ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ: ಇನ್ನೂ 5 ದಿನ ಮಳೆ..!

By BK Ashwin  |  First Published Mar 18, 2023, 11:14 AM IST

ಬೆಂಗಳೂರಿನಲ್ಲಿ ಶುಕ್ರವಾರ ಸಹ ಬಹುತೇಕ ಕಡೆ ಮಳೆ ಸುರಿದಿದ್ದು, ಯಶವಂತಪುರ, ಮೇಖ್ರಿ ಸರ್ಕಲ್, ಸುಂಕದಕಟ್ಟೆ, ವಿಧಾನಸೌಧ, ಕಾರ್ಪೋರೇಷನ್, ಹಲಸೂರು ಪ್ರದೇಶಗಳಲ್ಲಿ ಮಳೆಯಾಗಿದೆ. ಗುಡುಗು, ಮಿಂಚಿನೊಂದಿಗೆ ನಿನ್ನೆ ಸಂಜೆ ನಗರದ ಹಲವೆಡೆ ಮಳೆರಾಯ ತನ್ನ ಅಬ್ಬರ ಮುಂದುವರಿಸಿದ್ದಾನೆ.


ಬೆಂಗಳೂರು (ಮಾರ್ಚ್‌ 18, 2023): ರಾಜ್ಯದಲ್ಲಿ ಕಳೆದ 4 - 5 ದಿನಗಳಿಂದ ಮಳೆ ಸುರಿಯುತ್ತಿದ್ದು, ರಾಜ್ಯ ರಾಜಧಾನಿಯಲ್ಲೂ ಸಹ ಗುರುವಾರ ಹಾಗೂ ಶುಕ್ರವಾರ ಮಳೆಯ ಸಿಂಚನವಾಗಿದೆ. ಮಾರ್ಚ್‌ 16ರ ಗುರುವಾರ ಬೆಂಗಳೂರಲ್ಲಿ ಈ ವರ್ಷದ ಮೊದಲ ಮಳೆ ಬಿದ್ದಿದ್ದು, ಶುಕ್ರವಾರವೂ ನಗರದ ವಿವಿಧ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇದೇ ರೀತಿ, ಇನ್ನೂ 2 ದಿನ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಬರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ಕರಾವಳಿ (Coastal) ಮತ್ತು ಉತ್ತರ ಒಳನಾಡಿನಲ್ಲಿ ಸುಳಿಗಾಳಿ ಹಿನ್ನೆಲೆ ನಗರದಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆ (Rain) ಸಾಧ್ಯತೆ ಇದೆ. ಬೆಂಗಳೂರು ನಗರ (Bengaluru City) ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ (Rural Areas) ಮೋಡ (Cloud) ಮುಸುಕಿನ ವಾತಾವರಣವಿರಲಿದೆ. ಇದರ ಜತೆಗೆ ಗುಡುಗು ಮತ್ತು ಮಿಂಚಿನ ಮಳೆಯ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ಅಲ್ಲದೆ, ಕರಾವಳಿಯಲ್ಲಿ 5 ದಿನ, ಉತ್ತರ ಒಳನಾಡಿನಲ್ಲಿ 3 ದಿನ ಸಾಧಾರಣ ಮಳೆಯಾಗಲಿದೆ. ತಮಿಳುನಾಡು (Tamil Nadu),ಮಧ್ಯಪ್ರದೇಶ (Madhya Pradesh), ಆಂಧ್ರ (Andhra Pradesh), ತೆಲಂಗಾಣ (Telangana),  ಮಹಾರಾಷ್ಟ್ರ (Maharashtra) ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದೂ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. 

Tap to resize

Latest Videos

ಇದನ್ನು ಓದಿ: ಬಿಸಿಲಿನ ಬೇಗೆಯಿಂದ ಬಳಲುತ್ತಿರುವವರಿಗೆ ಗುಡ್‌ ನ್ಯೂಸ್‌: ರಾಜ್ಯದಲ್ಲಿ ಇಂದಿನಿಂದ 5 ದಿನ ಮಳೆ..!

ನಗರದಲ್ಲಿ ವರುಣನ ಆರ್ಭಟ
ಇನ್ನೊಂದೆಡೆ ಬೆಂಗಳೂರಿನಲ್ಲಿ ಶುಕ್ರವಾರ ಸಹ ಬಹುತೇಕ ಕಡೆ ಮಳೆ ಸುರಿದಿದ್ದು, ಯಶವಂತಪುರ, ಮೇಖ್ರಿ ಸರ್ಕಲ್, ಸುಂಕದಕಟ್ಟೆ, ವಿಧಾನಸೌಧ, ಕಾರ್ಪೋರೇಷನ್, ಹಲಸೂರು ಪ್ರದೇಶಗಳಲ್ಲಿ ಮಳೆಯಾಗಿದೆ. ಗುಡುಗು, ಮಿಂಚಿನೊಂದಿಗೆ ನಿನ್ನೆ ಸಂಜೆ ನಗರದ ಹಲವೆಡೆ ಮಳೆರಾಯ ತನ್ನ ಅಬ್ಬರ ಮುಂದುವರಿಸಿದ್ದಾನೆ.

ಈ ಮಧ್ಯೆ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆಯ ಪ್ರಮಾಣ ಅನ್ನೋದನ್ನ ನೋಡೋದಾದ್ರೆ‌‌.. ವರ್ತೂರು - 35 ಮಿ.ಮೀ ಮಳೆ, HAL -  29 ಮಿ.ಮೀ ಮಳೆ, ಹಗದೂರು - 26 ಮಿ.ಮೀ ಮಳೆ, ಗರುಡಾಚಾರ್ ಪಾಳ್ಯ - 24 ಮಿ.ಮೀ.ಮಳೆ, ಗೊಲ್ಲಹಳ್ಳಿ - 20 ಮಿ.ಮೀ ಮಳೆ, ಕೋನೇನ ಅಗ್ರಹಾರ, ಮಾರತ್‌ಹಳ್ಳಿ, ಬಿಳೇಕಹಳ್ಳಿ,ವಿದ್ಯಾಪೀಠ, ಆರ್.ಆರ್.ನಗರ, ಹೆಮ್ಮಿಗೆಪುರದಲ್ಲಿ 16 ಮಿ.ಮೀ ಮಳೆ ದಾಖಲಾಗಿದೆ. ಅಲ್ಲದೆ, ಕೆಂಗೇರಿ ಹಾಗೂ ಶ್ರೀನಗರದಲ್ಲಿ 15 ಮಿ.ಮೀ ಮಳೆಯಾಗಿದ್ದರೆ, ಕೋರಮಂಗಲ, ಬೊಮ್ಮನಹಳ್ಳಿ, ಬೇಗೂರಿನಲ್ಲಿ 10 ಮಿ.ಮೀ. ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ಒಟ್ಟಾರೆ, ವರ್ತೂರು ಭಾಗದಲ್ಲಿ ರಾಜ್ಯ ರಾಜಧಾನಿಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಇದೇ ರೀತಿ ಇನ್ನೂ 2 ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಇದನ್ನೂ ಓದಿ; ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಓರ್ವ ಬಲಿ

click me!