ಬೇಡಿಕೆ ಇಳಿಕೆ: ಕೋಲಾರದ ಟೊಮೊಟೊ ಬೆಳಗಾರರಿಗೆ ಆತಂಕ.!

By Ravi Janekal  |  First Published Jun 17, 2023, 2:36 PM IST

ಅದು ಏಷಿಯಾದ 2ನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ.ಅಲ್ಲಿಂದ ಇಡೀ ದೇಶ ಹಾಗೂ ಹೊರ ರಾಜ್ಯಕ್ಕೂ ಟೊಮೊಟೊ ರಫ್ತು ಆಗುತ್ತೆ. ಆದ್ರೆ ಕಳೆದ ಎರಡು ವರ್ಷಗಳಿಂದ ಅಲ್ಲಿ ಬೆಳೆಯುವ ಟೊಮೊಟೊಗೆ ಬೇಡಿಕೆ ಕಡಿಮೆ ಆಗಿದ್ದು,ರೈತ ವರ್ಗಕ್ಕೆ ಸಾಕಷ್ಟು ಆತಂಕ ಎದುರಾಗಿದೆ.ಹಾಕಿರೋ ಬಂಡವಾಳವು ಸಿಗದೇ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಆ ಕುರಿತ ಮಾಹಿತಿ ತೋರಿಸ್ತೀವಿ ನೋಡಿ.


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಜೂ.17) : ಅದು ಏಷಿಯಾದ 2ನೇ ಅತೀ ದೊಡ್ಡ ಟೊಮೊಟೊ ಮಾರುಕಟ್ಟೆ.ಅಲ್ಲಿಂದ ಇಡೀ ದೇಶ ಹಾಗೂ ಹೊರ ರಾಜ್ಯಕ್ಕೂ ಟೊಮೊಟೊ ರಫ್ತು ಆಗುತ್ತೆ. ಆದ್ರೆ ಕಳೆದ ಎರಡು ವರ್ಷಗಳಿಂದ ಅಲ್ಲಿ ಬೆಳೆಯುವ ಟೊಮೊಟೊಗೆ ಬೇಡಿಕೆ ಕಡಿಮೆ ಆಗಿದ್ದು,ರೈತ ವರ್ಗಕ್ಕೆ ಸಾಕಷ್ಟು ಆತಂಕ ಎದುರಾಗಿದೆ.ಹಾಕಿರೋ ಬಂಡವಾಳವು ಸಿಗದೇ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಆ ಕುರಿತ ಮಾಹಿತಿ ತೋರಿಸ್ತೀವಿ ನೋಡಿ.

