ಮೈಸೂರು : ಭತ್ತಕ್ಕೆ ಬೆಂಬಲ ಸಿಗದೆ ರೈತರು ಕಂಗಾಲು

By Kannadaprabha NewsFirst Published Jul 5, 2021, 2:54 PM IST
Highlights
  • ಕೆ.ಆರ್‌. ನಗರ ತಾಲೂಕು ಭತ್ತದ ಕಣಜವಾದರು ಭತ್ತಕ್ಕೆ ಬೆಂಬಲ ಬೆಲೆ ಸಿಗದೆ ರೈತರು ಕಂಗಲಾಗಿದ್ದಾರೆ
  • ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷರ ವಿಷಾದ
  • ಲಾಕ್‌ಡೌನ್‌ನಿಂದ ಕೃಷಿಯಲ್ಲಿ ರೈತರು ಸಾಕಷ್ಟುನಷ್ಟಅನುಭವಿಸಿದ್ದಾರೆ.

 ಸಾಲಿಗ್ರಾಮ (ಜು.05):  ಕೆ.ಆರ್‌. ನಗರ ತಾಲೂಕು ಭತ್ತದ ಕಣಜವಾದರು ಭತ್ತಕ್ಕೆ ಬೆಂಬಲ ಬೆಲೆ ಸಿಗದೆ ರೈತರು ಕಂಗಲಾಗಿದ್ದಾರೆ ಎಂದು ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ವಿಶ್ವಾಸ್‌ ವಿಷಾದ ವ್ಯಕ್ತಪಡಿಸಿದರು.

ತಾಲೂಕು ರೈತ ಸಂಘದ ಮುಖಂಡರೊಂದಿಗೆ ಸಂಘದ ನಡೆ ನಷ್ಟವಾದ ರೈತರ ಜಮೀನಿನ ಕಡೆ ಎಂಬ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಸಮೀಪದ ಅಂಕನಹಳ್ಳಿ ರೈತ ತಿಮ್ಮಪ್ಪ ಅವರ ಜಮೀನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

'ಭತ್ತ, ರಾಗಿಗೆ ಬೆಂಬಲ ಬೆಲೆ ಅಡಿ ಖರೀದಿ ಕೇಂದ್ರ ಸ್ಥಾಪನೆ'

ಈ ವೇಳೆ ಅಂಕನಹಳ್ಳಿ ತಿಮ್ಮಪ್ಪ ಮಾತನಾಡಿ, ತಾಲ್ಲೂನಲ್ಲಿ ರೈತರ ಬಹು ಮುಖ್ಯ ಬೆಳೆ ಭತ್ತದ ಬೆಳೆ ಇದರಿಂದಲೇ ರೈತ ಕುಟುಂಬದ ಜೀವನ ನಡೆಯುತ್ತಿರುವುದು. ಆದರೆ ಲಾಕ್‌ಡೌನ್‌ನಿಂದ ಕೃಷಿಯಲ್ಲಿ ರೈತರು ಸಾಕಷ್ಟುನಷ್ಟಅನುಭವಿಸಿದ್ದಾರೆ. ಆದರೂ ಸ್ವಲ್ಪ ಮಟ್ಟಿಗೆ ಕೃಷಿ ಕೈ ಹಿಡಿದಿದೆ ಫಸಲು ಕೈಗೆ ಬಂದಿದ್ದು ಮಾರಾಟ ಮಾಡಲು ಬೆಂಬಲ ಬೆಲೆಯಿಲ್ಲದೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಬೆಳೆಸಾಲಕ್ಕೆ ರೈತರ ಸೆಲ್ಫಿ, ವಂಶಾವಳಿ ಕಡ್ಡಾಯ..! ..

ಸರ್ಕಾರ ಜ್ಯೋತಿ ಭತ್ತ ಸೇರಿದಂತೆ ಇನ್ನಿತರ ತಳಿಯ ಭತ್ತದ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರಾಜ್ಯದಲ್ಲಿ ಕೋವಿಡ್‌ ನಿಂದ ಮೃತಪಟ್ಟರೈತ ಕುಟುಂಬಗಳಿಗೆ 5 ಲಕ್ಷ ಪರಿಹಾರವನ್ನು ನೀಡಬೇಕು. ರೈತರ ಮಕ್ಕಳಿಗೆ ಉದ್ಯೋಗದಲ್ಲಿ ರೈತ ಮೀಸಲಾತಿಯನ್ನು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.

ಕೆ.ಆರ್‌. ನಗರದಲ್ಲಿ ನಿರಂತರವಾಗಿ ಭತ್ತ ಖರೀದಿ ಮಾಡಿಕೊಳ್ಳುವ ಕೇಂದ್ರವನ್ನು ಸ್ಥಾಪಿಸಬೇಕು. ನಿಗದಿತ ಬೆಂಬಲ ಬೆಲೆಯನ್ನು ನೀಡಬೇಕು. ರೈತರಿಗೆ ಉಚಿತ ಬಿತ್ತ ಬೀಜಗಳನ್ನು ಸರ್ಕಾರದಿಂದ ವಿತರಿಸಬೇಕು. ಕೂಡಲೇ ತಾಲೂಕು ಮತ್ತು ಜಿಲ್ಲಾ ಅಧಿಕಾರಿಗಳು ನಮ್ಮ ರಾಜ್ಯದ ಭತ್ತವನ್ನು ಬೇರೆ ರಾಜ್ಯಕ್ಕೆ ರಫ್ತಾಗುವುದನ್ನು ನಿಲ್ಲಿಸಿ ಇಲ್ಲಿಯ ಜನರಿಗೆ ಹಂಚುವ ಕೆಲಸ ಆಗಬೇಕು ಎಂದರು.

ಸಂಘದ ಶಿವಣ್ಣ, ಶಿವರಾಜ್‌, ಜನಾರ್ಧನ್‌, ರಂಗಸ್ವಾಮಿ, ಆನಂದ, ರಾಮಚಂದ್ರ, ಸುರೇಶ್‌, ಕೃಷ್ಣೇಗೌಡ, ದಿನೇಶ್‌, ರಾಮು ಇದ್ದರು.

click me!