ಅನ್ಲಾಕ್ ಬೆನ್ನಲ್ಲೇ ಶಾಕ್ : BMTC ಟಿಕೆಟ್ ದರ ಏರಿಕೆ?

By Suvarna NewsFirst Published Jul 5, 2021, 1:51 PM IST
Highlights
  • ಅನ್ಲಾಕ್ ಘೋಷಣೆ ಬೆನ್ನಲ್ಲೇ  ಬಿಎಂಟಿಸಿ ಪ್ರಯಾಣಿಕರಿಗೆ ಬಿಗ್ ಶಾಕ್ 
  • ಟಿಕೆಟ್ ಹೆಚ್ಚಳದ ಬಗ್ಗೆ ಬಿಎಂಟಿಸಿ ಎಂಡಿ ಸಿ ಶಿಖಾ  ಸುಳಿವು 
  • ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದ ಬಿಎಂಟಿಸಿ ಎಂಡಿ ಶಿಖಾ 

ಬೆಂಗಳೂರು (ಜು.05):   ಅನ್ಲಾಕ್ ಘೋಷಣೆ ಬೆನ್ನಲ್ಲೇ  ಬಿಎಂಟಿಸಿ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಲಾಗಿದೆ.  ಟಿಕೆಟ್ ಹೆಚ್ಚಳದ ಬಗ್ಗೆ ಬಿಎಂಟಿಸಿ ಎಂಡಿ ಸಿ ಶಿಖಾ  ಸುಳಿವು ಕೊಟ್ಟಿದ್ದಾರೆ. 

ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಬಿಎಂಟಿಸಿ ಎಂಡಿ ಶಿಖಾ ಹೇಳಿದ್ದು,  ಸರ್ಕಾರಕ್ಕೆ ಟಿಕೆಟ್ ಹೆಚ್ಚಳದ ಬಗ್ಗೆ  ಪ್ರಸ್ತಾವನೆ ಸಲ್ಲಿಸಲು ಬಿಎಂಟಿಸಿ ತಯಾರಿ ನಡೆಸಿದೆ. ಅಲ್ಲದೇ   ಈ ವಾರದೊಳಗೆ ಸರ್ಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಲಾಗುತ್ತದೆ. 

ಇಂದಿನಿಂದ 5 ಸಾವಿರ ಬಿಎಂಟಿಸಿ ಕಾರ್ಯಾಚರಣೆ, ಸೇವಾ ಸಮಯ ಹೀಗಿರಲಿದೆ ...

ಶೇ. 20 ರಷ್ಟು ಟಿಕೆಟ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗುತ್ತದೆ.  ಕಳೆದ ಜನವರಿಯಲ್ಲಿ ಶೇ 20 ರಷ್ಟು ಟಿಕೆಟ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಬಿಎಂಟಿಸಿಗೆ  ಭಾರಿ ನಷ್ಟವಾಗಿದೆ. ಹಿನ್ನಲೆ ಮತ್ತೆ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ. 

ಅನ್ ಲಾಕ್ ಆದ ಬಳಿಕ ಎಲ್ಲಾ ಬಸ್ ಕಾರ್ಯಾಚರಣೆ ಯಿಂದ ನಿರ್ವಹಣೆ ವೆಚ್ಚ ಇನ್ನಷ್ಟು ಹೆಚ್ಚಳವಾಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ.  ಈ ವಾರದೊಳಗೆ ಮತ್ತೊಂದು ಪ್ರಸ್ತಾವನೆ ಕಳಿಸಿ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಖಾ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!