ತಮಗೆ ಆಪ್ತ ಸಹಾಯಕ (ಪಿಎ) ಬೇಕೆಂದು ಬೇಡಿಕೆ ಇಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ

Published : Jul 05, 2021, 05:06 PM ISTUpdated : Jul 05, 2021, 05:17 PM IST
ತಮಗೆ ಆಪ್ತ ಸಹಾಯಕ (ಪಿಎ) ಬೇಕೆಂದು ಬೇಡಿಕೆ ಇಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಸಾರಾಂಶ

* ನನಗೆ ಆಪ್ತ ಸಹಾಯಕನ್ನು ನೇಮ‌ಕ ಮಾಡಿ ಎಂದು ಪತ್ರ ಬರೆದ ಗ್ರಾಪಂ ಅಧ್ಯಕ್ಷೆ * ಸಾಮಾನ್ಯ ಸಭೆಯಲ್ಲಿ ಆಪ್ತ ಸಹಾಯಕರಿಗೆ ಅವಕಾಶ ಕೊಡಿ ಎಂದು ಪತ್ರ * ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ರವಾನೆ

ಕೊಪ್ಪಳ, ಜುಲೈ.05): ಶಾಸಕರು, ಸಚಿವರು, ಸಿಎಂ, ಪಿಎಂ ಸೇರಿದಂತೆ ಐಎಎಸ್ ಹಾಗೂ ಐಪಿಎಸ್‌ಗಳಿಗೆ ಸರ್ಕಾರ ಆಪ್ತ (PA)  ಸಹಾಯಕರನ್ನ ನೇಮಕಗೊಳಿಸಿರುತ್ತೆ. ಅದರಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ತಮಗೂ ಆಪ್ತ ಸಹಾಯಕಬೇಕೆಂದು ಪತ್ರ ಬರೆದಿದ್ದಾರೆ.

ಹೌದು...ಅಚ್ಚರಿ ಎನ್ನಿಸಿದರೂ ಸತ್ಯ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಪಂ‌ ಅಧ್ಯಕ್ಷೆ ಶಾಂತಾ ಎನ್ನುವರು ತಮಗೆ ಆಪ್ತ ಸಹಾಯಕನ್ನು ನೇಮ‌ಕ ಮಾಡಿ ಎಂದು ಪತ್ರ ಬರೆದಿದ್ದಾರೆ. ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಕಳುಹಿಸಿದ್ದಾರೆ.

ಸಚಿವ ಶ್ರೀರಾಮುಲು ಖಾಸಗಿ ಪಿಎಗಳಿಗೂ ಸಿಸಿಬಿ ಬುಲಾವ್

ನಾನು ಅಷ್ಟೊಂದು ಸುಶಿಕ್ಷಿತಳಿಲ್ಲ,ಇಲಾಖೆ ಯೋಜನೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಈ ಕಾರಣಕ್ಕೆ ನನಗೆ ಆಪ್ತ ಸಹಾಯಕನ್ನ ನೇಮ‌ಕ ಮಾಡಿ. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಆಪ್ತ ಸಹಾಕಯರಿಗೆ ಭಾಗವಹಿಸಲು ಅವಕಾಶ ಮಾಡಿಕೊಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರದಿಂದ ನೇಮಕಗೊಂಡಿರುವ  ಆಪ್ತ ಸಹಾಯಕರನ್ನು ಕೆಲವರು ತಮ್ಮ ವೈಯಕ್ತಿಕ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಉದಾಹರಣೆಗೆ ಮಕ್ಕಳನ್ನ ಶಾಲೆ ಡ್ರಾಪ್ ಮಾಡುವುದು, ಹೆಂಡತಿಯನ್ನು ಶಾಪಿಂಗ್ ಅಂತ ಅದು ಇದು ಖರೀದಿಗೆ ಹೊರಗಡೆ ಕರೆದುಕೊಂಡು ಹೋಗಿದ್ದನ್ನು ನಾವು ನೋಡಿದ್ದೇವೆ. 

ಅದ್ರೆ, ಈ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು  ಕಷ್ಟವಾಗುತ್ತಿರುವುದರಿಂದ ಆಪ್ತ ಸಹಾಯಕ ನೇಮ‌ಕಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದೀಗ ಆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!