ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರವನ್ನು ಕಲ್ಪಿಸಿಕೊಳ್ಳಲಾಗದ ರೀತಿಯಲ್ಲಿ ಅಗಾಧವಾಗಿ ಅಭಿವೃದ್ಧಿಗೊಳಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಅಸಾಧ್ಯವಾದ ಹಲವು ಸೌಲಭ್ಯವನ್ನು ಶಿಕಾರಿಪುರಕ್ಕೆ ಒದಗಿಸಲಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಶಿಕಾರಿಪುರ ಮಾ.(18) : ತಾಲೂಕಿನಲ್ಲಿ ಆರೋಗ್ಯ ಕ್ಷೇತ್ರವನ್ನು ಕಲ್ಪಿಸಿಕೊಳ್ಳಲಾಗದ ರೀತಿಯಲ್ಲಿ ಅಗಾಧವಾಗಿ ಅಭಿವೃದ್ಧಿಗೊಳಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಅಸಾಧ್ಯವಾದ ಹಲವು ಸೌಲಭ್ಯವನ್ನು ಶಿಕಾರಿಪುರಕ್ಕೆ ಒದಗಿಸಲಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ(BS Yadiyurappa) ಹೇಳಿದರು.
ಶುಕ್ರವಾರ ಪಟ್ಟಣದ ಕೆಎಚ್‌ಬಿ ಬಡಾವಣೆಯಲ್ಲಿ ನಿರ್ಮಾಣವಾದ ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹೆಚ್ಚಿನ ಮಹತ್ವ ನೀಡಿದ್ದು, ಈ ದಿಸೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಕೇಸರಿ ಕೋಟೆಯಲ್ಲಿ ದಾಯಾದಿ ಕಲಹ,ಶಿಸ್ತಿನ ಪಕ್ಷದಲ್ಲಿ ಇದೆಂಥಾ ಅಂತರ್ಯುದ್ಧ..?
ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಕಲ್ಪಿಸಿಕೊಳ್ಳಲಾಗದ ರೀತಿಯಲ್ಲಿ ಅಗಾಧ ಅಭಿವೃದ್ಧಿ ಹೊಂದಿರುವ ಆಸ್ಪತ್ರೆಯ ಸಂಪೂರ್ಣ ಪ್ರಯೋಜನ ಜನತೆಗೆ ತಲುಪಬೇಕು. ಇದರಿಂದ ಮಾತ್ರ ಸಾರ್ಥಕತೆ ದೊರೆಯಲಿದೆ ಎಂದು ತಿಳಿಸಿದರು.
ಸಂಸದ ರಾಘವೇಂದ್ರ (MP BY Raghavendra)ಮಾತನಾಡಿ, ಕೋವಿಡ್(Covid-19) ಮಹಾಮಾರಿ ಸಮುದಾಯಕ್ಕೆ ಅಪ್ಪಳಿಸಿದ ಸಂಕಷ್ಟದ ಸಂದರ್ಭದಲ್ಲಿ ವೈದ್ಯರು, ಸಿಬ್ಬಂದಿ ಜೀವದ ಹಂಗು ತೊರೆದು ನಾಡಿನ ಜನತೆಯ ಜೀವ ಉಳಿಸುವ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಂಡ ಕಾಳಜಿ ಸಮುದಾಯ ಮರೆಯಲು ಸಾಧ್ಯವಿಲ್ಲ. ಆಸ್ಪತ್ರೆಸಹಿತ ಜನತೆಗೆ ಆರೋಗ್ಯ ಸೇವೆ ನೀಡುವ ಪ್ರತಿಯೊಂದು ಸ್ಥಳ ದೇವಸ್ಥಾನಕ್ಕೆ ಸಮಾನವಾಗಿದೆ. ರೋಗಿಗಳು ಗುಣಮುಖರಾದ ನಂತರ ಹೂವು ಹಣ್ಣು ನೀಡಿ, ನಿರ್ಮಲ ಹೃದಯದಿಂದ ವೈದ್ಯ ಸಿಬ್ಬಂದಿಯನ್ನು ಹಾರೈಸಲಿದ್ದಾರೆ. ಅವರ ಹಾರೈಕೆ ಎಲ್ಲರಿಗೂ ದೊರೆಯಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ವೈದ್ಯ-ಸಿಬ್ಬಂದಿ ಸೇವೆ ಹೆಚ್ಚು ಮಹತ್ವವಾಗಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಆರೋಗ್ಯ ಕ್ಷೇತ್ರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಜಿಲ್ಲಾ ಕೇಂದ್ರಕ್ಕೆ ದೊರೆಯುವ ಸೌಲಭ್ಯದ ಜತೆಗೆ ಹೆಚ್ಚು ಸೌಲಭ್ಯ ತಾಲೂಕು ಕೇಂದ್ರಕ್ಕೆ ಕಲ್ಪಿಸಿಕೊಡಲಾಗಿದೆ. ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆರಂಭದಿಂದ ಒಟ್ಟು 450ಕ್ಕೂ ಹೆಚ್ಚು ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಮೆಡಿಕಲ್ ಕಾಲೇಜಿಗೆ ಸಮಾನವಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
Karnataka election 2023: ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರದ ಚುಕ್ಕಾಣಿ: ಬಿಎಸ್‌ವೈ ವಿಶ್ವಾಸ
ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎಚ್.ಟಿ. ಬಳಿಗಾರ್, ಎಂಸಿಎ ನಿರ್ದೇಶಕ ವಸಂತಗೌಡ, ದೇವರಾಜ್ ಅರಸು ಅಭಿವೃದ್ಧಿ ನಿಗಮದ ನಿರ್ದೇಶಕ ಹಾಲಪ್ಪ ಭದ್ರಾಪುರ, ಪುರಸಭಾಧ್ಯಕ್ಷೆ ರೇಖಾಬಾಯಿ, ಸದಸ್ಯೆ ರೂಪಕಲಾ ಹೆಗ್ಡೆ, ಆರೋಗ್ಯ ಇಲಾಖೆ ವಿಭಾಗಮಟ್ಟದ ಅಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಡಾ. ನಾಗರಾಜ ನಾಯ್ಕ, ತಾಲೂಕು ವೈದ್ಯಾಧಿಕಾರಿ ಡಾ.ನವೀದ್ ಖಾನ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಿವಾನಂದ್, ಡಾ.ಸ್ವಾತಿ, ಎನ್.ವಿ. ಸುರೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಿವಪ್ಪ, ಎಂಜಿನಿಯರ್ ಮಂಜುನಾಥ್, ರಾಜಲಕ್ಷ್ಮಿ, ಜ್ಯೋತಿ ಮಲ್ಲಣ್ಣಾರ್ಯ ಸಹಿತ ವೈದ್ಯ ಸಿಬ್ಬಂದಿ ಉಪಸ್ಥಿತರಿದ್ದರು.