Latest Videos

undefined

ಎರಡು ವರ್ಷಗಳ ಹಿಂದೆ ಉತ್ತಮವಾಗಿ ಟೊಮೊಟೊ ಬೆಳೆದಿರುವ ರೈತ.ಈಗ ಬೆಳೆ ಇಲ್ಲದೆ ಆತಂಕದಲ್ಲಿರುವ ಅದೇ ರೈತ.ಹಾಕಿರೋ ಬಂಡವಾಳವಿಲ್ಲದೆ ಕಂಗಾಲಾಗಿರುವ ಟೊಮೊಟೊ ಬೆಳೆಗಾರರು.ಅಂದಾಹಗೆ ಇಡೀ ದೇಶ ಹಾಗೂ ಹೊರ ದೇಶಕ್ಕೂ ಉತ್ತಮವಾದ ಟೊಮೊಟೊ ಕೊಡ್ತಿದ್ದ ಕೋಲಾರ ಜಿಲ್ಲೆಯ ರೈತರ ಕಷ್ಟ ಕಳೆದ ಎರಡು ವರ್ಷಗಳಿಂದ ಹೇಳತೀರದಾಗಿದೆ.ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಇದ್ರೂ ಸಹ ರೈತರಿಗೆ ಮಾತ್ರ ಹಾಕಿರೋ ಬಂಡವಾಳ ಮಾತ್ರ ಬರ್ತಿಲ್ಲ,ಇದಕ್ಕೆ ಕಾರಣ ಜಿಲ್ಲೆಯಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯ ಹಾಗೂ ಬಿಳಿ ಸೊಳ್ಳೆಯಂತೆ ಕಾಣಿಸಿಕೊಂಡಿರುವ ಕೀಟಬಾದೆ ಸಮಸ್ಯೆ.ಹೌದು ಟೊಮೊಟೊ ಬೆಳೆಗೆ ಹೆಸರುವಾಸಿ ಆಗಿರುವ ಕೋಲಾರ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಇಳುವರಿ ಆಗ್ತಿಲ್ಲ.ಮೊದಲು ಇದೇ ತಿಂಗಳಲ್ಲಿ 26 ಸಾವಿರ ಕ್ವಿಂಟಲ್ ಗಿಂತ ಹೆಚ್ಚಿಗೆ ಎಪಿಎಂಸಿ ಮಾರುಕಟ್ಟೆಗೆ ಟೊಮೊಟೊ ಬರ್ತಿತ್ತು ಆಗ ಪ್ರತಿ 15 ಕೆಜಿಯ ಬಾಕ್ಸ್ ನ ಬೆಲೆ ಕೇವಲ 40 ರಿಂದ 150 ರುಪಾಯಿವರೆಗೂ ಮಾರಾಟವಾಗ್ತಿತ್ತು.ಆದ್ರೆ ಕಳೆದ ಎರಡು ವರ್ಷಗಳಿಂದ ಕೇವಲ 12 ಸಾವಿರ ಕ್ವಿಂಟಲ್ ನಷ್ಟ ಮಾತ್ರ ಟೊಮೊಟೊ ಬರ್ತಿದೆ,ಈಗಾಗಿ ಬೇಡಿಕೆ ಹೆಚ್ಚಾಗಿರೋದ್ರಿಂದ ಬರೋಬರಿ 200 ರಿಂದ 550 ರುಪಾಯಿವರೆಗೂ ಮಾರಾಟವಾಗ್ತಿದೆ.ಕಳಪೆ ಗುಣಮಟ್ಟದ 15 ಕೆಜಿ ಟೊಮೊಟೊ ಬಾಕ್ಸ್ ಗೆ 200 ರುಪಾಯಿ ಹಾಗೂ ಉತ್ತಮ ಗುಣಮಟ್ಟದ ಬಾಕ್ಸ್ ಗೆ 550 ವರೆಗೂ ಮಾರಾಟವಾಗ್ತಿದೆ.ಆದ್ರೂ ಸಹ ಕೋಲಾರ ಜಿಲ್ಲೆಯ ರೈತರಿಗೆ ಮಾತ್ರ ಭಾರಿ ಪ್ರಮಾಣದಲ್ಲಿ ನಷ್ಟವಾಗಿದ್ದು ಹಾಕಿರೋ ಬಂಡವಾಳ ಸಹ ಬರ್ತಿಲ್ಲ.ಇದಕ್ಕೆ ಕಾರಣ ಭಾರಿ ಪ್ರಮಾಣದಲ್ಲಿ ಟೊಮೊಟೊ ಸಸಿ ಹಾಕಿದ್ರು ಸಹ ಹೆಚ್ಚಿಗೆ ಇಳುವರಿ ಬರದೇ ಇರೋದು.ಆದ್ರೆ ಕೋಲಾರ ಜಿಲ್ಲೆ ಬಿಟ್ಟು ಚಿತ್ರದುರ್ಗ,ಚಳ್ಳಕೆರೆ,ಆಂಧ್ರದ ಚಿತ್ತೂರು ಹಾಗೂ ಮದನಪಲ್ಲಿ ಭಾಗದಲ್ಲಿ ಬೆಳೆದ ಟೊಮೊಟೊ ಇಳುವರಿ ಹೆಚ್ಚಿಗೆ ಬರ್ತಿದ್ದು,ಅಲ್ಲಿನ ಟೊಮೊಟೊಗೆ ಭಾರಿ ಬೇಡಿಗೆ ಉಂಟಾಗಿದೆ.

ಟೋಮ್ಯಾಟೋ ದರಕ್ಕೆ ಜನ ಸುಸ್ತು, ಕೃಷಿ ಕಾಯ್ದೆ ಹಿಂಪಡೆಯಲು ಸಂಪುಟ ಅಸ್ತು; ನ.25ರ ಟಾಪ್ 10 ಸುದ್ದಿ!

