಡು ಬಂದಿದ್ದು, ತುಂಗಭದ್ರಾ ಎಡದಂಡೆ ಕಾಲುವೆ ಮುಖಾಂತರ ಮೊಸಳೆ ಇಲ್ಲಿಗೆ ಬಂದಿದೆ.
ಗ್ರಾಮದಿಂದ ಹೊರಗೆ ಇರುವ ಮಲ್ಲಿಕಾರ್ಜುನ ಗೌಡ ಎಂಬುವವರ ಭತ್ತದ ಗದ್ದೆಯಲ್ಲಿ ಮೊಸಳೆ ಕಂಡು ಬಂದಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡಲಾಗಿದೆ.
ಗವಿಮಠ ಶ್ರೀಗಳ ಕನಸು ನನಸು: ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ ಗ್ರಂಥಾಲಯ...
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.