ಇನ್ನು ಕೋಲಾರ ಜಿಲ್ಲೆಯಲ್ಲಿ ಮಾತ್ರ ಎರಡು ವರ್ಷಗಳಿಂದ ಇಳುವರಿ ಕಡಿಮೆ ಆಗೋದಕ್ಕೆ ಸಾಕಷ್ಟು ಕಾರಣಗಳು ಇದೆ.ಪ್ರಮುಖವಾಗಿ ಇತ್ತೀಚಿಗೆ ಕಾಣಿಸಿಕೊಂಡಿರುವ ಬಿಳಿ ಹುಳಗಳ ಕಾಟದ ಜೊತೆ ಹವಾಮಾನ ವೈಪರಿತ್ಯ ಪ್ರಮುಖ ಕಾರಣವಾಗಿದೆ.ಮೊದಲು ವಾರಕ್ಕೆ ಎರಡು ಬಾರಿ ಕಿಟನಾಶಕ ಔಷಧಿ ಸಿಂಪಡಣೆ ಮಾಡ್ತಿದ್ದ ರೈತರು ಈಗ ದಿನ ಬಿಟ್ಟು ದಿನ ಔಷಧಿ ಸಿಂಪಡಣೆ ಮಾಡುವ ಅನುವಾರ್ಯತೆ ಎದುರಾಗಿದೆ.ಇದರಿಂದ ರೈತರಿಗೆ ಹೆಚ್ಚುವರಿ ಹಣ ವ್ಯಯ ಆಗ್ತಿದ್ದು, ಅದರ ತಕ್ಕಂತೆ ಇಳುವರಿ ಸಹ ಸರಿಯಾಗಿ ಬರ್ತಿಲ್ಲ.ಮೊದಲು ಒಮ್ಮೆ ಸಸಿ ನಾಟಿ ಮಾಡಿದ್ರೆ ಕನಿಷ್ಠ 10 ರಿಂದ 15 ಬಾರಿ ಆದ್ರೂ ಫಸಲು ಕೊಯ್ಯುತ್ತಿದ್ರು, ಈಗ ಕೇವಲ ಮೂರು ಬಾರಿ ಕೊಯ್ಯುವಷ್ಟರಲ್ಲಿ ಗುಣಮಟ್ಟ ಕಡಿಮೆ ಆಗ್ತಿದೆ.ಇದರ ನಡುವೆ ಕಳೆದ ವರ್ಷವೂ ಸಹ ಇದೆ ಪರಿಸ್ಥಿತಿ ಉಂಟಾಗಿ ರೈತರಿಗೆ ಭಾರಿ ನಷ್ಟವಾಗಿತ್ತು,ಹಾಕಿರೋ ಬಂಡವಾಳ ಸಹ ಬರದೇ ನಷ್ಟ ಅನುಭವಿಸಿದ್ರು.ಆಗಾಗಿ ಈ ವರ್ಷ ಬಹಳಷ್ಟು ರೈತರು ಟೊಮೊಟೊ ಬೆಳೆ ಬೆಳೆದಿಲ್ಲ.ಇನ್ನು ಎರಡು ವರ್ಷಗಳಿಂದ ಟೊಮೊಟೊ ಬೆಳೆಯೋದಕ್ಕೆ ಹೆಚ್ಚಿಗೆ ಖರ್ಚು ಬರ್ತಿದೆ.ಮೊದಲು ಎಕರೆಗೆ 1 ರಿಂದ 1.5 ಲಕ್ಷ ಸಾಗ್ತಿತ್ತು,ಈಗ ಅದು ದುಪ್ಪಟ್ಟು ಆಗ್ತಿದೆ.ಇನ್ನು ಬೆಂಗಳೂರಿನ ಕೊಳಚೆ ನೀರನ್ನು ಶುದ್ಧಿಕರಣ ಮಾಡಿ ಕೋಲಾರದ ಕೆರೆ ತುಂಬಿಸಿರುವ ಕೆ.ಸಿ ವ್ಯಾಲಿ ಯೋಜನೆಯಿಂದಲೂ ಈ ರೀತಿ ಸಮಸ್ಯೆ ಆಗಿರಬಹುದು ಅಂತ ಹಲವಾರು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಒಂದೂ ಕಾಲದಲ್ಲೂ ಇಡೀ ದೇಶ ಹಾಗೂ ಹೊರ ದೇಶದಲ್ಲಿ ಕೋಲಾರದ ಟೋಮೋಟೋಗೆ ಭಾರಿ ಬೇಡಿಕೆ ಇತ್ತು.ಇದೀಗ ಪರಿಸ್ಥಿತಿ ವಿರುದ್ದವಾಗಿದ್ದು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಟೊಮೊಟೊ ಬರ್ತಿದೆ.ಇದಕೆಲ್ಲಾ ಕಾರಣ ಕೀಟ ಬಾದೇನಾ ಅಥವಾ ಕೆಸಿ ವ್ಯಾಲಿ ನೀರಿನ ಪ್ರಭಾವನ ಅನ್ನೋದನ್ನು ರೈತರಿಗೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ತಿಳಿಸಬೇಕಿದೆ.ಇಲ್ಲವಾದ್ರೆ ಟೊಮೊಟೊ ಬೆಳೆಯಿಂದ ರೈತರು ದೂರ ಉಳಿಯೋದ್ರಲ್ಲಿ ಅನುಮಾನವಿಲ್ಲ.

ಏರಿಕೆ ಕಂಡಿದ್ದ ಟೊಮೇಟೋ ಬೆಲೆ ದಿಢೀರ್‌ ಕುಸಿತ

click me!